News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಔಷಧ ಉತ್ಪನ್ನಗಳ ರಫ್ತು18% ಏರಿಕೆ

ಹೈದರಾಬಾದ್: 2019 – 20 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020 – 21 ನೇ ಹಣಕಾಸು ವರ್ಷದಲ್ಲಿ ಭಾರತದ ಔಷಧ ಉತ್ಪನ್ನಗಳ ರಫ್ತು ಶೇಕಡ 18ರಷ್ಟು ಏರಿಕೆಯಾಗಿದೆ.

ಈ ಬಗ್ಗೆ ಮಾಹಿತಿಯನ್ನು ನೀಡಿರುವ ಫಾರ್ಮಸಿಟಿಕಲ್ ಎಕ್ಸಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾ, ಮೌಲ್ಯದ ಲೆಕ್ಕದಲ್ಲಿ ಭಾರತದ ಔಷಧ ಉತ್ಪನ್ನಗಳ ರಫ್ತು ರೂ 1.58 ಲಕ್ಷ ಕೋಟಿಗಳಿಂದ ರೂ .79 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದಿದೆ.

2021 ರ ಮಾರ್ಚ್‌ ತಿಂಗಳಲ್ಲಿ ಔಷಧ ಉತ್ಪನ್ನಗಳ ರಫ್ತು ಶೇ. 48.5ರಷ್ಟು ಏರಿಕೆಯನ್ನು ಕಂಡು, ರೂ 17, 020 ಕೋಟಿಗಳಷ್ಟಾಗಿದೆ. 2020ರ ಮಾರ್ಚ್‌ ತಿಂಗಳಲ್ಲಿ ರಫ್ತು ಮೌಲ್ಯ ರೂ 11, 396 ಕೋಟಿಗಳಷ್ಟು ಇತ್ತು.

2020ರ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಹೇರಲಾಗಿದ್ದ ಕಾರಣ ರಫ್ತುಗೆ ಅಡ್ಡಿಯಾಗಿತ್ತು. ಹೀಗಾಗಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ರಫ್ತು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top