ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸಾಂ ವಾರಿಯರ್’ ಪುಸ್ತಕವನ್ನು ಕೆಲವು ಹೊಸ ಧ್ಯೇಯಗಳೊಂದಿಗೆ ನವೀಕರಿಸಿದ್ದಾರೆ. ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಪುಸ್ತಕವನ್ನು ಮೋದಿ ಬರೆದಿದ್ದಾರೆ. 10 ಮತ್ತು 12 ನೇ ತರಗತಿ ಪರೀಕ್ಷೆಗಳು ಸನಿಹದಲ್ಲಿಯೇ ಇರುವುದರಿಂದ, ಪರೀಕ್ಷೆಯ ಒತ್ತಡವನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಕೆಲವು ಉಪಯುಕ್ತ ಸಲಹೆಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.
ಮೋದಿ ಅವರು ತಮ್ಮ ‘ಎಕ್ಸಾಂ ವಾರಿಯರ್’ ಪುಸ್ತಕದ ಇತ್ತೀಚಿನ ನವೀಕರಣವನ್ನು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, “ನಾನು ಎಕ್ಸಮ್ ವಾರಿಯರ್ಸ್ ಪುಸ್ತಕವನ್ನು ನವೀಕರಿಸಿದ್ದೇನೆ. ಹೊಸ ಧ್ಯೇಯಗಳನ್ನು ಇದರಲ್ಲಿ ಸೇರಿಸಲಾಗಿದೆ ಮತ್ತು ಆಸಕ್ತಿದಾಯಕ ಚಟುವಟಿಕೆಗಳಿವೆ” ಎಂದಿದ್ದಾರೆ. ಪೋಷಕರು ಮತ್ತು ಶಿಕ್ಷಕರಿಗೆ ಹೊಸ ಮಂತ್ರಗಳನ್ನು ಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.
“ಹೊಸ ವಿಷಯಗಳಿಗೆ ಸಂಬಂಧಿಸಿದ ವಿವಿಧ ಆಸಕ್ತಿದಾಯಕ ಚಟುವಟಿಕೆಗಳು ಮೈಗೌವ್ ಅಪ್ಲಿಕೇಶನ್ನಲ್ಲಿ ಲಭ್ಯವಿದೆ, ಅದು ನಿಮ್ಮೊಳಗಿನ ಪರೀಕ್ಷಾ ಯೋಧರನ್ನು ಬಡಿದೆಬ್ಬಿಸಲು ಸಹಾಯ ಮಾಡುತ್ತದೆ. ನೀವು ಇವುಗಳನ್ನು ಪ್ರಯತ್ನಿಸಬೇಕು” ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
“ನೆನಪಿಡಿ, ನೀವು ಯೋಧರಾಗಿರಬೇಕೇ ಹೊರತು ಚಿಂತಿಸುವವರಲ್ಲ. ನಿಮ್ಮೊಂದಿಗೆ ಸ್ಪರ್ಧಿಸಿ, ಇತರರೊಂದಿಗೆ ಅಲ್ಲ. ಸರಿಯಾದ ನಿದ್ರೆ ಮಾಡಿ ಸಮಯ ನಿರ್ವಹಣೆಯನ್ನು ಕಲಿಯಿರಿ. ನೀವು ಆಟಗಳನ್ನು ಅಥವಾ ಕ್ರೀಡೆಯನ್ನು ಸಹ ಆಡಬೇಕು. ಪರೀಕ್ಷೆಗಳಿಗಾಗಿ ಕ್ರೀಡೆಗಳನ್ನು ಬಿಡುವುದು ಉತ್ತಮ ಉಪಾಯವಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.