ನವದೆಹಲಿ: ಅಮೆರಿಕದ ಲಸಿಕೆ ಡೆವಲಪರ್ ನೊವಾವಾಕ್ಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೊನಾವೈರಸ್ ಲಸಿಕೆ ಕೊವೊವಾಕ್ಸ್ನ ಪ್ರಯೋಗ ಭಾರತದಲ್ಲಿ ಪ್ರಾರಂಭ ಆಗಿದೆ ಎಂದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಹೇಳಿದ್ದಾರೆ.
ಈ ಮೊದಲು ಜೂನ್ ವೇಳೆಗೆ ಕೊವೊವಾಕ್ಸ್ ಅನ್ನು ಪ್ರಾರಂಭಿಸುವ ಆಶಯ ಹೊಂದಿದ್ದ ಪೂನವಾಲ್ಲಾ, ಇದೀಗ ಸೆಪ್ಟೆಂಬರ್ ವೇಳೆಗೆ ಲಸಿಕೆ ಬಳಕೆಗೆ ಯೋಗ್ಯವಾಗುವ ಸಾಧ್ಯತೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಕೋವಿಡ್ ಲಸಿಕೆಯು ಯುಕೆ ಪ್ರಯೋಗದಲ್ಲಿ ಶೇಕಡಾ 89.3 ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ. ಆಫ್ರಿಕನ್ ಮತ್ತು ಯುಕೆ ರೂಪಾಂತರಗಳ ವಿರುದ್ಧವೂ ಇದನ್ನು ಪರೀಕ್ಷಿಸಲಾಗುತ್ತಿದೆ.
“ಕೊವೊವಾಕ್ಸ್ ಪ್ರಯೋಗಗಳು ಅಂತಿಮವಾಗಿ ಭಾರತದಲ್ಲಿ ಪ್ರಾರಂಭವಾಗುತ್ತಿದೆ. ಲಸಿಕೆಯನ್ನು ನೋವಾವಾಕ್ಸ್ ಮತ್ತು ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದ ಮೂಲಕ ತಯಾರಿಸಲಾಗುತ್ತದೆ. ಇದನ್ನು ಆಫ್ರಿಕನ್ ಮತ್ತು ಯುಕೆ ರೂಪಾಂತರಗಳ ವಿರುದ್ಧ ಪರೀಕ್ಷಿಸಲಾಗಿದೆ ಮತ್ತು ಒಟ್ಟಾರೆ 89% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ. ಸೆಪ್ಟೆಂಬರ್ 2021 ರೊಳಗೆ ಪ್ರಾರಂಭಿಸುವ ಭರವಸೆ ಇದೆ ” ಎಂದು ಅವರು ಟ್ವೀಟ್ ನಲ್ಲಿ ಬರೆದಿದ್ದಾರೆ.
Covovax trials finally begin in India; the vaccine is made through a partnership with @Novavax and @SerumInstIndia. It has been tested against African and UK variants of #COVID19 and has an overall efficacy of 89%. Hope to launch by September 2021! https://t.co/GyV6AQZWdV
— Adar Poonawalla (@adarpoonawalla) March 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.