ಮಂಗಳೂರು: ಧರ್ಮಸ್ಥಳದಲ್ಲಿರುವ ʼಮಂಜೂಷಾʼ ವಾಹನ ಸಂಗ್ರಹಾಲಯಕ್ಕೆ ಮುಂಬೈನ ಕ್ಷೇತ್ರದ ಭಕ್ತರು ಕಳುಹಿಸಿದ ಎರಡು ಡಬಲ್ ಡೆಕ್ಕರ್ ಬಸ್ಗಳು ಬಂದಿವೆ.
ಧರ್ಮಸ್ಥಳ ಮಂಜೂಷಾ ವಾಹನ ಸಂಗ್ರಹಾಲಯದಲ್ಲಿ ಹಳೆಯ ಕಾಲದ ವಾಹನಗಳನ್ನು ಸಂಗ್ರಹಿಸಲಿಡಲಾಗುತ್ತದೆ. ರಾಜರು, ದೇಶದ ಮಂತ್ರಿಗಳು ಉಪಯೋಗಿಸುತ್ತಿದ್ದ ವಾಹನಗಳನ್ನು ಕಾಣಲು ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಧರ್ಮಸ್ಥಳದ ಮಂಜೂಷ ವಾಹನ ಸಂಗ್ರಹಾಲಯಕ್ಕೆ ಮುಂಬೈನ ಭಕ್ತರು ಕಳುಹಿಸಿರುವ ಈ ಹಳೆಯ ಕಾಲದ ವಾಹನಗಳು ಇಲ್ಲಿನ ಕಲೆಯನ್ನು ಇನಷ್ಟು ಹೆಚ್ಚಿಸಿದೆ. ಹಳೆಯ ಹಿಂದಿ ಚಿತ್ರಗಳಲ್ಲಿ ಇದನ್ನು ಕಂಡು ಸಂಭ್ರಮಿಸುತ್ತಿದ್ದ ಜನರಿಗೆ ಇದು ಈಗ ಆಕರ್ಷನೀಯ ಕೇಂದ್ರವಾಗಿದೆ.
ಈ ಎರಡು ಬಸ್ಗಳಲ್ಲಿ ನೀಲಿ ಬಣ್ಣದ ಬಸ್ ಮುಂಬೈನಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿವಿಧ ಪ್ರವಾಸಿ ಸ್ಥಳಗಳನ್ನು ತೋರಿಸುತ್ತಿದ್ದ ಟೂರಿಸ್ಟ್ ಬಸ್ ಆಗಿದೆ. ಮತ್ತೊಂದು ಕೆಂಪು ಬಣ್ಣದ ಡಬ್ಬಲ್ ಡೆಕ್ಕರ್ ಬಸ್ ಸ್ಥಳೀಯ ಸಾರ್ವಜನಿಕರನ್ನು ಹೊತ್ತೊಯ್ಯುವ ಸಾರಿಗೆ ಬಸ್ ಆಗಿದೆ.
ಉಚಿತವಾಗಿ ದೇವಸ್ಥಾನಕ್ಕೆ ಕಳುಹಿಸಿಕೊಟ್ಟ ಡಬ್ಬಲ್ ಡೆಕ್ಕರ್ ವಾಹನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ .ವಿರೇಂದ್ರ ಹೆಗ್ಡೆಯವರು ಅವರು ಸ್ವೀಕರಿಸಿದರು.
ಈ ವಾಹನ ಸಂಗ್ರಾಹಲಯದಲ್ಲಿ ಮರ್ಸಿಡೀಸ್ ಬೆಂಝ್ ಸಂಸ್ಥೆಯ ಮೈಸೂರು ಮಹರಾಜರು ಬಳಸುತ್ತಿದ್ದ ವಿಕ್ಟೋರಿಯಾ ರಾಣಿಯ ವಿಶೇಷ ನವೀಕೃತ ಕಾರು, ಗಾಂಧೀಜಿ ಕರ್ನಾಟಕ ಪ್ರವಾಸ ಸಂದರ್ಭ ಬಳಸಿದ ಕಾರು ಮತ್ತು ವಿದೇಶಗಳ ಅನೇಕ ಹಳೆಯ ಕಾರುಗಳು ಆಕರ್ಷನೀಯ ಕೇಂದ್ರ ಬಿಂದುವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.