ಕುವೈಟ್: ಕುವೈಟ್ನ ನ್ಯಾಷನಲ್ ಅಸೆಂಬ್ಲಿಯ ಕಾನೂನು ಮತ್ತು ಶಾಸಕಾಂಗ ಸಮಿತಿಯು ಕರಡು ಎಕ್ಸ್ಪ್ಯಾಟ್ ಕೋಟಾ ಮಸೂದೆಗೆ ಅನುಮೋದನೆ ನೀಡಿದ್ದು, ಇದರಿಂದಾಗಿ 8 ಲಕ್ಷ ಭಾರತೀಯರು ಆ ದೇಶವನ್ನು ತೊರೆಯಬೇಕಾದ ಆತಂಕ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.
ಡ್ರಾಫ್ಟ್ ಎಕ್ಸ್ಪ್ಯಾಟ್ ಕೋಟಾ ಮಸೂದೆ ಸಾಂವಿಧಾನಿಕ ಎಂದು ನ್ಯಾಷನಲ್ ಅಸೆಂಬ್ಲಿಯ ಕಾನೂನು ಮತ್ತು ಶಾಸಕಾಂಗ ಸಮಿತಿ ನಿರ್ಧರಿಸಿದೆ ಎಂದು ಗಲ್ಫ್ ನ್ಯೂಸ್ ಸ್ಥಳೀಯ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈ ಮಸೂದೆಯ ಪ್ರಕಾರ ಭಾರತೀಯರು ಕುವೈಟ್ ಜನಸಂಖ್ಯೆಯ 15 ಪ್ರತಿಶತದಷ್ಟನ್ನು ಮೀರಬಾರದು. ಮಸೂದೆಯನ್ನು ಆಯಾ ಸಮಿತಿಗೆ ವರ್ಗಾಯಿಸಿ ಇದರಿಂದ ಸಮಗ್ರ ಯೋಜನೆಯನ್ನು ರಚಿಸಲಾಗುತ್ತದೆ ಎಂದು ಅಲ್ಲಿನ ಆಡಳಿತ ಹೇಳಿದೆ.
ಇದು 8 ಲಕ್ಷ ಭಾರತೀಯರು ಕುವೈಟ್ನಿಂದ ಹೊರಹೋಗಲು ಕಾರಣವಾಗಬಹುದು, ಏಕೆಂದರೆ ಭಾರತೀಯ ಸಮುದಾಯವು ಕುವೈಟ್ನಲ್ಲಿ ಅತಿದೊಡ್ಡ ವಲಸಿಗ ಸಮುದಾಯವಾಗಿದೆ, ಒಟ್ಟು 1.45 ಮಿಲಿಯನ್ ಭಾರತೀಯರು ಅಲ್ಲಿ ಇದ್ದಾರೆ.
ಕುವೈಟ್ನ 4.3 ಮಿಲಿಯನ್ ಜನಸಂಖ್ಯೆಯಲ್ಲಿ, ವಲಸಿಗರು 3 ಮಿಲಿಯನ್. ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಿಂದಲೂ ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು ಕುವೈಟ್ನಲ್ಲಿ ವಿದೇಶಿಯರ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಬೇಡಿಕೆ ಇಡುತ್ತಾ ಬಂದಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಕುವೈಟ್ ರಾಷ್ಟ್ರದಲ್ಲಿ 49,000 ಕ್ಕೂ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.