ನವದೆಹಲಿ: ಸ್ವಿಡೀಶ್ ಮೂಲದ ಪೀಠೋಪಕರಣಗಳ ದಿಗ್ಗಜ ಸಂಸ್ಥೆಯಾದ ಐಕಿಯಾ (Ikea) ಇನ್ನು ಏಳು ವರ್ಷಗಳ ಅವಧಿಯಲ್ಲಿ ಭಾರತದ 30 ನಗರಗಳಲ್ಲಿ ಮಳಿಗೆಗಳನ್ನು ತೆರೆಯಲು ಮುಂದಾಗಿದೆ. ಕಳೆದ ವರ್ಷ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಅದರ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಳಿಗೆಗಳ ನಿರ್ಮಾಣ ಮತ್ತು ತೆರೆಯುವಿಕೆ ವಿಳಂಬವಾಗಿತ್ತು.
ಕಂಪನಿಯು ತನ್ನ ಎರಡನೇ ಭಾರತ ಮಳಿಗೆಯನ್ನು ಡಿಸೆಂಬರ್ನಲ್ಲಿ ಮುಂಬಯಿಯ ಹೊರವಲಯದಲ್ಲಿ ತೆರೆಯಿತು ಮತ್ತು ದಕ್ಷಿಣದ ಬೆಂಗಳೂರಿನಲ್ಲಿ ಮತ್ತೊಂದು ಮಳಿಗೆ ಈಗ 12 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಐಕಿಯಾ ಸಿಇಓ ಪೀಟರ್ ಬೆಟ್ಜೆಲ್ ಹೇಳಿದ್ದಾರೆ. ಮಳಿಗೆಗಳ ನಿರ್ಮಾಣ ಗುರಿಯನ್ನು ಪೂರೈಸುವ ಭರವಸೆ ಇದೆ ಎಂದಿರುವ ಅವರು, ಏಳು ವರ್ಷಗಳಲ್ಲಿ 30 ಭಾರತೀಯ ನಗರಗಳಲ್ಲಿ ಮಳಿಗೆ ಸ್ಥಾಪನೆ ನಮ್ಮ ಗುರಿ ಎಂದಿದ್ದಾರೆ.
2018 ರಲ್ಲಿ ಹೈದರಾಬಾದ್ನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದ ಐಕಿಯಾಗೆ, ಭಾರತ ಮೂಲದ ಸರಕು ಮತ್ತು ವಸ್ತುಗಳ ಅನುಪಾತವನ್ನು ಹೆಚ್ಚಿಸಲು ಕೇವಲ ಎರಡು ವರ್ಷಗಳು ಉಳಿದಿವೆ – ಪ್ರಸ್ತುತ 22% ಇದೆ. ಸ್ಥಳೀಯ ನಿಯಮಗಳನ್ನು ಪೂರೈಸಲು ಕನಿಷ್ಠ 30% ಕ್ಕೆ ಏರಿಕೆಯಾಗಬೇಕಿದೆ. ಇದನ್ನು “ಸಂಪೂರ್ಣವಾಗಿ” ಸಾಧಿಸಬಹುದಾಗಿದೆ ಎಂದು ಬೆಟ್ಜೆಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.