News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

100ನೇ ʼಮೇಡ್‌ ಇನ್‌ ಇಂಡಿಯಾʼ ಎಲೆಕ್ಟ್ರಿಕ್ ಲೋಕೋಮೋಟಿವ್ ಪೂರೈಸಿದ ಅಲ್ಸ್ಟೋಮ್

ನವದೆಹಲಿ: ಅಲ್ಸ್ಟೋಮ್  25 ಸಾವಿರ ಕೋಟಿ ರೂಪಾಯಿಗಳ ಒಪ್ಪಂದದ ಭಾಗವಾಗಿ ಭಾರತೀಯ ರೈಲ್ವೆಗೆ 100 ನೇ ಎಲೆಕ್ಟ್ರಿಕ್ ಲೋಕೋಮೋಟಿವ್ ಅನ್ನು ತಯಾರಿಸಿ ಸರಬರಾಜು ಮಾಡಿದೆ.

ಉತ್ಪಾದನಾ ಕಾರ್ಯಾಚರಣೆ ಕಂಪನಿ‌ ಅಲ್ಸ್ಟೋಮ್  ಮತ್ತು ಭಾರತೀಯ ರೈಲ್ವೆ 2015 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು, ಇದು ಜಂಟಿ ಉದ್ಯಮವನ್ನು ರಚಿಸಲು ಕಾರಣವಾಯಿತು. ಇದು ರೈಲ್ವೆಯ ಅತಿದೊಡ್ಡ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಯೋಜನೆಯಾಗಿದೆ.

ಇದರಂತೆ ಸರಕು ಸೇವೆಗಳಿಗೆ ಬಳಸಲಾಗುವ 12,000 (9 ಮೆಗಾವ್ಯಾಟ್) ನ 800 ಸಂಪೂರ್ಣ ವಿದ್ಯುತ್-ಚಾಲಿತ ಡಬಲ್-ಸೆಕ್ಷನ್ ಲೋಕೋಮೋಟಿವ್‌ಗಳನ್ನು  ಆಲ್ಸ್ಟೋಮ್ ರೈಲ್ವೆಗೆ ತಲುಪಿಸುತ್ತಿದೆ. ಇದು ಗಂಟೆಗೆ 120 ಕಿ.ಮೀ ವೇಗದಲ್ಲಿ 6,000 ಟನ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ಗಳನ್ನು (ಡಿಎಫ್‌ಸಿ) ಒಳಗೊಂಡಿರುವ ಪ್ರಮುಖ ಸರಕು ಮಾರ್ಗಗಳಲ್ಲಿನ ಕಾರ್ಯಾಚರಣೆಗೆ ನಿಯೋಜನೆಗೊಳ್ಳಲಿದೆ.

ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳು 2020 ರ ಡಿಸೆಂಬರ್‌ನಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಮತ್ತು ಔಷಧೀಯ ಉತ್ಪನ್ನಗಳು, ಆಹಾರ ಧಾನ್ಯಗಳು, ರಸಗೊಬ್ಬರಗಳು, ಕಲ್ಲಿದ್ದಲು, ಸಿಮೆಂಟ್, ಖನಿಜಗಳು, ಪೋಸ್ಟ್ / ಪಾರ್ಸೆಲ್‌ಗಳು 18 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಲಿಸುವ ಕೆಲವು ಅವಿಭಾಜ್ಯ ಸರಕುಗಳಾಗಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top