ಉಧಮ್ ಸಿಂಗ್ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಅವರು ಕಾಂತ್ರಿಕಾರಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಉಧಮ್ ಸಿಂಗ್ ಅವರನ್ನು ಶಹೀದ್-ಇ-ಆಝಮ್ ಎಂದು ಕರೆಯಲಾಗುತ್ತದೆ. ಇದರ ಅರ್ಥ ಮಹಾನ್ ಹುತಾತ್ಮ ಎಂದು .
ಉಧಮ್ ಸಿಂಗ್ 26 ಡಿಸೆಂಬರ್ 1899 ರಲ್ಲಿ ಪಂಜಾಬಿನ ಸಂಗ್ರೂರಿನ ಸುನಮ್ನಲ್ಲಿ ಜನಿಸಿದ್ದರು. ಉಧಮ್ ಅವರ ತಂದೆ ಸರ್ದಾರ್ ತೆಹಲ್ ಸಿಂಗ್ ಜಮ್ಮು ರೈಲ್ವೆ ಇಲಾಖೆಯ ರೈಲ್ವೆ ಕ್ರಾಂಸಿಗ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ತಂದೆ-ತಾಯಿಯ ಮರಣಾ ನಂತರ ಉಧಮ್ ಸಿಂಗ್ ಮತ್ತು ಅವರ ಹಿರಿಯ ಸಹೋದರನನ್ನು ಆಶ್ರಮಕ್ಕೆ ಕಳುಹಿಸಲಾಯಿತು.
ಅಲ್ಲಿ ಉಧಮ್ ಸಿಂಗ್ ಸಿಖ್ಖರ ದೀಕ್ಷಾ ವಿಧಿಗಳನ್ನು ಸ್ವೀಕರಿಸಿ ಉಧಮ್ ಎಂದು ಹೆಸರು ಪಡೆದರು. ಆವರೆಗೂ ಅವರನ್ನು ಚುಹರ್ ಸಿಂಗ್ ಎಂದು ಕರೆಯಲಾಗುತ್ತಿತ್ತು. 1918ರಲ್ಲಿ ಅವರು ತನ್ನ ಮೆಟ್ರಿಕ್ಯುಲೇಷನ್ ಅನ್ನು ಪೂರ್ಣಗೊಳಿಸಿದರು. ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದು ಎಂದರೆ ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ. ಇದು ಅವರನ್ನು ಕ್ರಾಂತಿಕಾರಿಯನ್ನಾಗಿಸಿತು.
10 ಏಪ್ರಿಲ್ 1919 ಕಾಂಗ್ರೆಸ್ ನಾಯಕರಾದ ಸತ್ಯಪಾಲ ಮತ್ತು ಸೈಫುದ್ದೀನ್ ಕಿಜಲ್ವೆ ಅವರನ್ನು ರೈಲೆಟ್ ಆಕ್ಟ್ನ ಪ್ರಕಾರ ಬಂಧಿಸಲಾಯಿತು. ಅಲ್ಲದೆ ಅಲ್ಲಿ ಧರಣಿ ನಡೆಸುತ್ತಿರುವವರ ಮೇಲೆ ಬ್ರಿಟಿಷರಿಂದ ಗುಂಡು ಹೊಡೆಯಲಾಯಿತು. ಇದನ್ನು ಖಂಡಿಸಿ ಜಲಿಯನ್ ವಾಲಾ ಬಾಗ್ನಲ್ಲಿ ಪ್ರತಿಭಟನೆ ನಡೆಯಿತು. ಆಗ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅನುಮತಿಯಂತೆ ಗುಂಡುಗಳನ್ನು ಹಾರಿಸಲಾಯಿತು. ಬ್ರಿಟಿಷರ ಈ ಕೃತ್ಯಕ್ಕೆ ಬಲಿಯಾದದ್ದು 379 ಜೀವಗಳು. 1200 ಜನರು ಗಾಯಗೊಂಡರು.
ಈ ಘಟನೆಯು ಉಧಮ್ ಮೇಲೆ ಭಾರಿ ಪ್ರಭಾವವನ್ನು ಬೀರಿತು. ಪಂಜಾಬಿನ ಗವರ್ನರ್ ಮೈಕಲ್ ಒಡ್ವೆಯರ್ ಅವರ ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದ್ದು ಎಂದು ಭಾವಿಸಿದ್ದರು.
ಭಗತ್ ಸಿಂಗ್ ಗದ್ದರ್ ಪಾರ್ಟಿಯನ್ನು ಆಯೋಜಿಸಿದರು. ಅದಕ್ಕಾಗಿ ಅವರು 25 ಜನರಿಗೆ ಬೇಕಾಗುವಷ್ಟು ಮದ್ದುಗುಂಡುಗಳನ್ನು ತರಲು ಉಧಮ್ ಅವರಿಗೆ ಹೇಳಿದ್ದರು. ಉಧಮ್ ಅದನ್ನು ತರುವ ಸಂದರ್ಭ ಗದ್ದರ್ ಪಾರ್ಟಿಯ ಕರಪತ್ರದೊಂದಿಗೆ ಬ್ರಿಟಿಷರ ಬಳಿ ಸಿಕ್ಕಿಬಿದ್ದರು. ಅದಕ್ಕಾಗಿ 5 ವರ್ಷ ಸೆರೆವಾಸವನ್ನೂ ಅನುಭವಿಸಿದರು.
ತದನಂತರಉಧಮ್ ಅವರು ಕಾಶ್ಮೀರ, ಅಲ್ಲಿಂದ ಮತ್ತೆ ಜರ್ಮನಿ ಮತ್ತು ಜರ್ಮನಿಯಿಂದ ಲಂಡನ್ಗೆ ತೆರಳಿದರು. ಅಲ್ಲಿ ಅಧಮ್ ಗವರ್ನರ್ ಮೈಕಲ್ ಒಡ್ವೆಯರ್ ಮೇಲೆ ಗುಂಡಿನ ದಾಳಿ ನಡೆಸಿ ಕೊಂದರು. ಇದಕ್ಕಾಗಿ ಅವರಿಗೆ ಬ್ರಿಟಿಷರು ಗಲ್ಲು ಶಿಕ್ಷೆ ವಿಧಿಸಿದರು.
ವಿಚಾರಣೆಯಲ್ಲಿ ಉಧಮ್ ಸಿಂಗ್ ಕೋರ್ಟ್ನಲ್ಲಿ ನೀಡಿದ ಹೇಳಿಕೆ ಇದು: ನಾನು ಆತನ ಮೇಲೆ ದ್ವೇಷವನ್ನು ಹೊಂದಿದ್ದೆ. ಆತ ಅದಕ್ಕೆ ಯೋಗ್ಯನು ಕೂಡಾ. ಆತ ಒಬ್ಬ ನಿಜವಾದ ಆರೋಪಿ. ಆತ ನನ್ನ ದೇಶದ ಮಣ್ಣಿನ ಗುಣವನ್ನು ನಾಶಪಡಿಸಲು ಮುಂದಾಗಿದ್ದ. ನಾನು ಮಾಡಿದ ಕೃತ್ಯಕ್ಕೆ ನಾನು ಸಂತಸ ಪಡುತ್ತಿದ್ದೇನೆ. ಇದಕ್ಕಾಗಿ 21 ವರ್ಷಗಳಿಂದ ನಾನು ಕಾಯುತ್ತಿದ್ದೆ. ನನ್ನ ದೇಶದ ಜನರು ಬ್ರಿಟಿಷರ ಆಡಳಿತದಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ, ಇದು ನನ್ನ ಕರ್ತವ್ಯವೂ ಕೂಡ. ತಾಯಿ ಭಾರತಾಂಬೆಗಾಗಿ ನನ್ನ ಜೀವವನ್ನು ಸಮರ್ಪಿಸಿರುವುದು ನನಗೆ ಗೌರವದ ಸಂಗತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.