ನ್ಯೂಯಾರ್ಕ್: ಎಂಟು ವರ್ಷದ ರಿಯಾನ್ ಕಾಜಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ 2019 ರಲ್ಲಿ $26 ಮಿಲಿಯನ್ ಗಳಿಸಿದ್ದಾನೆ. ಈ ಮೂಲಕ ಯೂಟ್ಯೂಬ್ ವೇದಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಯೇಟರ್ ಆಗಿ ಹೊರಹೊಮ್ಮಿದ್ದಾನೆ.
ಫೋರ್ಬ್ಸ್ ಪ್ರಕಾರ, ಕಾಜಿ ಅವರ ನಿಜವಾದ ಹೆಸರು ರಯಾನ್ ಗುವಾನ್, 2018 ರಲ್ಲಿ ಈತ $ 22 ಮಿಲಿಯನ್ ಅನ್ನು ತನ್ನ ಯ್ಯೂಟೂಬ್ ವೀಡಿಯೊ ಪ್ಲಾಟ್ಫಾರ್ಮ್ನಲ್ಲಿ ಗಳಿಸಿದ್ದಾನೆ. ಈ ಮೂಲಕ ಈಗಾಗಲೇ ಈತ ಯೂಟ್ಯೂಬಿನಲ್ಲಿ ಅತೀ ಹೆಚ್ಚು ಸಂಭಾವನೆ ಗಳಿಸುವಾತ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾನೆ.
ರಯಾನ್ ಅವರ ಪೋಷಕರು 2015 ರಲ್ಲಿ ಪ್ರಾರಂಭಿಸಿದ “ರಯಾನ್ಸ್ ವರ್ಲ್ಡ್” ಚಾನೆಲ್ ಕೇವಲ ಮೂರು ವರ್ಷದಲ್ಲಿ 22.9 ಮಿಲಿಯನ್ ಚಂದಾದಾರರನ್ನು ಹೊಂದಿದೆ.
ಆರಂಭದಲ್ಲಿ “ರಿಯಾನ್ ಟಾಯ್ಸ್ ರಿವ್ಯೂ” ಎಂದು ಕರೆಯಲ್ಪಡುತ್ತಿದ್ದ ಈ ಚಾನಲ್ ಹೆಚ್ಚಾಗಿ “unboxing” ವೀಡಿಯೊಗಳನ್ನು ಒಳಗೊಂಡಿತ್ತು. ಇದರಲ್ಲಿ ಈತ ಆಟಿಕೆಯ ಪೆಟ್ಟಿಗೆಗಳನ್ನು ತೆರೆಯುವ ಮತ್ತು ಅದರೊಂದಿಗೆ ಆಡುವ ವೀಡಿಯೊಗಳನ್ನು ಪ್ರಸಾರ ಮಾಡುತ್ತಿದ್ದ. ಇತ್ತೀಚಿಗಷ್ಟೇ ಈತ ತನ್ನ ಚಾನೆಲ್ ಹೆಸರನ್ನು “ರಯಾನ್ಸ್ ವರ್ಲ್ಡ್” ಎಂದು ಬದಲಾಯಿಸಿದ್ದಾನೆ.
ಈಗ ಆತ ಆಟಿಕೆಗಳ ಬದಲು ಹೆಚ್ಚು ಹೆಚ್ಚು ಶಿಕ್ಷಣ ನೀಡುವ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.