ನವದೆಹಲಿ: ಭಾರತ ಸರ್ಕಾರದ ಲಸಿಕೆ ಮೈತ್ರಿ ಉಪಕ್ರಮದಡಿಯಲ್ಲಿ ಮೂರು ರಾಷ್ಟ್ರಗಳು ಇಂದು ಮೇಡ್ ಇನ್ ಇಂಡಿಯಾ ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸಿದವು. ಲಸಿಕೆ ಡೋಸ್ಗಳು ಇಂದು ವಿಮಾನಗಳ ಮೂಲಕ ಜಮೈಕಾ, ತಜಿಕಿಸ್ಥಾನ್ ಮತ್ತು ಬೆಲೀಜಿಗೆ ಬಂದಿಳಿದವು.
ನಿನ್ನೆ, ಮೊಜಾಂಬಿಕ್ ಮತ್ತು ನಿಕರಾಗುವಾ ಮೇಡ್ ಇನ್ ಇಂಡಿಯಾ ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸಿವೆ.
ಮಂಗಳವಾರ ಬೆಳಿಗ್ಗೆ ಲಸಿಕೆ ಬೆಲೀಜಿಗೆ ಬಂದಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಅಂತಹುದೇ ಇನ್ನೊಂದು ಸಾಗಣೆಯನ್ನು ಜಮೈಕಾಗೆ ಕಳುಹಿಸಲಾಗಿದೆ ಎಂದಿವೆ.
ವಿಶ್ವದಾದ್ಯಂತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಭಾರತವು ತನ್ನ ಕೋವಿಡ್ -19 ಲಸಿಕೆಯನ್ನು ಪೂರೈಸುವ ಮೂಲಕ ತನ್ನ ನೆರೆಹೊರೆಯವರಿಗೆ ಬೆಂಬಲ ನೀಡುತ್ತಲೇ ಬರುತ್ತಿದೆ. ಈ ಮೂಲಕ ತನ್ನ ಲಸಿಕೆ ಮೈತ್ರಿಯನ್ನು ಬಲಪಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.