ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಭಾರತೀಯ ನೌಕಾಪಡೆಯು ಸುಮಾರು 23 ವರ್ಷಗಳ ಅಂತರದ ನಂತರ ನಾಲ್ಕು ಮಹಿಳಾ ಅಧಿಕಾರಿಗಳನ್ನು ತನ್ನ ಯುದ್ಧನೌಕೆಗಳಲ್ಲಿ ನಿಯೋಜಿಸಿದೆ.
“ಇತ್ತೀಚಿಗಷ್ಟೇ ಯುದ್ಧ ನೌಕೆಗಳಲ್ಲಿ ನಾಲ್ಕು ಭಾರತೀಯ ನೌಕಾಪಡೆಯ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರಲ್ಲಿ ಇಬ್ಬರನ್ನು ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ನೇಮಿಸಲಾಗಿದ್ದು, ಇನ್ನಿಬ್ಬರನ್ನು ಐಎನ್ಎಸ್ ಶಕ್ತಿ ಎಂಬ ಟ್ಯಾಂಕರ್ ಹಡಗಿನಲ್ಲಿ ನಿಯೋಜಿಸಲಾಗಿದೆ” ಎಂದು ಭಾರತೀಯ ನೌಕಾಪಡೆಯ ವಕ್ತಾರರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಾಹಿತಿ ನೀಡಿದ್ದಾರೆ.
1998 ರಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳನ್ನು ಆನ್ಬೋರ್ಡ್ ಯುದ್ಧನೌಕೆಗಳಲ್ಲಿ ನಿಯೋಜಿಸಲು ಪ್ರಾರಂಭಿಸಲಾಯಿತು, ಆದರೆ ಕೆಲವು ವ್ಯವಸ್ಥಾಪನಾ ಮತ್ತು ಇತರ ಸಮಸ್ಯೆಗಳಿಂದಾಗಿ ನಿರ್ಧಾರವನ್ನು ನಂತರ ಬದಲಾಯಿಸಲಾಯಿತು.
ಮಹಿಳಾ ಅಧಿಕಾರಿಗಳನ್ನು ಇತ್ತೀಚೆಗೆ ಎರಡು ವಿಭಿನ್ನ ಯುದ್ಧನೌಕೆಗಳಲ್ಲಿ ನೇಮಿಸಲಾಗಿದೆ. ಟ್ಯಾಂಕರ್ ಹಡಗು ಐಎನ್ಎಸ್ ಶಕ್ತಿಯಲ್ಲಿ ನಿಯೋಜಿಸಲ್ಪಟ್ಟ ಮಹಿಳಾ ಅಧಿಕಾರಿಗಳು ವೈದ್ಯರನ್ನು ಒಳಗೊಂಡಿದ್ದು, ಇವರಿಗೆ ಭಾರತೀಯ ನೌಕಾಪಡೆಯು ವೈದ್ಯರಾಗಿ ಆನ್ಬೋರ್ಡ್ ಯುದ್ಧನೌಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
“ನಾವು ನಮ್ಮ ಪುರುಷ ಸಹವರ್ತಿಗಳೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುತ್ತೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
#WATCH Two Indian Navy women officers deployed onboard the Indian naval tanker INS Shakti talk about their role on the warship on #InternationalWomensDay. Women officers have been deployed in warships after over two decades by the Indian Navy
(Video source: Indian Navy) pic.twitter.com/eVc4gNfkEj
— ANI (@ANI) March 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.