News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಎಪಿ ಸರ್ಕಾರ 2015-19 ನಡುವೆ ಯಾವುದೇ ಆಸ್ಪತ್ರೆ, ಫ್ಲೈಓವರ್‌ ನಿರ್ಮಿಸಿಲ್ಲ: ಆರ್‌ಟಿಐ

ನವದೆಹಲಿ: ದೆಹಲಿಯಲ್ಲಿನ ಪ್ರಸ್ತುತ ಎಎಪಿ ಸರ್ಕಾರವು ತನ್ನ ಆರೋಗ್ಯ ರಕ್ಷಣೆ ಮತ್ತು ಮೂಲಸೌಕರ್ಯ ಉಪಕ್ರಮಗಳನ್ನು  ಪ್ರಮುಖ ಚುನಾವಣಾ ಪ್ರಚಾರದ ಯೋಜನೆಗಳಾಗಿ ಬಳಸಿಕೊಳ್ಳುತ್ತಿದೆ.  2015 ರ ಅಸೆಂಬ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಅದು ದೆಹಲಿ ಆಸ್ಪತ್ರೆಗಳಲ್ಲಿ ಒಟ್ಟು ಹಾಸಿಗೆಯ ಸಾಮರ್ಥ್ಯವನ್ನು 40,000 ಕ್ಕೆ ಹೆಚ್ಚಿಸುವ ಭರವಸೆ ನೀಡಿತು ಮತ್ತು ಮೊದಲ ಎರಡು ವರ್ಷಗಳಲ್ಲಿ ಈ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿತ್ತು

ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಕೇಜ್ರಿವಾಲ್ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಮ್ಮ ಸರ್ಕಾರ 23 ಫ್ಲೈಓವರ್‌ಗಳನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ. ಆದರೆ, ವಾಸ್ತವ ಬೇರೆಯದ್ದೇ ಇದೆ.

ತೇಜ್‌ಪಾಲ್ ಸಿಂಗ್ ಎಂಬುವವರು ಸಲ್ಲಿಸಿದ ಆರ್‌ಟಿಐ ಅರ್ಜಿಯಲ್ಲಿ, ಪ್ರಸ್ತುತ ಎಎಪಿ ಸರ್ಕಾರವು ನೀಡಿರುವ ಹೇಳಿಕೆಗಳಿಗೆ ವಿರುದ್ಧವಾಗಿ ವಾಸ್ತವಾಂಶ ಇರುವುದು ಕಂಡು ಬಂದಿದೆ. ಎಎಪಿ ಸರ್ಕಾರ ಯಾವುದೇ ಆಸ್ಪತ್ರೆಯನ್ನು ನಿರ್ಮಾಣ ಮಾಡಿಲ್ಲ ಅಥವಾ 2015 ರಿಂದ 2019 ರ ನಡುವೆ ದೆಹಲಿಯಲ್ಲಿ ಯಾವುದೇ ಫ್ಲೈಓವರ್‌ಗಳನ್ನು ನಿರ್ಮಿಸಿಲ್ಲ ಎಂದು ತಿಳಿದುಬಂದಿದೆ. ಆರ್‌ಟಿಐ ಮೂಲಕ 2019 ರಿಂದ ಕಳೆದ 5 ವರ್ಷಗಳಲ್ಲಿ ದೆಹಲಿ ಸರ್ಕಾರ ಕೈಗೊಂಡ ಆರೋಗ್ಯ ರಕ್ಷಣೆ ಮತ್ತು ಮೂಲಸೌಕರ್ಯ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ.

 ಅಕ್ಷಯ್ ಲಕ್ರಾ ಎಂಬುವವರು ಜುಲೈ 3, 2019 ರ ಆರ್‌ಟಿಐ ಉತ್ತರದ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top