ನವದೆಹಲಿ: ಮಾರ್ಚ್ 27 ರಿಂದ ಪ್ರಾರಂಭವಾಗುವ ಎಂಟು ಹಂತದ ಚುನಾವಣೆಗೂ ಮುನ್ನ ಬಂಗಾಳದ ಬಿಜೆಪಿ ಕಾರ್ಯಕರ್ತ ಮತ್ತು ಆತನ ತಾಯಿಯನ್ನು ಟಿಎಂಸಿ ಗೂಂಡಾಗಳು ನಿರ್ದಯವಾಗಿ ಥಳಿಸಿದ್ದಾರೆ.
ಈ ಘಟನೆಗೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದ್ದು, ಥಳಿತಕ್ಕೊಳಗಾದ ಹಿರಿಯ ತಾಯಿಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಆಕೆಯ ಮುಖ ಊದಿಕೊಂಡಿದ್ದು, ಹೃದಯ ಕರಗುವಂತಿದೆ.
ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷವು ಭಾನುವಾರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಆದರೆ, ತೃಣಮೂಲ ಕಾಂಗ್ರೆಸ್ ಈ ಆರೋಪಗಳನ್ನು ನಿರಾಕರಿಸಿದೆ.
“ಅವರು ನನ್ನ ತಲೆ ಮತ್ತು ಕುತ್ತಿಗೆಗೆ ಹೊಡೆದರು. ಅವರು ನನ್ನ ಮುಖಕ್ಕೂ ಹೊಡೆದರು. ನನಗೆ ಭಯವಾಗುತ್ತಿದೆ. ಈ ಬಗ್ಗೆ ಯಾರಿಗೂ ಹೇಳಬಾರದೆಂದು ಅವರು ನನಗೆ ಬೆದರಿಕೆ ಹಾಕಿದ್ದಾರೆ. ನನ್ನ ಇಡೀ ದೇಹವು ನೋವಿನಿಂದ ಕೂಡಿದೆ” ಎಂದು ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿ ಶೋವಾ ಮಜುಂದಾರ್ ಬಂಗಾಳಿಯಲ್ಲಿ ಹೇಳಿದ್ದಾರೆ.
ಆ ತಾಯಿಯ ಮಾತುಗಳ ವಿಡಿಯೋವನ್ನು ಬಿಜೆಪಿಯ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ.
“They hit me on my head and neck and punched me. They hit me on my face too. I’m scared….”
Listen to the mother of a BJP karyakarta, Gopal Majumdar of 24 Paraganas, who was beaten mercilessly by TMC goons.
ममता दीदी, इस वृद्ध महिला के दर्द और आँसूओं का हिसाब आपको देना होगा। pic.twitter.com/kuxtgBwWYF
— BJP (@BJP4India) February 28, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.