ನವದೆಹಲಿ: ಫಿಟ್ ಇಂಡಿಯಾ ಸೈಕ್ಲೋಥಾನ್ನ ಎರಡನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಇದರ ಭಾಗವಾಗಿ ಡಿಸೆಂಬರ್ 7ರಿಂದ 31ರವರೆಗೆ ದೇಶದಾದ್ಯಂತ ಮೆಗಾ ಸೈಕ್ಲಿಂಗ್ ಈವೆಂಟ್ ಆಯೋಜನೆಗೊಳ್ಳಲಿದೆ.
ಫಿಟ್ ಇಂಡಿಯಾ ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸುವ ಮೂಲಕ ನಾಗರಿಕರು ಇದರಲ್ಲಿ ಭಾಗಿಯಾಗಬಹುದು.
ಭಾಗಿದಾರರು ತಾವು ಸೈಕ್ಲಿಂಗ್ ಮಾಡುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ @FitIndiaOff ಟ್ಯಾಗ್ ಮಾಡಬೇಕು ಅಥವಾ #FitIndiaCyclothon ಮತ್ತು #NewIndiaFitIndia ಬಳಸಬೇಕು.
ಫಿಟ್ ಇಂಡಿಯಾ ಸೈಕ್ಲೋಥಾನ್ನ ಉದ್ಘಾಟನಾ ಆವೃತ್ತಿ 2020ರ ಜನವರಿಯಲ್ಲಿ ಆರಂಭಗೊಂಡಿದ್ದು, ದೇಶದಾದ್ಯಂತದ 35 ಲಕ್ಷ ಸೈಕ್ಲಿಂಗ್ ಪಟುಗಳು ಇದರಲ್ಲಿ ಭಾಗಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.