ಕೊಝಿಕೋಡ್: ಕೇರಳದ ಕೊಝಿಕೋಡ್ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಂದ 100 ಕ್ಕೂ ಹೆಚ್ಚು ಜೆಲೆಟಿನ್ ಸ್ಟಿಕ್ ಮತ್ತು 350 ಡಿಟೋನೇಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚೆನ್ನೈ-ಮಂಗಳೂರು ಸೂಪರ್ಫಾಸ್ಟ್ ರೈಲಿನಲ್ಲಿ ಕಟ್ಪಾಡಿಯಿಂದ ತಲಶೇರಿಗೆ ಪ್ರಯಾಣಿಸುತ್ತಿದ್ದ ತಿರುವಣ್ಣಾಮಲೈ ಮೂಲದ ರಮಣಿ ಎಂಬ ಪ್ರಯಾಣಿಕಳನ್ನು ಪಾಲಕ್ಕಾಡ್ ಮೂಲದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಘಟಕದ ವಿಶೇಷ ದಳ ವಶಕ್ಕೆ ತೆಗೆದುಕೊಂಡಿದೆ.
ಆಕೆಯನ್ನು ಆರ್ಪಿಎಫ್ ಮತ್ತು ಕೇರಳ ಪೊಲೀಸರ ವಿಶೇಷ ಶಾಖೆ ವಿಚಾರಣೆ ನಡೆಸುತ್ತಿದೆ.
ಡಿ 1 ಕೋಚ್ನಲ್ಲಿ ಆಸನದ ಕೆಳಗೆ ಇಟ್ಟಿದ್ದ ಚೀಲದಲ್ಲಿ ಸ್ಫೋಟಕಗಳ ಸಂಗ್ರಹ ಪತ್ತೆಯಾಗಿದೆ. ಎಲ್ಲಾ 117 ಜೆಲೆಟಿನ್ ತುಂಡುಗಳು ಮತ್ತು 350ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ವರದಿಗಳ ಪ್ರಕಾರ, ಆಕೆ ರೈಲಿನಲ್ಲಿ ಸ್ಫೋಟಕಗಳನ್ನು ಸಾಗಿಸಿದ್ದನ್ನು ಒಪ್ಪಿಕೊಂಡಿದ್ದಾಳೆ. ಸ್ಫೋಟಕಗಳನ್ನು ಥಲಶೇರಿಯಲ್ಲಿ ಬಾವಿಗಳನ್ನು ಅಗೆಯುವ ಉದ್ದೇಶದಿಂದ ಸಾಗಾಣೆ ಮಾಡಲಾಗುತ್ತಿತ್ತು ಎಂದು ಹೇಳಿದ್ದಾಳೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.