ನವದೆಹಲಿ: ನಮ್ಮ ಸೇನಾ ಪಡೆಗಳ ಬಗ್ಗೆ ನಮಗೆ ಹೆಮ್ಮೆ ತರುವ ಮತ್ತೊಂದು ಬೆಳವಣಿಗೆ ನಡೆದಿದೆ. ಇಬ್ಬರು ಭಾರತೀಯ ಸೇನಾ ಕ್ಯಾಪ್ಟನ್ಗಳು ಶನಿವಾರ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಅವಧಿಪೂರ್ವ ಪ್ರಸವ ಮಾಡಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ವರದಿಗಳ ಪ್ರಕಾರ, ಸೇನೆಯ ಇಬ್ಬರು ವೈದ್ಯರಾದ 172 ಮಿಲಿಟರಿ ಆಸ್ಪತ್ರೆಯ ಕ್ಯಾಪ್ಟನ್ ಲಲಿತಾ ಮತ್ತು ಕ್ಯಾಪ್ಟನ್ ಅಮನ್ದೀಪ್ ಅವರು ಶನಿವಾರ ಹೌರಾ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಸಹ ಪ್ರಯಾಣಿಕರೊಬ್ಬರು ತೀವ್ರ ಹೆರಿಗೆ ನೋವಿಗೆ ಒಳಗಾಗಿದ್ದರು.
ಮಹಿಳೆಯ ಸ್ಥಿತಿಯನ್ನು ನೋಡಿ ಇಬ್ಬರು ಸೇನಾಧಿಕಾರಿಗಳು ಆಕೆಗೆ ಸಹಾಯ ಮಾಡಲು ಧಾವಿಸಿದರು.
ಮಗುವಿನ ಅಕಾಲಿಕ ಜನನಕ್ಕೆ ಇಬ್ಬರೂ ಅನುಕೂಲ ಮಾಡಿಕೊಟ್ಟರು ಮತ್ತು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವುದನ್ನು ಖಚಿತಪಡಿಸಿದರು.
ಅತ್ಯಂತ ಕ್ಲಿಷ್ಟ ಸಂದರ್ಭದಲ್ಲಿ ಮಹಿಳೆಯ ನೆರವಿಗೆ ಧಾವಿಸಿ ಆಕೆ ಮತ್ತು ಆಕೆಯ ಮಗುವನ್ನು ಉಳಿಸಿದ ತನ್ನ ಇಬ್ಬರು ಅಧಿಕಾರಿಗಳ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿ ಭಾರತೀಯ ಸೇನೆಯು ಸುದ್ದಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
“172 ಮಿಲಿಟರಿ ಆಸ್ಪತ್ರೆಯ ಕ್ಯಾಪ್ಟನ್ ಲಲಿತ ಮತ್ತು ಕ್ಯಾಪ್ಟನ್ ಅಮನ್ದೀಪ್ ಹೌರಾ ಎಕ್ಸ್ಪ್ರೆಸ್ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಅವಧಿಪೂರ್ವ ಪ್ರಸವ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ” ಎಂದಿದ್ದಾರೆ. ಇದಕ್ಕಾಗಿ #NationFirst #WeCare ಎಂಬ ಹ್ಯಾಶ್ಟ್ಯಾಗ್ ಬಳಸಿದೆ.
ಭಾರತೀಯ ಸೇನೆಯು ಟ್ವಿಟರ್ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದೇ ತಡ ಸಾವಿರಾರು ಮಂದಿ ಈ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ ಹೃದಯ ತಟ್ಟುವಂತಹ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.