ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣದ ಪೊಲೀಸ್ ಠಾಣೆಯೊಂದರಲ್ಲಿ ಜನರ ದೂರುಗಳನ್ನು ಸ್ವೀಕರಿಸಲು ರೋಬೋಟ್ ಅನ್ನು ನಿಯೋಜನೆಗೊಳಿಸಲಾಗಿದೆ. ಇದರಿಂದಾಗಿ ಜನರು ಯಾವುದೇ ಅಂಜಿಕೆ ಇಲ್ಲದೆ ದೂರು ನೀಡಿ ಬರಬಹುದಾಗಿದೆ.
ವಿಶಾಖಪಟ್ಟಣಂನ ಮಹಾರಾಣಿಪೇಟ ಪೊಲೀಸ್ ಠಾಣೆಯಲ್ಲಿ ರೋಬೋಕಾಪ್ (ರೋಬೋ ಪೊಲೀಸ್) ಎಂಬ ರೋಬೋಟ್ ನಿಯೋಜನೆಗೊಳಿಸಲಾಗಿದೆ. ಈ ರೋಬೋಟ್ ಠಾಣೆಗೆ ಬರುವವರನ್ನು ಆದರಪೂರ್ವಕವಾಗಿ ಸ್ವಾಗತಿಸುತ್ತದೆ ಮತ್ತು ಅವರಿಂದ ದೂರಗಳನ್ನು ಸ್ವೀಕರಿಸುತ್ತದೆ.
ರೋಬೋಟ್ ಸೈಬಿರ (ಸೈಬರ್ ಸೆಕ್ಯುರಿಟಿ ಇಂಟರ್ಯಾಕ್ಟಿವ್ ರೊಬೊಟಿಕ್ ಏಜೆಂಟ್) ಅನ್ನು ಪ್ರಾಯೋಗಿಕವಾಗಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಳಿಸಲಾಗಿದೆ. ರೋಬೋ ಕಪ್ಲರ್ ಪ್ರೈವೇಟ್ ಲಿಮಿಟೆಡ್ ವಿನ್ಯಾಸಗೊಳಿಸಿದ ರೋಬೋಟ್ ಧ್ವನಿಮುದ್ರಣ ಅಥವಾ ಡಿಜಿಟಲ್ ಟೈಪಿಂಗ್ ಮೂಲಕ ದೂರುಗಳನ್ನು ಸ್ವೀಕರಿಸುತ್ತದೆ. ನಂತರ ದೂರುದಾರರ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ರವಾನಿಸಲಾಗುತ್ತದೆ.
ನಿರ್ದಿಷ್ಟ ಸಮಯದ ಮಿತಿಯೊಳಗೆ ದೂರುಗಳನ್ನು ಪರಿಹರಿಸಲು ರೋಬೋಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ, ಪೊಲೀಸ್ ಠಾಣೆಗಳಲ್ಲಿ ದೂರುದಾರರಿಗೆ ಹಾಜರಾಗಲು ಪೊಲೀಸರ ಕಡೆಯಿಂದಲೇ ವಿಳಂಬವಾಗುತ್ತದೆ. ಆದರೆ, ಸ್ಥಳೀಯ ಭಾಷೆಯಲ್ಲಿ ಅಥವಾ ಡಿಜಿಟಲ್ ಸ್ವರೂಪದಲ್ಲಿ ಧ್ವನಿ ರೆಕಾರ್ಡಿಂಗ್ ಮೂಲಕ ದಾಖಲಾದ ರೋಬೋಟ್ಗಳಿಂದ ದೂರುಗಳಿಗೆ ಶೀಘ್ರ ಪ್ರತಿಕ್ರಿಯೆ ಸಿಗುತ್ತದೆ.
“ಒಮ್ಮೆ ದೂರು ದಾಖಲಿಸಿದ ನಂತರ, ರೋಬೋಟ್ ದೂರುದಾರರ ಫೋಟೋ ತೆಗೆದುಕೊಂಡು ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಯ ಮೊಬೈಲ್ ಫೋನ್ಗೆ ಕಳುಹಿಸುತ್ತದೆ. 24 ಗಂಟೆಯೊಳಗೆ ಅಧಿಕಾರಿಗೆ ದೂರನ್ನು ನೆನಪಿಸಲಾಗುತ್ತದೆ ಮತ್ತು ಯಾವುದೇ ಪ್ರಗತಿ ಸಾಧಿಸದಿದ್ದರೆ, ದೂರನ್ನು ಮುಂದಿನ ಕೆಳ ಹಂತದ ಅಧಿಕಾರಿ, ಅಂದರೆ ಸಿಐಗೆ ಕಳುಹಿಸಲಾಗುತ್ತದೆ. ಪ್ರತಿ ದೂರು ಪರಿಹರಿಸಲು 2-3 ದಿನಗಳ ಗಡುವು ಇರುತ್ತದೆ, ನಂತರ ಅದು ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ತಲುಪುತ್ತದೆ “ಎಂದು ಕಂಪನಿಯ ಸಿಇಒ ಪ್ರವೀಣ್ ಮಲ್ಲಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.