ನವದೆಹಲಿ: ಅಸ್ಸಾಂ ರೈಫಲ್ಸ್ ಇಂದು ತನ್ನ 186ನೇ ರೈಸಿಂಗ್ ಡೇ ಅನ್ನು ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅದರ ಸಿಬ್ಬಂದಿಗಳು ಮತ್ತು ಅವರ ಕುಟುಂಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜನಾಥ್ ಅವರು ಅಸ್ಸಾಂ ರೈಫಲ್ಸ್ ಪಡೆಯ ಸಾಹಸ ಮತ್ತು ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.
“ರೈಸಿಂಗ್ ದಿನದಂದು ಎಲ್ಲಾ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಅಸ್ಸಾಂ ರೈಫಲ್ಸ್ ಭಾರತದ ಅತ್ಯಂತ ಹಳೆಯ ಅರೆಸೈನಿಕ ಪಡೆ, ಇದು ಸುಮಾರು 19 ದಶಕಗಳಿಂದ ಭಾರತವನ್ನು ಸುರಕ್ಷಿತವಾಗಿಡುವಲ್ಲಿ ಮುಂಚೂಣಿಯಲ್ಲಿದೆ. ಈ ಪಡೆಯ ಧೈರ್ಯ ಮತ್ತು ವೃತ್ತಿಪರತೆಯನ್ನು ಬಹಳವಾಗಿ ಪ್ರಶಂಸಿಸಲಾಗುತ್ತದೆ” ಎಂದಿದ್ದಾರೆ.
1835 ರಲ್ಲಿ ಕ್ಯಾಚರ್ ಲೆವಿ ಎಂದು ಸ್ಥಾಪಿತಗೊಂಡ ಅಸ್ಸಾಂ ರೈಫಲ್ಸ್ ಈಗ ದೇಶದ ಅತ್ಯಂತ ಹಳೆಯ ಅರೆಸೈನಿಕ ಪಡೆ. ಇದು ಭಾರತದ ಅತ್ಯಂತ ಹೆಮ್ಮೆ ಶಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
Greetings to all Assam Rifles personnel and their families on the Raising Day. The Assam Rifles is India’s oldest paramilitary force which has been at the forefront of keeping India safe for nearly 19 decades. The courage and professionalism of this force are deeply appreciated.
— Rajnath Singh (@rajnathsingh) March 24, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.