ನವದೆಹಲಿ: ಭಾರತದ ನೆರೆಹೊರೆ ಮೊದಲು ಎಂಬ ನಿಯಮದಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಇಬ್ರಾಹಿಂ ಮಹಮ್ಮದ್ ಸಲೀಹ್ ಅವರು ಜಂಟಿಯಾಗಿ ನಾಲ್ಕು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಯೋಜನೆಯು ಮಾಲೆ ನಗರವನ್ನು 2ಲಕ್ಷ ಎಲ್ಇಡಿ ಬಲ್ಬುಗಳ ಮೂಲಕ ಬೆಳಗಿಸುವುದು ಕೂಡ ಸೇರಿದೆ.
ಉಳಿದ ಮೂರು ಪ್ರೊಜೆಕ್ಟ್ ಗಳೆಂದರೆ, ರುಪೇ ಕಾರ್ಡ್ಗೆ ಚಾಲನೆ, ಫಾಸ್ಟ್ ಇಂಟರ್ಸಿಪ್ಟರ್ ಕ್ರಾಫ್ಟ್ ಉಡುಗೊರೆ ಮತ್ತು ಮೂರು ಮೀನು ಸಂಸ್ಕರಣಾ ಘಟಕಗಳಿಗೆ ಚಾಲನೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಸಲೀಹ್ ಅವರು ಈ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ರುಪೇ ಕಾರ್ಡ್ ಚಾಲನೆಯ ಮೂಲಕ ಮಾಲ್ಡಿವ್ಸ್ ದೇಶವು ಸಿಂಗಾಪುರ, ಭೂತಾನ್, ಅಮೆರಿಕ, ಬಹರೈನ್ ಮತ್ತು ಸೌದಿ ಅರೇಬಿಯಗಳ ಸಾಲಿಗೆ ಸೇರಿದೆ. ಈ ರಾಷ್ಟ್ರಗಳಲ್ಲಿ ಈಗಾಗಲೇ ರುಪೇ ಕಾರ್ಡ್ ಚಾಲ್ತಿಯಲ್ಲಿದೆ.
ರುಪೇ ಕಾರ್ಡ್ ಮಾಸ್ಟರ್ ಕಾರ್ಡಿನ ಭಾರತದ ವಿಧಾನವಾಗಿದೆ. ಇದು ಭಾರತದಾದ್ಯಂತದ ಎಲ್ಲಾ ಎಟಿಎಂ, ಪಿಒಎಸ್ ಡಿವೈಸ್, ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಅನ್ವಯಿಸುತ್ತದೆ. ಭಾರತದಲ್ಲಿ 500 ಮಿಲಿಯನ್ ರುಪೇ ಕಾರ್ಡ್ಗಳು ಕಾರ್ಯಾಚರಿಸುತ್ತಿವೆ.
ಭಾರತವು ಫಾಸ್ಟ್ ಇಂಟರ್ಸಿಪ್ಟರ್ ಕ್ರಾಫ್ಟ್ ವೆಸೆಲ್ ಅನ್ನು ಮಾಲ್ಡಿವ್ಸ್ ನ್ಯಾಷನಲ್ ಡಿಫೆನ್ಸ್ ಫೋರ್ಸ್ಗೆ ಉಡುಗೊರೆಯಾಗಿ ನೀಡಲಿದೆ. ಇದು ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ಗೆ ತನ್ನ ಆರ್ಥಿಕ ವಲಯವನ್ನು ಸಕ್ರಿಯವಾಗಿ ರಕ್ಷಣೆ ಮಾಡಲು ಸಹಾಯ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.