ನವದೆಹಲಿ: ತಾಂಡವ್ ವೆಬ್ ಸರಣಿ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಮೆಜಾನ್ ಪ್ರೈಮ್ ಬೇಷರತ್ತಾಗಿ ಕ್ಷಮೆಯಾಚಿಸಿದೆ.
ಒಂದು ವಾರದ ಹಿಂದೆ, ಅಮೆಜಾನ್ ಪ್ರೈಮ್ನ ಉನ್ನತ ಕಾರ್ಯನಿರ್ವಾಹಕನನ್ನು ಉತ್ತರ ಪ್ರದೇಶದ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮತ್ತು ಸರಣಿ ಮೂಲಕ ಕೋಮು ದ್ವೇಷವನ್ನು ಹರಡಿದ ಆರೋಪದ ಮೇಲೆ ನಾಲ್ಕು ಗಂಟೆಗಳ ಕಾಲ ಪ್ರಶ್ನಿಸಿದ್ದರು.
ಇದೀಗ “ತಾಂಡವ್” ವೆಬ್ ಸರಣಿಗಾಗಿ ಅಮೆಜಾನ್ ಪ್ರೈಮ್ ಬೇಷರತ್ತಾಗಿ ಕ್ಷಮೆಯಾಚಿಸಿದೆ.
ಇದು ಅಮೆಜಾನ್ ಪ್ರೈಮ್ ಇಂಡಿಯಾದ ಮೂರನೇ ಕ್ಷಮೆಯಾಚನೆಯ ಹೇಳಿಕೆಯಾಗಿದೆ. ಕಾರ್ಯಕ್ರಮದ ವಿರುದ್ಧ ಹಲವಾರು ಪೊಲೀಸ್ ದೂರುಗಳು ತಂಡದ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ದಾಖಲಾದ ನಂತರ ಮೊದಲ ಎರಡು ಕ್ಷಮೆಯಾಚನೆ ಹೇಳಿಕೆಯನ್ನು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಹೊರಡಿಸಿದ್ದಾರೆ.
ಮಂಗಳವಾರ ಸಂಜೆ ತಾಂಡವ್ ವೆಬ್ ಸರಣಿಯಲ್ಲಿನ ‘ಆಕ್ಷೇಪಾರ್ಹ’ ದೃಶ್ಯಗಳಿಗೆ ಕ್ಷಮೆಯಾಚಿಸಿ ಅಮೆಜಾನ್ ಪ್ರೈಮ್ ವಿಡಿಯೋ ಹೇಳಿಕೆ ನೀಡಿದೆ. ವೆಬ್ ಸರಣಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ದೇಶಾದ್ಯಂತ 10 ಎಫ್ಐಆರ್ ದಾಖಲಾದ ಬಳಿಕ, ಅಮೆಜಾನ್ ಪ್ರೈಮ್ ವಿಡಿಯೊದ ಮುಖ್ಯಸ್ಥ ಅಪರ್ಣಾ ಪುರೋಹಿತ್ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಕೆಲ ದಿನಗಳ ನಂತರ ಈ ಹೇಳಿಕೆ ಬಂದಿದೆ. ಈ ಮೊದಲು, ಚಲನಚಿತ್ರ ನಿರ್ಮಾಪಕ ಅಲಿ ಅಬ್ಬಾಸ್ ಜಾಫರ್ ಅವರು ಕಾರ್ಯಕ್ರಮದ ಪಾತ್ರವರ್ಗ ಮತ್ತು ಸಿಬ್ಬಂದಿ ಪರವಾಗಿ ಕ್ಷಮಾಪಣಾ ಹೇಳಿಕೆ ನೀಡಿದ್ದರು.
“ಇತ್ತೀಚೆಗೆ ಬಿಡುಗಡೆಯಾದ ತಾಂಡವ್ ಸರಣಿಯಲ್ಲಿ ಕೆಲವು ದೃಶ್ಯಗಳನ್ನು ಆಕ್ಷೇಪಾರ್ಹವೆಂದು ವೀಕ್ಷಕರು ಪರಿಗಣಿಸಿದ್ದಾರೆ ಎಂದು ಅಮೆಜಾನ್ ಪ್ರೈಮ್ ವಿಡಿಯೋ ಮತ್ತೊಮ್ಮೆ ತೀವ್ರವಾಗಿ ವಿಷಾದಿಸುತ್ತಿದೆ. ಇದು ನಮ್ಮ ಉದ್ದೇಶವಲ್ಲ, ಮತ್ತು ಆಕ್ಷೇಪಿಸಿದ ದೃಶ್ಯಗಳನ್ನು ನಮ್ಮ ಗಮನಕ್ಕೆ ತಂದಾಗ ಅವುಗಳನ್ನು ತೆಗೆದುಹಾಕಲಾಗಿದೆ ಅಥವಾ ಎಡಿಟ್ ಮಾಡಲಾಗಿದೆ “ಎಂದು ಅಮೆಜಾನ್ ಪ್ರೈಮ್ ತನ್ನ ಕ್ಷಮೆಯಾಚಣೆ ಪತ್ರದಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.