ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಸರಕು ರಫ್ತು $330-340 ಬಿಲಿಯನ್ ಡಾಲರ್ಗೆ ತಲುಪಲಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ಪೋರ್ಟ್ ಆರ್ಗನೈಝೇಶನ್ ಸಂಸ್ಥೆಗಳ ಅಧ್ಯಕ್ಷ ಶರದ್ ಕುಮಾರ್ ಸರಫ್ ತಿಳಿಸಿದ್ದಾರೆ.
ಸರಫ್ ಪ್ರಕಾರ, ಜಾಗತಿಕ ವ್ಯಾಪಾರದಲ್ಲಿ ಸಾಮಾನ್ಯ ಪಾಲು ಇದ್ದರೂ, ಭಾರತದ ರಫ್ತು ಜಾಗತಿಕ ಆಮದಿನ ಪ್ರವೃತ್ತಿಯನ್ನು ಅನುಸರಿಸಿದೆ.
“ಆದ್ದರಿಂದ, ಜಾಗತಿಕ ಆಮದು ಕುಸಿಯುತ್ತಿರುವಾಗ, ನಮ್ಮ ರಫ್ತು ಕೂಡ ಕುಂಠಿತ ಆಗುವ ಸಾಧ್ಯತೆಯಿದೆ. ಪ್ರಸ್ತುತ, 2019 ರ ಎಪ್ರಿಲ್-ನವೆಂಬರ್ ಅವಧಿಯಲ್ಲಿ ಭಾರತದ ಸರಕು ರಫ್ತು ಶೇಕಡಾ 1.99 ರಷ್ಟು ಕಡಿಮೆಯಾಗಿದೆ. ಆದ್ದರಿಂದ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಮ್ಮ ಸರಕುಗಳ ರಫ್ತು $ 330-340 ಬಿಲಿಯನ್ ಅನ್ನು ಮುಟ್ಟಬಹುದು ಎಂದು ನಾವು ಭಾವಿಸುತ್ತೇವೆ “ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
2018-19ರಲ್ಲಿ ದೇಶದ ಸರಕು ರಫ್ತು $ 331 ಬಿಲಿಯನ್ಗೆ ಏರಿತ್ತು.
“ಅದೃಷ್ಟವಶಾತ್, ಭಾರತೀಯ ರಫ್ತುದಾರರ ಆರ್ಡರ್ ಬುಕ್ ಸ್ಥಾನವು ತುಂಬಾ ಉತ್ತೇಜನಕಾರಿಯಾಗಿದೆ. ನಮ್ಮ ಕರೆನ್ಸಿಯಲ್ಲಿನ ಕಡಿಮೆ ಚಂಚಲತೆಯು ಸಹ ಸಕಾರಾತ್ಮಕ ಅಂಶವಾಗಿದೆ. ದ್ರವ್ಯತೆ ಕೂಡ ಸುಧಾರಿಸುತ್ತಿದೆ, ಆದರೂ ನಾವು ಇನ್ನೂ ಸಾಕಷ್ಟು ದೂರವನ್ನು ಸಾಗಬೇಕಿದೆ” ಎಂದಿದ್ದಾರೆ.
ಅಲ್ಲದೆ, ಮೂಲಸೌಕರ್ಯ ಸುಧಾರಣೆ ಮತ್ತು ಲಾಜಿಸ್ಟಿಕ್ಸ್ ಮುಂಭಾಗದಲ್ಲಿನ ಉಪಕ್ರಮಗಳು ಭಾರತೀಯ ರಫ್ತಿಗೆ ಮತ್ತಷ್ಟು ಸ್ಪರ್ಧಾತ್ಮಕತೆಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
“2020 ರ ಮೊದಲಾರ್ಧದಲ್ಲಿ ಜಾಗತಿಕ ಪರಿಸ್ಥಿತಿ ಸುಧಾರಿಸಿದರೆ, ಮುಂದಿನ ಹಣಕಾಸು ವರ್ಷದಲ್ಲಿ ರಫ್ತಿನಲ್ಲಿ ಶೇ 15 ರಷ್ಟು ಬೆಳವಣಿಗೆಯನ್ನು ನಾವು ನೋಡಬಹುದು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.