ನವದೆಹಲಿ: ಎಲ್ಲೆಲ್ಲೂ ಕೊರೋನಾ ಸೋಂಕು ರಣ ಕೇಕೆ ಹಾಕುತ್ತಿದೆ. ವಿಶ್ವವೇ ಇಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಪೇಚಾಡುತ್ತಿದೆ. ಭಾರತದಲ್ಲೂ ಸ್ಥಿತಿ ಭಿನ್ನವಾಗಿಲ್ಲ. ಸೋಂಕು ಹರಡದಂತೆ ತಡೆಯಲು ದೇಶವನ್ನು ಲಾಕ್ಡೌನ್ ಮಾಡಲಾಗಿದ್ದು, ಮಾಸ್ಕ್ಗಳನ್ನು ಬಳಕೆ ಮಾಡಿ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳುವಂತೆ ಜನರಲ್ಲಿ ಸರ್ಕಾರ ಮನವಿ ಮಾಡಿಕೊಂಡಿದೆ.
ಮನೆಯಲ್ಲಿ ಕೇವಲ ಎರಡೇ ನಿಮಿಷದಲ್ಲಿ ಕರವಸ್ತ್ರ ಮತ್ತು ರಬ್ಬರ್ ಬ್ಯಾಂಡ್ಗಳನ್ನು ಬಳಸಿ ಹೋಂ ಮೇಡ್ ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸುವ ವಿಡಿಯೋ ಒಂದನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಇತರ ಸಲಕರಣೆಗಳ ಸಹಾಯವಿಲ್ಲದೆ ಮಾಸ್ಕ್ ತಯಾರಿಸುವ ವಿಧಾನವನ್ನು ವಿಡಿಯೋ ಮಾಡಿದ್ದಾರೆ. ಆ ಮೂಲಕ ಹೀಗೂ ಮಾಸ್ಕ್ ತಯಾರಿಸಿ ಬಳಸಿ ನಮ್ಮನ್ನು ನಾವು ಸೋಂಕಿನಿಂದ ಸಂರಕ್ಷಿಸಿಕೊಳ್ಳಬಹುದು ಎಂಬ ಸಂದೇಶವನ್ನು ಜಾವೇಡ್ಕರ್ ತಿಳಿಸಿದ್ದಾರೆ.
मास्क वापरणे आवश्यक झाले आहे. प्रत्येकजण घरच्या घरी काही क्षणात मास्क बनवू शकतो. मी स्वतः बनवला आहे, आपणही बनवू शकता! आपल्यासाठी हा वीडियो.#WearFaceCoverStaySafe#IndiaFightsCorona@BJP4Maharashtra @BJP4India pic.twitter.com/iofDD7SWp6
— Prakash Javadekar (@PrakashJavdekar) April 13, 2020
ದೇಶದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ದುಬಾರಿ ಮಾಸ್ಕ್ಗಳನ್ನು ಕೊಳ್ಳದೆ ಮನೆಯಲ್ಲಿಯೇ ಸುಲಭವಾಗಿ ಹೀಗೂ ಮಾಸ್ಕ್ ತಯಾರಿಸಿ ಬಳಕೆ ಮಾಡಬಹುದು ಎಂಬುದನ್ನು ತಿಳಿಸುವ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.