ನವದೆಹಲಿ: 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಹಣಕಾಸು ಸಚಿವಾಲಯವು ಬುಧವಾರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡುವ ಸಲುವಾಗಿ ರಾಜ್ಯಗಳಿಗೆ 4,608 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಈ ಅನುದಾನವು ಗ್ರಾಮೀಣ ಸ್ಥಳೀಯ ಸಂಸ್ಥೆ (ಆರ್ಎಲ್ಬಿಗಳು) ಮತ್ತು ನಗರ ಸ್ಥಳೀಯ ಸಂಸ್ಥೆ (ಯುಎಲ್ಬಿಗಳು) ಗಳಿಗೆ ಸಿಗಲಿದೆ. ಇದರಲ್ಲಿ ಆರ್ಎಲ್ಬಿಗಳಿಗೆ 2,660 ಕೋಟಿ ರೂ ಮತ್ತು ಯುಎಲ್ಬಿಗಳಿಗೆ 1,948 ಕೋಟಿ ರೂ ಸಿಗಲಿದೆ.
2020-21ರ ಆರ್ಥಿಕ ವರ್ಷದಲ್ಲಿ ಸರ್ಕಾರವು ಒಟ್ಟು ರಾಜ್ಯಗಳ ಅನುದಾನವಾಗಿ 28 ರಾಜ್ಯಗಳಿಗೆ ಒಟ್ಟು 87,460 ಕೋಟಿ ರೂ ಬಿಡುಗಡೆ ಮಾಡಿದೆ. ಈ ಪೈಕಿ ಆರ್ಎಲ್ಬಿಗಳಿಗೆ 60,750 ಕೋಟಿ ರೂ., ಯುಎಲ್ಬಿಗಳಿಗೆ 26,710 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ಎಲ್ಬಿ ಅನುದಾನವು ಪಂಚಾಯತ್ – ಗ್ರಾಮ, ಬ್ಲಾಕ್ ಮತ್ತು ಜಿಲ್ಲೆಯ ಎಲ್ಲಾ ಶ್ರೇಣಿಗಳಿಗೆ ಮೀಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.