ದೇಶದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮವೊಂದಕ್ಕೆ ವಿಸ್ತೃತ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೊರೋನಾ, ಆರ್ಥಿಕ ವಿಷಯಗಳಿಂದ ಹಿಡಿದು ಕಾರ್ಮಿಕ ಸುಧಾರಣೆಗಳವರೆಗೆ ಮಾತನಾಡಿದ್ದಾರೆ.
ಸಾಂಕ್ರಾಮಿಕದ ಹೊಡೆತದಿಂದ ನಿಧಾನಕ್ಕೆ ದೇಶದ ಆರ್ಥಿಕತೆಗೆ ಚೇತರಿಕೆಯನ್ನು ಕಾಣುತ್ತಿದೆ. ನಿರೀಕ್ಷೆಗಿಂತ ಹೆಚ್ಚಾಗಿ ಆರ್ಥಿಕತೆ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರವು ಇತ್ತೀಚಿಗೆ ತೆಗೆದುಕೊಂಡ ಸುಧಾರಣಾ ಕ್ರಮಗಳು ‘ನವ ಭಾರತವು ಮಾರುಕಟ್ಟೆ ಮತ್ತು ಮಾರುಕಟ್ಟೆ ಶಕ್ತಿಯ ಮೇಲೆ ನಂಬಿಕೆ ಇಟ್ಟಿದೆ’ ಎಂಬುದನ್ನು ವಿಶ್ವಕ್ಕೆ ಸಾರಿ ಹೇಳಿದೆ ಎಂದಿದ್ದಾರೆ. ಅಲ್ಲದೆ ಭಾರತವನ್ನು ವಿಶ್ವದ ಅತಿದೊಡ್ಡ ಹೂಡಿಕೆ ತಾಣವನ್ನಾಗಿ ಪರಿವರ್ತನೆ ಮಾಡಲು ನಾವು ಸುಧಾರಣಾ ಕ್ರಮಗಳನ್ನು ಮುಂದುವರೆಸಲಿದ್ದೇವೆ ಎಂದಿದ್ದಾರೆ.
“ಭಾರತವನ್ನು ವಿಶ್ವದ ಅತಿ ದೊಡ್ಡ ಹೂಡಿಕೆ ತಾಣವಾಗಿ ಮಾಡಲು ನಾವು ಸುಧಾರಣಾ ಅಭಿಯಾನವನ್ನು ಮುಂದುವರೆಸಲಿ ಇದ್ದೇವೆ. Moody ಪ್ರಕಾರ, 2020ರಲ್ಲಿ ಅಮೆರಿಕದ 154 ಗ್ರೀನ್ಫೀಲ್ಡ್ ಯೋಜನೆಗಳು ಭಾರತಕ್ಕೆ ಬಂದಿವೆ. ಚೀನಾಗೆ ಕೇವಲ 86, ನಮಗೆ ಕೇವಲ 12 ಮತ್ತು ಮಲೇಷ್ಯಾಗೆ ಕೇವಲ 15 ಯೋಜನೆಗಳು ಹೋಗಿವೆ. ಇದು ಭಾರತದ ಪ್ರಗತಿಯಲ್ಲಿ ಜಾಗತಿಕ ವಿಶ್ವಾಸವನ್ನು ತೋರಿಸುತ್ತದೆ. ಭಾರತವನ್ನು ಅತ್ಯುನ್ನತ ಉತ್ಪಾದನೆ ಕೇಂದ್ರವನ್ನಾಗಿ ಮಾಡಲು ನಾವು ಅಡಿಪಾಯ ಹಾಕಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
ಚೀನಾದ ಹೆಸರು ಹೇಳದ ಅವರು, ಸಾಂಕ್ರಾಮಿಕ ರೋಗದ ಬಳಿಕದ ಹೊಸ ವಿಶ್ವ ವ್ಯವಸ್ಥೆಯಲ್ಲಿ ಭಾರತವು ಜಾಗತಿಕ ಪೂರೈಕೆ ಸರಪಳಿಯನ್ನು ಮುನ್ನಡೆಸಲಿದೆ. ಭಾರತವು ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ಸಂಯೋಜನೆಯ ವಾಹನವನ್ನು ಮುನ್ನಡೆಸಲಿದೆ ಎಂದಿದ್ದಾರೆ.
“ಇತರರ ನಷ್ಟದಿಂದ ಗಳಿಕೆ ಮಾಡುವ ನಂಬಿಕೆಯನ್ನು ಭಾರತ ಇಟ್ಟುಕೊಂಡಿಲ್ಲ. ಆದರೆ ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ಪ್ರಯೋಜನವನ್ನು ಖಂಡಿತ ಪಡೆಯುತ್ತದೆ” ಎಂದಿದ್ದಾರೆ.
“ನಾವು ಉತ್ತಮವಾದ ನಿರೀಕ್ಷೆಯನ್ನು ಇಟ್ಟುಕೊಂಡಿರಬೇಕು, ಆದರೆ ಕೆಟ್ಟ ಸಂಭವನೀಯತೆಗೆ ಸದಾ ಸಿದ್ಧವಾಗಿರಬೇಕು. ಇಂದು ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ನಾವು ವೈರಸ್ ಅನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲ. ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ದ ಪ್ರಭಾವ ತುಸು ಕಡಿಮೆಯಾಗುತ್ತಿದೆ, ಆದರೆ ಇದು ಸಂಭ್ರಮಾಚರಣೆಯ ವಿಷಯವಲ್ಲ ಬದಲಾಗಿ ನಾವು ಇನ್ನಷ್ಟು ದೃಢವಾಗುವ, ವರ್ತನೆ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಮಯವಾಗಿದೆ” ಎಂದಿದ್ದಾರೆ.
ಕೊರೋನಾ ಲಸಿಕೆಯ ವಿತರಣೆಯ ಬಗ್ಗೆ ಮಾತನಾಡಿದ ಅವರು, ಒಂದು ಬಾರಿ ಲಸಿಕೆ ಸಿದ್ಧವಾದರೆ ಎಲ್ಲರಿಗೂ ಅದನ್ನು ಲಭ್ಯವಾಗುವಂತೆ ಮಾಡುವ ಪ್ರಯತ್ನಗಳು ಸಾಗಿದೆ. ಲಸಿಕೆ ಲಭ್ಯವಾದ ಕೂಡಲೇ ಎಲ್ಲರಿಗೂ ಅದನ್ನು ಸಿಗುವಂತೆ ಮಾಡಲಾಗುವುದು ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ” ಎಂದಿದ್ದಾರೆ.
ಲಾಕ್ಡೌನ್ ಮತ್ತು ಅನ್ಲಾಕ್ ಎರಡನ್ನು ಸೂಕ್ತ ಸಂದರ್ಭದಲ್ಲಿ ಮಾಡಲಾಗಿದೆ. ಇದರಿಂದಾಗಿ ಹಲವಾರು ಮಂದಿಯ ಜೀವಗಳು ಉಳಿದುಕೊಂಡಿವೆ. ಪ್ರಸ್ತುತ ಆರ್ಥಿಕತೆ ಕೂಡ ಹೊಡೆತದಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಯಾಗುವ ವಾದವನ್ನು ಭಾರತ ಈಗಲೂ ಇಟ್ಟುಕೊಂಡಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೋರೋನಾ ನಂತರದ ಭಾರತ ಸಮೃದ್ಧಿಯಿಂದ ಕೂಡಿರಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಆಶಾವಾದ ನಿಜವಾಗಲಿ ಎಂದು ಹಾರೈಸೋಣ.
ಕೃಪೆ: ಎಕನಾಮಿಕ್ ಟೈಮ್ಸ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.