ಸುಶಿಕ್ಷಿತರ ರಾಜ್ಯವೆಂದೇ ಪ್ರಸಿದ್ಧ ಕೇರಳ ರಾಜ್ಯದ 14ನೇ ಜಿಲ್ಲೆಯೇ ಕಾಸರಗೋಡು. ಪ್ರಸಿದ್ಧ ದೇವಾಲಯಗಳು, ಪ್ರಸಿದ್ಧ ಬೇಕಲ ಕೋಟೆ ಹೀಗೆ ಉತ್ತಮ ಕಾರಣಗಳಿಗಾಗಿ ಗುರುತಿಸಲ್ಪಡಬೇಕಾದ ಕಾಸರಗೋಡು ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್, ಕೋಮು ಗಲಭೆ ಮತ್ತು ರಾಜಕೀಯ ಪ್ರೇರಿತ ಗಲಭೆಗಳಿಂದಾಗಿ ಕುಖ್ಯಾತವಾಗಿರುವುದು ದುರದೃಷ್ಟಕರ. ಕಾಸರಗೋಡು ಜಿಲ್ಲೆಯ ಬಹುತೇಕ ಪ್ರಜೆಗಳು ಕನ್ನಡಿಗರು. ಕಾಸರಗೋಡನ್ನು ಪಂಚಭಾಷಾ ಭೂಮಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಕನ್ನಡ, ಮಲಯಾಳ, ತುಳು, ಕೊಂಕಣಿ ಮತ್ತು ಬ್ಯಾರಿ ಮಾತೃಭಾಷೆಯ ಜನರು ವಾಸಿಸುತ್ತಾರೆ. ಬಹುತೇಕ ಜನರು ಈ ಎಲ್ಲಾ ಐದು ಭಾಷೆಗಳಲ್ಲೂ ಮಾತನಾಡಬಲ್ಲರು. ಕಾಸರಗೋಡು ಜಿಲ್ಲೆಯನ್ನು ಪರಶುರಾಮ ಸೃಷ್ಟಿ ಎಂದೂ ಕರೆಯಲಾಗುತ್ತದೆ. ಆದರೆ,
ಒಂದು ರೀತಿಯಲ್ಲಿ ಗಮನಿಸಿದರೆ ಕಾಸರಗೋಡು ಶಾಪಗ್ರಸ್ತ ಜಿಲ್ಲೆಯಂತೆ ಭಾಸವಾಗುತ್ತದೆ. ಕನ್ನಡ ಭಾಷೆಯನ್ನೂ ಮಾತನಾಡುವ ಜನರ ಸಂಖ್ಯೆಯೇ ಅಧಿಕವಾಗಿರುವ ಈ ಜಿಲ್ಲೆಯ ಕುರಿತಾಗಿ ಕೇರಳ ಸರಕಾರವು ಅನೇಕ ವರ್ಷಗಳಿಂದ ಮಲತಾಯಿ ಧೋರಣೆಯನ್ನು ತೋರುತ್ತಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರೆಯ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡದ ಕಾಲೇಜುಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇರುವ ಈ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ವಿದ್ಯಾಭ್ಯಾಸಕ್ಕೆ ಅನುಕೂಲತೆಯ ಕೊರತೆಯು ಒಂದೆಡೆಯಾದರೆ, ಇಲ್ಲಿ ಸರಕಾರಿ ಉದ್ಯೋಗ ಪಡೆಯಲು ಮಲಯಾಳವು ಕಡ್ಡಾಯವಾಗಿದೆ. ಉದ್ಯೋಗದ ದೃಷ್ಟಿಯನ್ನು ಬದಿಗಿರಿಸಿದರೂ ಇಲ್ಲಿನ ಪ್ರತಿಯೊಂದು ಸರಕಾರಿ ಕಾಗದ ಪತ್ರಗಳೂ, ಅರ್ಜಿಗಳೂ ಮಲಯಾಳದಲ್ಲೇ ಇರುವುದು ಸಾಮಾನ್ಯ. ಕನ್ನಡ ಭಾಷೆಯ ವಿಚಾರವನ್ನು ಬಿಟ್ಟು ಆಂಗ್ಲ ಭಾಷೆಯಲ್ಲೂ ಅರ್ಜಿಗಳು ಲಭ್ಯವಿಲ್ಲದಿರುವುದು ಇಲ್ಲಿನ ಕನ್ನಡಿಗರ ಅತಂತ್ರ ಪರಿಸ್ಥಿತಿಯನ್ನು ಎತ್ತಿ ತೋರುತ್ತದೆ.
ಕಾಸರಗೋಡಿನ ಸಾಮಾನ್ಯ ಜನರ ಕಷ್ಟಗಳು ಒಂದೆರಡಲ್ಲ. ಕಾಸರಗೋಡು ಜಿಲ್ಲೆಯನ್ನು ಕೇರಳವನ್ನು ದಶಕಗಳ ಕಾಲ ಆಡಳಿತ ನಡೆಸಿದ ಎರಡೂ ಪಕ್ಷಗಳು ತಮ್ಮ ರಾಜ್ಯದ ಭಾಗವೇ ಅಲ್ಲವೆಂಬಂತೆ ಕಡೆಗಣಿಸಿದ್ದವು. ಕೇರಳವು ಪ್ರತ್ಯೇಕ ರಾಜ್ಯವಾಗಿ ಪರಿಗಣಿಸಲ್ಪಟ್ಟ ದಿನದಿಂದಲೂ ಇಲ್ಲಿ ಎಲ್ ಡಿ ಎಫ್ ಮತ್ತು ಯು ಡಿ ಎಫ್ ಪಕ್ಷಗಳು ಆಡಳಿತ ನಡೆಸುತ್ತಿವೆ. ಅಂದರೆ ಒಂದು ಎಡರಂಗ, ಇನ್ನೊಂದು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನ ಮೈತ್ರಿಕೂಟ. ಎರಡೂ ಮೈತ್ರಿಕೂಟಗಳು ಅದೆಷ್ಟು ಚೆನ್ನಾಗಿ ಆಡಳಿತ ನಡೆಸಿವೆ ಎಂದರೆ ಮಲಯಾಳಿಗಳು ಉದ್ಯೋಗಕ್ಕಾಗಿ ಅರಬ್ ರಾಷ್ಟ್ರಗಳನ್ನು ಮತ್ತು ಭಾರತದ ಇತರ ರಾಜ್ಯಗಳನ್ನು ಅವಲಂಬಿಸಬೇಕಿದೆ. ಉಳಿದ ಜಿಲ್ಲೆಗಳ ಪರಿಸ್ಥಿತಿಯೇ ಹೀಗಿರುವಾಗ ಉಪೇಕ್ಷಿಸಲ್ಪಟ್ಟ ಕಾಸರಗೋಡು ಜಿಲ್ಲೆಯ ಪರಿಸ್ಥಿತಿಯು ಹೇಗಿರಬಹುದೆಂದು ನೀವೇ ಊಹಿಸಿ…
ದೇವರ ಸ್ವಂತ ನಾಡಾದ ಕೇರಳ ಈಗ ಭಯೋತ್ಪಾದಕರ ತವರಾಗಿ ಗುರುತಿಸಲ್ಪಡುತ್ತಿದೆ. ಇಲ್ಲಿನ ಅನೇಕ ಯುವಕ ಯುವತಿಯರು ಐಎಸ್ಐಎಸ್ ಸೇರಿ ಸಿರಿಯಾ ಮತ್ತಿತರ ದೇಶಗಳಿಗೆ ಹೋಗಿ ಕೊಲ್ಲಲ್ಪಟ್ಟಿದ್ದಾರೆ. ಅದೆಷ್ಟೋ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್ ಕಾರ್ಯಕರ್ತರನ್ನು ಕೇರಳದಿಂದ ಬಂಧಿಸಲಾಗಿದೆ. ಅದೆಷ್ಟೋ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ನೇಮಿಸುವ ಕಾರ್ಯಗಳನ್ನು ಮಾಡುತ್ತಿದ್ದದ್ದು ತಿಳಿದು ಬಂದಿದೆ. ಆದರೂ ಕೇರಳದ ಆಡಳಿತ ಪಕ್ಷವೂ ಪ್ರಮುಖ ವಿರೋಧ ಪಕ್ಷವೂ ಈ ವಿಚಾರವನ್ನು ಗಂಭೀರವಾಗಿ ತೆಳೆದುಕೊಳ್ಳುತ್ತಿಲ್ಲ. ಇಲ್ಲಿ ರಾಜಕೀಯ ಪ್ರೇರಿತ ಹತ್ಯೆಗಳು ಮತ್ತು ಗಲಭೆಗಳು ಅತ್ಯಂತ ಸಾಮಾನ್ಯವಾಗಿದೆ ಎಂದರೆ ಯಾರೂ ಆಶ್ಚರ್ಯ ಪಡಬೇಕಿಲ್ಲ. ಹೊರ ಹೋದ ಮಗಳು ಮಾತ್ರವಲ್ಲ ಗಂಡು ಮಕ್ಕಳೂ ಹೊತ್ತಿಗೆ ಮುಂಚೆ ಮನೆ ಸೇರದಿದ್ದಲ್ಲಿ ಮನೆಯವರು ಗಾಬರಿಯಾಗುವಂತಹ ವಾತಾವರಣವು ಕೇರಳದಲ್ಲಿದೆ.
ಕೇರಳದಲ್ಲಿ ಮತೀಯತೆಯು ಅತ್ಯಂತ ಹೆಚ್ಚಿದೆ. ಜಾತ್ಯಾತೀತ ಎಂದು ಹೇಳುವ ಕಮ್ಯುನಿಸ್ಟ್ ಪಕ್ಷವು ಕ್ಷೇತ್ರವೊಂದರಲ್ಲಿ ಹಿಂದೂ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಅಲ್ಪ ಸಂಖ್ಯಾತರು ಉಗ್ರವಾಗಿ ಪ್ರತಿಭಟಿಸಿದರು. ಇಲ್ಲಿ ಗೆದ್ದರೆ ನಾವು ಯಾವ ರೀತಿಯಾಗಿ ಅಭಿವೃದ್ಧಿಯನ್ನು ಮಾಡುತ್ತೇವೆ ಎನ್ನುವುದಕ್ಕೂ ಹೆಚ್ಚಾಗಿ ಬಿಜೆಪಿಯನ್ನು ಸೋಲಿಸಲು ಮತ ನೀಡಿ ಎನ್ನುವುದೇ ಚುನಾವಣಾ ಪ್ರಚಾರದ ಪ್ರಮುಖ ಅಂಶವಾಗಿದೆ. ಕೇರಳದ ಪ್ರಸ್ತುತ ರಾಜಕೀಯ ಪರಿಸ್ಥಿತಿಯು ಅದೆಷ್ಟು ಅಧಃ ಪತನಕ್ಕೆ ಇಳಿದಿದೆ ಎಂದರೆ ಇಲ್ಲಿನ ಮುಖ್ಯಮಂತ್ರಿಗಳ ಮೇಲೂ ಹಗರಣದ ಆರೋಪ ಸುತ್ತಿಕೊಂಡಿದೆ. ಮುಸ್ಲಿಂ ಲೀಗ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆರೋಪಿಯಾಗಿ ಕಾರಾಗೃಹ ವಾಸಿಯಾಗಿದ್ದಾನೆ. ಕೋವಿಡ್-19ನ ಪ್ರಾರಂಭದಲ್ಲಿ ಕಾಸರಗೋಡು ಜಿಲ್ಲೆಯ ದುರಾವಸ್ಥೆಯು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು.
ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ವಿದ್ಯಾ ಸಂಸ್ಥೆಗಳು ಮಾತ್ರವಲ್ಲ, ಸುಸಜ್ಜಿತ ಆಸ್ಪತ್ರೆಯೂ ಇಲ್ಲ!
ಹೌದು ಇದು ಸತ್ಯವಾದ ವಿಚಾರ. ಕೋವಿಡ್ 19 ಸಂದರ್ಭದಲ್ಲಿ ಅಂತರ ರಾಜ್ಯ ಪ್ರಯಾಣಗಳಿಗೆ ನಿರ್ಬಂಧ ಹೇರಿದಾಗ ಅರಿವಾದ ಸತ್ಯವಿದು. ಕಾಸರಗೋಡು ಜಿಲ್ಲೆಯ ಜನರು ತಮ್ಮ ಆರೋಗ್ಯ ಸಂಬಂಧಿತ ವಿಚಾರಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆಯೇ ಅವಲಂಬಿತರಾಗಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿ ಎಂದು ಕಾಸರಗೋಡಿನ ಜನರು ದಶಕಗಳಿಂದ ಕೇರಳ ಸರಕಾರವನ್ನು ಆಗ್ರಹಿಸುತ್ತಿದ್ದರೂ, ಉತ್ತಮ ಸುಸಜ್ಜಿತ ಆಸ್ಪತ್ರೆಯು ಇಲ್ಲಿನ ಜನರ ಪಾಲಿಗೆ ಮರೀಚಿಕೆ. ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಸಲುವಾಗಿ ಕಟ್ಟಡ ನಿರ್ಮಾಣ ವ್ಯವಸ್ಥೆಯು ಪ್ರಾರಂಭವಾಗಿ ವರ್ಷಗಳು ಉರುಳಿದ್ದರೂ ಅದು ಪೂರ್ಣವಾಗಿಲ್ಲ. ಕೊರೋನಾ ಸಂದರ್ಭದಲ್ಲಿ ಇಲ್ಲಿನ ಜನರ ಆಕ್ರೋಶದಿಂದಾಗಿ ಸರಕಾರವು ತುರಾತುರಿಯಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸಿದರೂ ಇಲ್ಲಿ ಅನಾನುಕೂಲತೆಗಳೇ ಹೆಚ್ಚಾಗಿತ್ತು. ಕಾಸರಗೋಡಿನ ಜನರ ಸಂಕಷ್ಟವನ್ನು ಕಂಡು ಮರುಗಿದ ಟಾಟಾ ಸಂಸ್ಥೆಯು ಕಾಸರಗೋಡು ಜಿಲ್ಲೆಯಲ್ಲಿ ಅತ್ಯಂತ ಕ್ಷಿಪ್ರವಾಗಿ ಆಸ್ಪತ್ರೆಯನ್ನು ತೆರಿಯಿತು.
ಉನ್ನತ ವಿದ್ಯಾಭ್ಯಾಸಕ್ಕೆ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳ ಸಂಪೂರ್ಣ ಅವಲಂಬನೆಯು ದಕ್ಷಿಣ ಕನ್ನಡದ ವಿದ್ಯಾಸಂಸ್ಥೆಗಳ ಮೇಲೆ. ಬಹುತೇಕ ಜನರ ಮಾತೃಭಾಷೆ ಮತ್ತು ವ್ಯಾವಹಾರಿಕ ಭಾಷೆಯು ಕನ್ನಡವೇ ಆಗಿರುವ ಕಾರಣ ಉದ್ಯೋಗಕ್ಕಾಗಿಯೂ ವ್ಯವಹಾರಕ್ಕಾಗಿಯೂ ಇಲ್ಲಿನ ಜನರು ದಕ್ಷಿಣ ಕನ್ನಡದ ಮೇಲೆಯೇ ಅವಲಂಬಿತರಾಗಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಉದ್ಯೋಗಕ್ಕೆ ತೆರಳುವ ಸಂದರ್ಭದಲ್ಲಿ ನಿತ್ಯ ಪಾಸ್ ಗಳನ್ನು ಪಡೆಯಬೇಕು ಅಥವಾ ಕರ್ನಾಕದಲ್ಲೇ ತಂಗಬೇಕು, ಪ್ರತಿನಿತ್ಯ ಪ್ರಯಾಣಿಸುವಂತಿಲ್ಲ ಎಂಬಿತ್ಯಾದಿ ನಿಯಮಗಳ ವಿರುದ್ಧ ಪ್ರತಿಭಟಿಸಿದ ನಾಯಕರಲ್ಲಿ ಪ್ರಮುಖರು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್. ಕಾರ್ಯಕರ್ತರೊಂದಿಗೆ ಕಾರ್ಯಕರ್ತರಾಗಿ ಬೆರೆಯುವ ಸರಳ ವ್ಯಕ್ತಿತ್ವದ ನಾಯಕರಾದ ಶ್ರೀಕಾಂತ್, ಕಾಸರಗೋಡಿನ ಜನರ ಸಂಕಷ್ಟವನ್ನು ಬಹಳ ಚೆನ್ನಾಗಿ ಬಲ್ಲರು. ಇದಕ್ಕಾಗಿಯೇ ಅವರು ಪಾಸ್ ವ್ಯವಸ್ಥೆಯ ಕುರಿತಾಗಿ ಮತ್ತು ಗಡಿಯನ್ನು ಮುಚ್ಚುವ ನಿರ್ಧಾರದ ವಿರುದ್ಧ ಪ್ರತಿಭಟನೆಯ ಮುಂದಾಳುತ್ವವನ್ನು ವಹಿಸಿದ್ದರು. ಮಾತ್ರವಲ್ಲದೆ ಸ್ವತಃ ವಕೀಲರಾಗಿರುವ ಕೆ. ಶ್ರೀಕಾಂತ್ ಈ ವಿಚಾರದ ಕುರಿತಾಗಿ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಕಾಸರಗೋಡು ಜನತೆಗೆ ನ್ಯಾಯ ಲಭಿಸುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದ್ದರು.
ಕೇರಳದ ರಾಜಕೀಯ ಪಡಸಾಲೆಯಲ್ಲಿ ಬಿರುಗಾಳಿಯನ್ನೆಬ್ಬಿಸಿದ್ದ ಚಿನ್ನದ ಹಗರಣದ ಸಂದರ್ಭದಲ್ಲಿ ಕೆ. ಶ್ರೀಕಾಂತ್ ತಾವೂ ಸ್ವತಃ ಕಾರ್ಯಕರ್ತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪೊಲೀಸರ ಲಾಠಿ ಏಟು, ಜಲ ಫಿರಂಗಿ ಇತ್ಯಾದಿಗಳಿಗೆ ಕಾರ್ಯಕರ್ತರ ಮುಂದೆ ತಾವೇ ಮೊದಲಾಗಿ ಎದೆಯೊಡ್ಡಿ ನಿಂತಿದ್ದರು. ಪ್ರಸ್ತುತ ಕಾಸರಗೋಡು ಕ್ಷೇತ್ರಕ್ಕೆ ಅವಶ್ಯಕತೆ ಇರುವುದು ಇಂತಹ ನಾಯಕ. ಸ್ವತಃ ವಿದ್ಯಾವಂತರಾಗಿರುವ ಶ್ರೀಕಾಂತ್ ವೃತ್ತಿಯಲ್ಲಿ ವಕೀಲರಾಗಿದ್ದು ಜನರ ಸಂಕಷ್ಟಕ್ಕೆ ಹೆಗಲಾಗುವ ಸರಳ ಸ್ವಭಾವದ ಸಜ್ಜನ ವ್ಯಕ್ತಿ. ಇಂತಹಾ ಸಂದರ್ಭದಲ್ಲೂ ನ್ಯಾಯಕ್ಕಾಗಿ ಹೋರಾಟಕ್ಕಿಳಿಯುವ “ಕಾಸರಗೋಡಿನ ಭರವಸೆಯ ನಾಯಕ” ಕೆ. ಶ್ರೀಕಾಂತ್ ಕಾಸರಗೋಡಿನ ಮತಾಂತರ, ಲವ್ ಜಿಹಾದ್, ಮಲತಾಯಿ ಧೋರಣೆ, ಮಲಯಾಳೀಕರಣ ಮತ್ತು ರಾಜಕೀಯ ಪ್ರೇರಿತ ಹತ್ಯೆಗಳಂತಹ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಲ್ಲ ನಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಸರಗೋಡಿನಲ್ಲಿ ಈ ಬಾರಿ ಕಮಲ ಅರಳಲಿ. ಕಳೆದ ಬಾರಿ ಮಂಜೇಶ್ವರ ಕ್ಷೇತ್ರದಲ್ಲಾದ 89 ಮತಗಳ ಸೋಲಿನಿಂದ ಮಂಜೇಶ್ವರ ಕ್ಷೇತ್ರದ ಅಭಿವೃದ್ಧಿಯು 5 ವರ್ಷಗಳ ಮುಂದೂಡಲ್ಪಟ್ಟಿತು. ತಪ್ಪು ಮರುಕಳಿಸದಿರಲಿ, ಕಾಸರಗೋಡು ಕ್ಷೇತ್ರದಲ್ಲಿ ಈ ಬಾರಿ ಕಮಲವು ಅರಳಿಲಿ. ಉತ್ತಮ ಜನ ಪ್ರತಿನಿಧಿಯನ್ನು ಆರಿಸಿದ ಸೌಭಾಗ್ಯ ನಮ್ಮದಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.