ನವದೆಹಲಿ: BIMSTEC (Bay of Bengal Initiative for Multi-Sectoral Technical and Economic Cooperation) ಚೌಕಟ್ಟಿನಡಿಯಲ್ಲಿ ಪ್ರಾದೇಶಿಕ ಸಹಕಾರದ ವೇಗವನ್ನು ಮತ್ತಷ್ಟು ವರ್ದಿಸಲು ಮತ್ತು ಸಂಸ್ಥೆಯನ್ನು ಬಲವಾದ, ಹೆಚ್ಚು ಪರಿಣಾಮಕಾರಿ ಮತ್ತು ಫಲಿತಾಂಶ-ಆಧಾರಿತವಾಗಿಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ.
ಇಂದು ವರ್ಚುವಲ್ ಆಗಿ ನಡೆದ 17 ನೇ BIMSTEC ಮಂತ್ರಿ ಸಭೆಯಲ್ಲಿ ಹೇಳಿಕೆ ನೀಡಿದ ಡಾ.ಜೈಶಂಕರ್, “ಸಾಮೂಹಿಕ ಪ್ರಯತ್ನಗಳು ಮತ್ತು ಸಹಕಾರದ ಮನೋಭಾವದೊಂದಿಗೆ ಮುಂದಿನ ದಿನಗಳಲ್ಲಿ BIMSTEC ಹೊಸ ಎತ್ತರವನ್ನುಏರಲಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾವನ್ನು ಸಂಪರ್ಕಿಸುವ ವಿಶಿಷ್ಟ ಶಕ್ತಿಯನ್ನು BIMSTEC ಹೊಂದಿದೆ ಮತ್ತು ಇದು ಭಾರತೀಯ ವಿದೇಶಾಂಗ ನೀತಿಯಲ್ಲಿ ಸ್ಥಿರವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ” ಎಂದು ಹೇಳಿದರು.
“2019 ರ ಮೇನಲ್ಲಿ ನಡೆದ ಭಾರತ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ BIMSTEC ನಾಯಕರು ಭಾಗವಹಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸದಸ್ಯ ರಾಷ್ಟ್ರಗಳ, ಮತ್ತು ಬಂಗಾಳಕೊಲ್ಲಿಯಲ್ಲಿನ ಅಂತರರಾಷ್ಟ್ರೀಯ ಸಮುದಾಯದ ಬೆಳೆಯುತ್ತಿರುವ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿಗಳೊಂದಿಗೆ ಭರವಸೆಯ ಉಪ-ಪ್ರಾದೇಶಿಕ ಗುಂಪಾಗಿ ವರ್ಷಗಳಲ್ಲಿ BIMSTEC ಹೊರಹೊಮ್ಮಿದೆ “ಎಂದು ಅವರು ಹೇಳಿದರು.
BIMSTEC ಗೆ ಹೊಸ ಚೈತನ್ಯವನ್ನು ನೀಡುವ ನಮ್ಮ ಸಾಮೂಹಿಕ ಸಂಕಲ್ಪವು ಸಂಸ್ಥೆಯನ್ನು ಪುನಶ್ಚೇತನಗೊಳಿಸಿದೆ. ಸದಸ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ರಾಜಕೀಯ ಮತ್ತು ಆರ್ಥಿಕ ಸಹಕಾರದೊಂದಿಗೆ ಈ ಪ್ರದೇಶವು ಶೀಘ್ರ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.