News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಕ್ನೋ, ವಾರಣಾಸಿ, ಅಹ್ಮದಾಬಾದಿನಲ್ಲಿ ಕೋವಿಡ್‌ ಆಸ್ಪತ್ರೆ ನಿರ್ಮಿಸುತ್ತಿದೆ DRDO

ನವದೆಹಲಿ: ಲಕ್ನೋದಲ್ಲಿ 450 ಹಾಸಿಗೆಗಳ ಆಸ್ಪತ್ರೆ, ವಾರಣಾಸಿಯಲ್ಲಿ 750 ಹಾಸಿಗೆಗಳ ಆಸ್ಪತ್ರೆ ಮತ್ತು ಅಹ್ಮದಾಬಾದಿನಲ್ಲಿ  900 ಸ್ಥಾಪಿಸಲು ಕಾಮಗಾರಿ ನಡೆಯುತ್ತಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಮಂಗಳವಾರ ಘೋಷಿಸಿದ್ದಾರೆ.

ಕೋವಿಡ್-19 ಪ್ರಕರಣಗಳಲ್ಲಿ ಭಾರೀ ಏರಿಕೆಯ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಆಸ್ಪತ್ರೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಲಕ್ನೋದ ಅವಧ್ ಶಿಲ್ಪ್ ಗ್ರಾಮ್‌ನಲ್ಲೂ ಕೋವಿಡ್ -19 ಆರೈಕೆ ಆಸ್ಪತ್ರೆಯ ನಿರ್ಮಾಣವು ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಸೌಲಭ್ಯವು ಐಸಿಯು ವಾರ್ಡ್‌ಗಗಳು, ವೆಂಟಿಲೇಟರ್‌ ಸೌಲಭ್ಯದ ಜೊತೆಗೆ ಆಮ್ಲಜನಕ ವ್ಯವಸ್ಥೆಯನ್ನು ಕೋವಿಡ್ -19 ರೋಗಿಗಳಿಗಾಗಿ ಹೊಂದಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯ ವಾರ್ಡ್‌ಗಳನ್ನು ನಿರ್ಮಿಸಲು ಪಕ್ಕಾ ರಚನೆಯನ್ನು ಬಳಸಲಾಗುತ್ತಿದೆ, ಇದು ಎಲ್ಲಾ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಹೊಂದಿದೆ.

ಡಿಆರ್‌ಡಿಒ ನವದೆಹಲಿಯಲ್ಲಿ ಒಂದು ಸೌಲಭ್ಯವನ್ನು ಕೋವಿಡ್‌ ರೋಗಿಗಳಿಗಾಗಿ ಈಗಾಗಲೇ ಸ್ಥಾಪಿಸಿದೆ, ಇದರಲ್ಲಿ ಎಲ್ಲಾ ಆಮ್ಲಜನಕ ಹಾಸಿಗೆಗಳು, ಹೆಚ್ಚಿನ ಸಂಖ್ಯೆಯ ವೆಂಟಿಲೇಟರ್‌ಗಳು, ಶೂನ್ಯ ಶುಲ್ಕಗಳು, ಮೂಲ ಪರೀಕ್ಷಾ ಸೌಲಭ್ಯಗಳು ಮತ್ತು ಹವಾನಿಯಂತ್ರಣವು ಡಬ್ಲ್ಯುಎಚ್‌ಒ ಮಾನದಂಡಗಳ ಪ್ರಕಾರ ಉಚಿತವಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top