ನವದೆಹಲಿ: 1000 ಮೆಟ್ರಿಕ್ ಟನ್ ಅಕ್ಕಿಯನ್ನು ಹೊತ್ತ ಭಾರತೀಯ ನೌಕಾ ಹಡಗು ಜಲಾಶ್ವ ಭಾನುವಾರ ಕೊಮೊರೊಸ್ನ ಅಂಜೌವಾನ್ ಬಂದರಿಗೆ ತಲುಪಿದೆ. ಇದನ್ನು ಕೊಮೊರೊಸ್ನ ವಿದೇಶಾಂಗ ಸಚಿವ ಎಚ್.ಇ. ದೋಯ್ಹಿರ್ ಅವರು ನಾಳೆ ಸಮಾರಂಭವೊಂದರಲ್ಲಿ ಸ್ವೀಕರಿಸಲಿದ್ದಾರೆ.
ಅಂಟಾನನರಿವೊ, ಮಡಗಾಸ್ಕರ್ ಮತ್ತು ಕೊಮೊರೊಸ್ನಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಭಾರತೀಯ ರಾಜತಾಂತ್ರಿಕ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರನ್ನು ಟ್ಯಾಗ್ ಮಾಡಿ ಮಾಡಲಾದ ಟ್ವೀಟ್ನಲ್ಲಿ ನೌಕಾ ಹಡಗು ಜಲಾಶ್ವ ಬಂದರಿಗೆ ಬರುತ್ತಿರುವುದನ್ನು ಕಾಣಬಹುದು.
ಅಕ್ಟೋಬರ್ 2019 ರಲ್ಲಿ ಕೊಮೊರೊಸ್ಗೆ ನೀಡಿದ ಭೇಟಿಯ ಸಂದರ್ಭದಲ್ಲಿ, ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 1000 ಮೆಟ್ರಿಕ್ ಟನ್ಗಳ ಈ ಸರಕನ್ನು ಆಹಾರ ಸಹಾಯವಾಗಿ ಕಳುಹಿಸುವುದಾಗಿ ಭರವಸೆ ನೀಡಿದ್ದರು. ರವಾನೆಯನ್ನು ಕೊಮೊರೊಸ್ನ ವಿದೇಶಾಂಗ ಸಚಿವರು ಮಾರ್ಚ್ 15 ರಂದು ನಡೆಯುವ ಸಮಾರಂಭದಲ್ಲಿ ಸ್ವೀಕರಿಸಲಿದ್ದಾರೆ.
ಐಎನ್ಎಸ್ ಜಲಾಶ್ವ ನೇರವಾಗಿ ಎಹೋಲಾ ಬಂದರಿಗೆ ಪ್ರಯಾಣಿಸಲಿದ್ದು, 1000 ಮೆಟ್ರಿಕ್ ಟನ್ ಅಕ್ಕಿ ಮತ್ತು 1,00,000 ಟ್ಯಾಬ್ಲೆಟ್ ಎಚ್ಸಿಕ್ಯು ಒಳಗೊಂಡ ಮತ್ತೊಂದು ಸರಕನ್ನು ಅಲ್ಲಿಗೆ ತಲುಪಿಸಲಿದೆ, ಇದನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ತಲುಪಿಸಲಾಗುತ್ತಿದೆ.
. @indiannavy Ship Jalashwa arrives at port of Anjouan, Comoros with 1000 metric tonnes of rice. It will be received by H.E. Dhoihir Dhoulkamal, Hon’ble Foreign Minister of Comoros in a ceremony tomorrow. @IndianDiplomacy @harshvshringla @DrSJaishankar @Azali_officiel pic.twitter.com/TYYeS45jdb
— India in Madagascar & Comoros (@IndembTana) March 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.