ನವದೆಹಲಿ: ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆಗೆ ಕುರಿತಾದಂತೆ ಇತರ ದೇಶಗಳ ಜೊತೆಗೆ ಕೆಲಸ ಮಾಡಲು, ನಾಯಕತ್ವ ನಿರ್ವಹಿಸಲು ಭಾರತ ಸಿದ್ಧವಿರುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
‘ಅಂತರರಾಷ್ಟ್ರೀಯ ಹುಲಿ ದಿನ’ (29 ಜುಲೈ) ದ ಅಂಗವಾಗಿ ಮಾತನಾಡಿದ ಜಾವಡೇಕರ್, 1973 ರಲ್ಲಿ 9 ಹುಲಿ ಸಂರಕ್ಷಿತ ಪ್ರದೇಶ ಇದ್ದು, ಪ್ರಸ್ತುತ 50 ಕ್ಕೆ ಏರಿಕೆಯಾಗಿದೆ. ಈ ಪ್ರದೇಶಗಳ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ಹುಲಿ ಸಂರಕ್ಷಣಾ ಮೀಸಲು ಪ್ರದೇಶಗಳು ಅತ್ಯುತ್ತಮವಾಗಿವೆ. ಹುಲಿಗಳ ಸಂರಕ್ಷಣೆಯ ವಿಚಾರದಲ್ಲಿ ಕೆಲಸ ಮಾಡಲು ಭಾರತ ಉತ್ಸುಕವಾಗಿದೆ. ಇತರ 12 ಹುಲಿ ಸಂರಕ್ಷಿತ ದೇಶಗಳ ಜೊತೆಗೆ ತರಬೇತಿ, ಸಾಮರ್ಥ್ಯ ಹೆಚ್ಚಳ, ಮೀಸಲು ಪ್ರದೇಶಗಳ ನಿರ್ವಹಣೆ ಮೊದಲಾದ ವಿಚಾರಗಳನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ. ವಿಶ್ವ ಜೀವ ವೈವಿಧ್ಯಗಳ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ 8% ಪಾಲು ಹೊಂದಿದ್ದು, ಇದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.
ವಿಶ್ವ ಹುಲಿ ದಿನದ ಅಂಗವಾಗಿ ದೇಶದ 50 ಹುಲಿ ಮೀಸಲು ಪ್ರದೇಶಗಳ ಈಗಿನ ವಸ್ತುಸ್ಥಿತಿ ಗಳ ಬಗ್ಗೆ ವರದಿ ಬಿಡುಗಡೆಯಾಗಿದ್ದು, ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಪಾಡಿಕೊಂಡಿದೆ.
ಭಾರತ, ಚೀನಾ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಲಾವೋ, ಮಲೇಷ್ಯಾ ಮೊದಲಾದ 13 ದೇಶಗಳಲ್ಲಿ ಹುಲಿ ಸಂತತಿ ಇದೆ.
ಜಾವಡೇಕರ್ ಅವರ ಪ್ರಕಾರ, ಭಾರತವು ವಿಶ್ವದಲ್ಲಿ ಸುಮಾರು 70% ರಷ್ಟು ಹುಲಿಗಳಿಗೆ ನೆಲೆಯಾಗಿದೆ. ಭಾರತದಲ್ಲಿ ಸುಮಾರು 30,000 ಆನೆಗಳು ಮತ್ತು 500 ಸಿಂಹಗಳಿವೆ ಎಂದು ಅವರು ಹೇಳಿದ್ದಾರೆ.
ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್ 29 ಅನ್ನು ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.