ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್. ಮಂಗಳವಾರ ಹಿಂದಿಯಲ್ಲಿ ಸಂದೇಶವನ್ನು ಹಂಚಿಕೊಂಡಿರುವ ಅವರು, ಸಹಾನುಭೂತಿ ಉಭಯ ದೇಶಗಳ ನಡುವಿನ ಸ್ನೇಹದ ಹೃದಯದಲ್ಲಿದೆ ಎಂದು ಹೇಳಿದ್ದಾರೆ.
“ನಾವು ಅನುಭವಿಸುತ್ತಿರುವ ಸಾಂಕ್ರಾಮಿಕ ರೋಗದಿಂದ ಯಾರೂ ಹೊರತಾಗಿಲ್ಲ. ಭಾರತವು ಕಠಿಣ ಅವಧಿಯನ್ನು ಎದುರಿಸುತ್ತಿದೆ ಎಂದು ನಮಗೆ ತಿಳಿದಿದೆ. ಫ್ರಾನ್ಸ್ ಮತ್ತು ಭಾರತ ಯಾವಾಗಲೂ ಒಗ್ಗೂಡಿವೆ ಮತ್ತು ನಮ್ಮ ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ” ಎಂದು ಫ್ರೆಂಚ್ ಅಧ್ಯಕ್ಷರ ಫೇಸ್ಬುಕ್ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಲಾಗಿದೆ.
“ಫ್ರಾನ್ಸ್ ವೈದ್ಯಕೀಯ ಉಪಕರಣಗಳು, ವೆಂಟಿಲೇಟರ್ಗಳು ಮತ್ತು ಆಮ್ಲಜನಕ ಮತ್ತು 8 ಆಮ್ಲಜನಕ ಜನರೇಟರ್ ಅನ್ನು ಭಾರತಕ್ಕೆ ಕಳುಹಿಸುತ್ತದೆ. ಪ್ರತಿ ಜನರೇಟರ್ ಸುತ್ತುವರಿದ ಗಾಳಿಯಿಂದ ಆಮ್ಲಜನಕವನ್ನು ಉತ್ಪಾದಿಸುವ ಮೂಲಕ 10 ವರ್ಷಗಳ ಕಾಲ ಆಸ್ಪತ್ರೆಯನ್ನು ‘ಆತ್ಮನಿರ್ಭರ’ ಮಾಡಬಲ್ಲದು” ಎಂದಿದ್ದಾರೆ.
“ಸಹಾನುಭೂತಿ ನಮ್ಮ ರಾಷ್ಟ್ರದ ಹೃದಯಭಾಗದಲ್ಲಿದೆ. ಇದು ನಮ್ಮ ದೇಶಗಳ ನಡುವಿನ ಸ್ನೇಹದ ಕೇಂದ್ರವಾಗಿದೆ. ನಾವು ಒಟ್ಟಾಗಿ ಗೆಲ್ಲುತ್ತೇವೆ” ಎಂದು ಮ್ಯಾಕ್ರನ್ ಬರೆದಿದ್ದಾರೆ.
ಇದಕ್ಕೂ ಮುನ್ನ, ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಮುಂದಿನ ಕೆಲವು ದಿನಗಳಲ್ಲಿ ಫ್ರಾನ್ಸ್ ಭಾರತಕ್ಕೆ ತಕ್ಷಣದ ಪರಿಹಾರವನ್ನು ಮಾತ್ರವಲ್ಲದೆ 8 ಹೆಚ್ಚಿನ ಸಾಮರ್ಥ್ಯದ ಆಮ್ಲಜನಕ ಉತ್ಪಾದಕಗಳನ್ನು, ಐಸಿಯುಗಳಿಗಾಗಿ 28 ವೆಂಟಿಲೇಟರ್ಗಳು ಒಳಗೊಂಡಂತೆ ಇತರ ಪರಿಕರ ತಲುಪಿಸಲಿದೆ. ಪ್ರತಿಯೊಂದು ಆಮ್ಲಜನಕ ಉತ್ಪಾದಕಗಳು 250 ಹಾಸಿಗೆಗಳಿಗೆ ವರ್ಷಪೂರ್ತಿ ಒ 2 ಅನ್ನು ಒದಗಿಸುತ್ತದೆ ಎಂದು ತಿಳಿಸಿದ್ದರು.
https://www.facebook.com/EmmanuelMacron/posts/3126860390879859
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.