ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, 1.54 ಕೋಟಿ ನೋಂದಾಯಿತ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಇಲ್ಲಿ ಅವಕಾಶವನ್ನು ಹೊಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 30 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಅಸ್ಸಾಂನಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 47 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನವು 21 ಮಹಿಳೆಯರು ಸೇರಿದಂತೆ 191 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುತ್ತದೆ. ಮೊದಲ ಸುತ್ತಿನಲ್ಲಿ ಪುರುಲಿಯಾ ಮತ್ತು ಜರ್ಗ್ರಾಮ್ನ ಎಲ್ಲಾ ಕ್ಷೇತ್ರಗಳು, ಹಾಗೆಯೇ ಬಂಕುರಾ, ಪುರ್ಬಾ ಮೆದಿನಿಪುರ, ಮತ್ತು ಪಶ್ಚಿಮ ಮೆದಿನಿಪುರದ ಮತದಾರರು ಮತ ಹಾಕಲಿದ್ದಾರೆ.
ಅಸ್ಸಾಂನಲ್ಲಿ 47 ಸ್ಥಾನಗಳಿಂದ ಒಟ್ಟು 264 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿನ 42 ಸ್ಥಾನಗಳು ಮೇಲ್ ಅಸ್ಸಾಂ ಮತ್ತು ಉತ್ತರ ಅಸ್ಸಾಂನ 11 ಜಿಲ್ಲೆಗಳಿಗೆ ಸೇರಿವೆ ಮತ್ತು ಐದು ಸ್ಥಾನಗಳು ಕೇಂದ್ರ ಅಸ್ಸಾಂನ ನಾಗಾಂ ಜಿಲ್ಲೆಯದ್ದಾಗಿವೆ. ಇವುಗಳು ಮೊದಲ ಹಂತದ ಚುನಾವಣೆ ಎದುರಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.