ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಪುರಸ್ಕಾರ 2020 ಕ್ಕೆ ಸದಾನಂದನ್ ಮಾಸ್ಟರ್ ಭಾಜನರಾಗಿದ್ದಾರೆ. 1983ರಲ್ಲಿ ಈ ಪುರಸ್ಕಾರವನ್ನು ಸ್ವಾತಂತ್ರ್ಯ ವೀರ ಸಾವರ್ಕರ್ ಮಂಡಲ ಸ್ಥಾಪನೆ ಮಾಡಿತು. ಫೆಬ್ರವರಿ 26 ರಂದು ಸಾವರ್ಕರ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ.
ಪ್ರಶಸ್ತಿಯು ಒಂದು ಲಕ್ಷ ರೂಪಾಯಿಗಳ ನಗದನ್ನು ಹೊಂದಿದೆ. ಕೇರಳದ ಕಮ್ಯುನಿಸ್ಟ್-ಕೆಂಪು ಭಯೋತ್ಪಾದಕ ಪೀಡಿತ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ನೀಡಿದ ಅದ್ಭುತ ಕೊಡುಗೆಗಾಗಿ ಸದಾನಂದನ್ ಮಾಸ್ಟರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸದಾನಂದನ್ ಮಾಸ್ಟರ್ ಓರ್ವ ಸ್ವಯಂಸೇವಕ, ಕಣ್ಣೂರು ಮೂಲದವರು. ಕೇರಳದ ಕಮ್ಯುನಿಸ್ಟ್ ಭಯೋತ್ಪಾದನೆಯ ಜೀವಂತ ಹುತಾತ್ಮ. 1994ರಲ್ಲಿ ಆರ್ಎಸ್ಎಸ್ ಜಿಲ್ಲಾ ಸಹ ಕಾರ್ಯವಾಹ ಆಗಿದ್ದ ಸಂದರ್ಭದಲ್ಲಿ ಇವರ ಎರಡೂ ಕಾಲುಗಳನ್ನು ಸಿಪಿಎಂ ಕ್ರೂರಿಗಳು ಕತ್ತರಿಸಿ ಹಾಕಿದ್ದಾರೆ.
ಸದಾನಂದನ್ ಮಾಸ್ಟರ್: ಕಮ್ಯುನಿಸ್ಟ್ ಅಸಹಿಷ್ಣುತೆಯ ಜೀವಂತ ಹುತಾತ್ಮ
ಕಮ್ಯುನಿಸ್ಟ್ ಕುಟುಂಬದಲ್ಲಿ ಜನಿಸಿದ ಮಾಸ್ಟರ್ ಸ್ವಾಭಾವಿಕವಾಗಿಯೇ ಎಡಪಂಥೀಯ ಸಿದ್ಧಾಂತದತ್ತ ಒಲವನ್ನು ಹೊಂದಿದ್ದರು. ನಂತರ, ಕಮ್ಯುನಿಸಂನ ಸೈದ್ಧಾಂತಿಕ ದಿವಾಳಿತನ ಬಹಿರಂಗಗೊಂಡಾಗ, ಅವರು ಹಿಂದುತ್ವವನ್ನು ತಮ್ಮ ತತ್ವವಾಗಿ ಆಯ್ಕೆ ಮಾಡಿದರು. “ಸಹಜವಾಗಿಯೇ, ಈ ಸೈದ್ಧಾಂತಿಕ ರೂಪಾಂತರಕ್ಕೆ ಓದುವಿಕೆ ನನಗೆ ಸಾಕಷ್ಟು ಸಹಾಯ ಮಾಡಿತು. ನನಗೆ ಕಮ್ಯುನಿಸಂನಿಂದ ಹೊರಬರಲು ಸಹಾಯ ಮಾಡಿದ ಎರಡು-ಮೂರು ಘಟನೆಗಳ ಬಗ್ಗೆ ನೆನಪಿದೆ. ಒಂದು ಸ್ವಯಂಸೇವಕನಾಗಿದ್ದ ಗೋಕುಲ್ ದಾಸ್ ಅವರೊಂದಿಗಿನ ನನ್ನ ಸ್ನೇಹ. ಇನ್ನೊಂದು ಎಬಿವಿಪಿ ಮುಖಂಡ ವಿ ಮುರಳೀಧರನ್ ಅವರು ಮಾಡಿದ ಭಾಷಣ. ಅವರ ಭಾಷಣವು ಹಿಂದುತ್ವ ಫ್ಯಾಸಿಸ್ಟ್ ಸಿದ್ಧಾಂತವೇ ಎಂಬ ಬಗ್ಗೆ ನನಗಿದ್ದ ಅನುಮಾನವನ್ನು ನಿವಾರಣೆ ಮಾಡಿತು. ಮೂರನೆಯದಾಗಿ, ನನ್ನ ಆಲೋಚನೆಗಳ ಮೇಲೆ ಭಾರಿ ಪ್ರಭಾವ ಬೀರಿದ್ದು ಪ್ರಸಿದ್ಧ ಕವಿ ಅಕ್ಕಿತಂ (ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಗೆದ್ದವರು) ಅವರು ಬರೆದ ಸುದೀರ್ಘ ಪ್ರಬಂಧವಾದ ‘ಭಾರತ ದರ್ಶನಂ’ ಅನ್ನು ನಾನು ಓದಿದ್ದು. ಕಮ್ಯುನಿಸಂ ಮತ್ತು ಹಿಂದುತ್ವದ ನಡುವೆ ಗಿರಕಿ ಹೊಡೆದ ನಾನು, 1984 ರ ಹೊತ್ತಿಗೆ ಸ್ವಯಂಸೇವಕನಾಗಿ ಪರಿವರ್ತನೆಗೊಂಡೆ” ಎಂದು ಸದಾನಂದನ್ ಮಾಸ್ಟರ್ ಹೇಳುತ್ತಾರೆ.
ಕಮ್ಯುನಿಸಂನಿಂದ ಹಿಂದುತ್ವಕ್ಕೆ ಪರಿವರ್ತನೆಗೊಂಡಿದ್ದಕ್ಕಾಗಿ ಮಾಸ್ಟರ್ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂತು. ಆ ಭಯಾನಕ ಘಟನೆ ನಡೆದಾಗ ಅವರ ವಯಸ್ಸು ಕೇವಲ 30 ಆಗಿತ್ತು. “ನಾನು ಜನವರಿ 25, 1994 ರ ರಾತ್ರಿ ಮನೆಗೆ ಮರಳುತ್ತಿದ್ದೆ. ಅಂದು ರಾತ್ರಿ 8.30 ರ ಸುಮಾರಿಗೆ ನಾನು ಬಸ್ ನಿಲ್ದಾಣದಿಂದ ನನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಿಪಿಎಂ ಕಾರ್ಯಕರ್ತರ ಗುಂಪೊಂದು ನನ್ನನ್ನು ಹಿಂದಿನಿಂದ ಕೆಳಕ್ಕೆ ತಳ್ಳಿತು. ಅವರು ಹಿಂದಿನಿಂದ ತಳ್ಳಿ ಎದ್ದೇಳದಂತೆ ಮಾಡಿದರು, ನನ್ನನ್ನು ಗಟ್ಟಿಯಾಗಿ ಹಿಡಿದಿಟ್ಟಕೊಂಡರು. ನನಗೆ ಬಾಂಬ್ ಸ್ಫೋಟವಾದ ಶಬ್ದ ಕೇಳಿಸಿತ್ತು, ನನ್ನ ಕಾಲುಗಳಿಗೆ ಏನೋ ವಿಚಿತ್ರ ಸಂಭವಿಸುತ್ತಿದೆ ಎಂದು ಭಾಸವಾಯಿತು. ಅವರು ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ, ಆದರೆ ಆ ರೀತಿ ಏನೂ ಮಾಡಲಿಲ್ಲ. ಆ ವೇಳೆ ನಾನು ಸಂಪೂರ್ಣ ಮರಗಟ್ಟಿ ಹೋಗಿದ್ದನ್ನು ಹೊರತುಪಡಿಸಿದರೆ ಬೇರೇನಾಯಿತು ಎಂಬುದು ನನಗೆ ತಿಳಿಯಲೇ ಇಲ್ಲ. ಅವರು ಹೋದ ನಂತರ, ನಾನು ಎದ್ದೇಳಲು ಪ್ರಯತ್ನಿಸಿದೆ ಆದರೆ ನನಗೆ ಸಾಧ್ಯವಾಗಲಿಲ್ಲ. ಆಗ ನನಗೆ ನನ್ನ ಬೇರ್ಪಟ್ಟ ಕಾಲುಗಳು ರಕ್ತದ ಓಕುಳಿಯಲ್ಲಿ ರಸ್ತೆಯ ಮೇಲೆ ಬಿದ್ದದ್ದು ಕಂಡು ಬಂತು. ದಾಳಿಕೋರರು ಉದ್ದೇಶಪೂರ್ವಕವಾಗಿ ನನ್ನ ಗಾಯಗಳಿಗೆ ಮಣ್ಣು ಮತ್ತು ಸೆಗಣಿಯನ್ನು ಹಚ್ಚಿದ್ದರು. ವೈದ್ಯರಿಗೆ ನನ್ನ ಕಾಲುಗಳನ್ನು ಜೋಡಿಸಿ ಹೊಲಿಯಲು ಸಾಧ್ಯವಾಗಬಾರದು ಎಂಬುದು ಅವರ ಉದ್ದೇಶವಾಗಿತ್ತು” ಎಂದು ಸದಾನಂದನ್ 2016 ರಲ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
1999 ರಿಂದ ತ್ರಿಶೂರ್ನ ಪೆರಮಂಗಲಂನಲ್ಲಿರುವ ಸರ್ಕಾರಿ ಅನುದಾನಿತ ಶ್ರೀ ದುರ್ಗಾ ವಿಲಾಸಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಾಮಾಜ ವಿಜ್ಞಾನದ ಪ್ರೌಢ ಶಾಲಾ ಶಿಕ್ಷಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ವನಿತಾ ರಾಣಿಯನ್ನು ಮದುವೆಯಾಗಿದ್ದಾರೆ, ಅವರು ಕೂಡ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಅವರ ಏಕೈಕ ಪುತ್ರಿ ಯಮುನಾ ಭಾರತಿ ಎಂಜಿನಿಯರಿಂಗ್ ಪದವೀಧರೆ. 2016 ರಲ್ಲಿ ಮಾಸ್ಟರ್ ಅವರು ಕಣ್ಣೂರು ಜಿಲ್ಲೆಯ ಕಮ್ಯುನಿಸ್ಟ್ ಭದ್ರಕೋಟೆಯಾದ ಕೂತುಪರಂಬ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.
Swatantrya Veer Savarkar National Puraskar 2020 for our own dearest Sadanandan Master, the
living embodiment of courage, commitment and dedication.
Prestigious Puraskar will be awarded to Master ji on Savarkar’s Punyatithi, Feb 26, at Pune. pic.twitter.com/Od9SXIiZB6— J Nandakumar (@kumarnandaj) February 6, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.