ನವದೆಹಲಿ: ಪಾಕಿಸ್ಥಾನದ ಬೆಂಬಲವನ್ನು ಪಡೆದುಕೊಂಡ ಕೆಲವು ಖಲೀಸ್ಥಾನಿ ಭಯೋತ್ಪಾದಕರು ಪಂಜಾಬಿನಲ್ಲಿ ಭಯೋತ್ಪಾದನಾ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಸಂಘಟನೆಗಳು ಹಂಚಿಕೊಂಡಿದೆ. ಈ ನಿಟ್ಟಿನಲ್ಲಿ ಖಲೀಸ್ಥಾನ ಬೆಂಬಲಿತ ಭಯೋತ್ಪಾದಕರು ಪಾಕಿಸ್ಥಾನದಲ್ಲಿ ಸಭೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.
ಆದಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಯನ್ನು ಮಾಡಿ ಪಂಜಾಬಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಯುವಂತೆ ಮಾಡುವುದು ಇವರ ಉದ್ದೇಶವಾಗಿದೆ. ಬಬ್ಬರ್ ಖಾಲ್ಸಾ, ಖಲೀಸ್ಥಾನ್ ಜಿಂದಾಬಾದ್ ಪಡೆಗಳು ಪಂಜಾಬಿಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣೆ ಮಾಡಲು ತಮ್ಮ ಪಾಕಿಸ್ಥಾನಿ ಹ್ಯಾಂಡಲರ್ಗಳೊಂದಿಗೆ ನಿರಂತರವಾದ ಸಂಪರ್ಕದಲ್ಲಿವೆ. ರಾಜಸ್ಥಾನ ಮತ್ತು ಹರಿಯಾಣದಲ್ಲೂ ಖಲೀಸ್ಥಾನ ಬೆಂಬಲಿತ ಪಡೆಗಳ ಚಟುವಟಿಕೆಗಳು ಕಂಡು ಬಂದಿವೆ.
ಸರ್ಕಾರವು ಗುಪ್ತಚರ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಖಲಿಸ್ಥಾನ್ ಬೆಂಬಲಿತ ಭಯೋತ್ಪಾದಕರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಗಡಿ ಭದ್ರತಾ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ, ರಾ ಮತ್ತು ಐಬಿಗೆ ಆದೇಶಿಸಿದೆ.
ಭದ್ರತಾ ಸಂಸ್ಥೆಗಳು ರಾಜ್ಯದೊಳಗಿನ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ವಿಫಲಗೊಳಿಸುವ ಸಲುವಾಗಿ ಪಂಜಾಬ್ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ಹದ್ದಿನ ಕಣ್ಗಾವಲನ್ನು ಇರಿಸಿದೆ. ಖಲಿಸ್ಥಾನ್ ಬೆಂಬಲಿತ ಭಯೋತ್ಪಾದಕರು ಭಾರತದಲ್ಲಿ ಅಪಾಯವನ್ನು ತರಲು ಪ್ರಯತ್ನಿಸುತ್ತಿರುವ ಹಿನ್ನಲೆಯಲ್ಲಿ ಪಾಕಿಸ್ಥಾನ ಭಯೋತ್ಪಾದಕರಿಂದ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರೀತಿ ತರಬೇತಿ ಪಡೆಯುತ್ತಿರುವ ಭಯೋತ್ಪಾದಕ ಶಿಬಿರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಗುಪ್ತಚರ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ನಿಷೇಧಿತ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ಉ ತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಯೋಜಿಸುತ್ತಿದೆ ಎಂದು ಬುಧವಾರ ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಜೈಶೇ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸಂದೇಶವನ್ನು ಗುಪ್ತಚರ ಸಂಸ್ಥೆಗಳು ಟ್ರ್ಯಾಕ್ ಮಾಡಿವೆ ಇದರಲ್ಲಿ ಭಯೋತ್ಪಾದಕ ಗುಂಪು ಅಯೋಧ್ಯೆಯಲ್ಲಿ ದಾಳಿ ನಡೆಸಲು ಯೋಜಿಸುತ್ತಿದೆ ಎಂಬುದು ಬಹಿರಂಗಗೊಂಡಿದೆ. ಟೆಲಿಗ್ರಾಮ್ ಅನ್ನು ಜೆಎಂ ಮತ್ತು ಇತರ ಭಯೋತ್ಪಾದಕ ಗುಂಪುಗಳು ಸಂವಹನಕ್ಕಾಗಿ ವ್ಯಾಪಕವಾಗಿ ಬಳಸುತ್ತಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.