News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕಿಸ್ಥಾನವನ್ನು ಅನಪೇಕ್ಷಿತ 21 ಹೆಚ್ಚು ಅಪಾಯಕಾರಿ ದೇಶಗಳ ಪಟ್ಟಿಗೆ ಸೇರಿಸಿದ ಯುಕೆ

ಲಂಡನ್‌: ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ಆರೋಪವನ್ನು ಹೊತ್ತಿರುವ ಪಾಕಿಸ್ಥಾನವನ್ನು ಯುನೈಟೆಡ್ ಕಿಂಗ್‌ಡಮ್ (ಯುಕೆ) ತನ್ನ ಅನಪೇಕ್ಷಿತ 21 ಹೆಚ್ಚು ಅಪಾಯಕಾರಿ ದೇಶಗಳ ಪಟ್ಟಿಗೆ ಸೇರಿಸಿದೆ.

ಯುಕೆ ಸರ್ಕಾರದ ಪ್ರಕಾರ, ಈ ವರ್ಗದ ರಾಷ್ಟ್ರಗಳು ದುರ್ಬಲ ತೆರಿಗೆ ನಿಯಂತ್ರಣಗಳು ಮತ್ತು ಭಯೋತ್ಪಾದನೆ ಹಣಕಾಸು ಹಾಗೂ ಹಣಕಾಸು ವಂಚನೆಯಲ್ಲಿ ಚೆಕ್ ಆಂಡ್ ಬ್ಯಾಲೆನ್ಸ್ ಕೊರತೆಯಿಂದಾಗಿ ಅಪಾಯವನ್ನುಂಟುಮಾಡುತ್ತವೆ.

ಮಾರ್ಚ್ 26 ರಿಂದ ಜಾರಿಗೆ ಬಂದ ‘ಹಣಕಾಸು ವಂಚನೆ, ಭಯೋತ್ಪಾದಕ ಹಣಕಾಸು ಮತ್ತು ನಿಧಿಗಳ ನಿಯಂತ್ರಣ 2017 ರ ತಿದ್ದುಪಡಿ’ಯ ಅಡಿಯಲ್ಲಿ ಪಾಕಿಸ್ಥಾನವನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಪಾಕಿಸ್ಥಾನವು ಯುಕೆಯ ಈ ಕ್ರಮವನ್ನು ಖಂಡಿಸಿದೆ ಮತ್ತು ಅಲ್ಲಿನ ವಿದೇಶಾಂಗ ಕಚೇರಿ ವಕ್ತಾರ ಝಹಿದ್ ಹಫೀಜ್ ಚೌಧರಿ ಅವರು, ” ಇದು ಸತ್ಯಗಳನ್ನು ಆಧರಿಸಿಲ್ಲ ಮತ್ತು ರಾಜಕೀಯ ಪ್ರೇರಿತವಾಗಿದೆ ಮತ್ತು ಈ ಕ್ರಮವು ಪಾಕಿಸ್ಥಾನವು ಎಫ್‌ಎಟಿಎಫ್‌ನ ಗ್ರೇ ಪಟ್ಟಿಯಿಂದ ಹೊರಬರುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು” ಎಂದು ಹೇಳಿದ್ದಾರೆ

ಜೂನ್ 2018 ರಿಂದ ಪಾಕಿಸ್ಥಾನ  ಫೈನಾನ್ಷಿಯಲ್ ವಾಚ್ ಡಾಗ್ ‌ಎಫ್‌ಎಟಿಎಫ್‌ನ ಗ್ರೇ ಪಟ್ಟಿಯಲ್ಲಿದೆ, ಇದು ಅದರ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top