ನವದೆಹಲಿ: ಕೇಂದ್ರ ಸಂಪುಟವು ಬುಧವಾರ ಭಾರತ ಮತ್ತು ಫಿನ್ಲ್ಯಾಂಡ್ ನಡುವಣ ತಿಳುವಳಿಕೆಯ ಒಪ್ಪಂದಕ್ಕೆ ಅನುಮೋದನೆಯನ್ನು ನೀಡಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಅನುಮೋದನೆಯನ್ನು ನೀಡಲಾಗಿದೆ. ಪ್ರವಾಸೋದ್ಯಮ, ಡಾಟಾ ಹಂಚಿಕೆ, ಜ್ಞಾನ, ಪರಿಣಿತಿಗಳ ಹಂಚಿಕೆಯಲ್ಲಿ ಯಶಸ್ವಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಮತ್ತು ಪ್ರಚುರಪಡಿಸಲು ಸಹಕಾರ ಸಂಬಂಧಕ್ಕೆ ಆಧಾರವನ್ನು ಹಾಕಿ ಕೊಡಲು ಇದು ಪ್ರಯತ್ನಿಸಲಿದೆ.
ಪ್ರವಾಸೋದ್ಯಮದ ಜೊತೆಗೆ ಉಭಯ ದೇಶಗಳು, ಮಾನದಂಡಗಳ ರೂಪಿಸುವಿಕೆ, ನಿಯಂತ್ರಣ ಮತ್ತು ಗುಣಮಟ್ಟದ ಯೋಜನೆ, ಅನುಷ್ಠಾನ ಮತ್ತು ಅಭಿವೃದ್ಧಿ ನೀತಿಗಳಲ್ಲಿ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಲಿವೆ. ಇದಲ್ಲದೆ, ಅಧಿಕೃತ ಬಿಡುಗಡೆಯ ಪ್ರಕಾರ, “ತಿಳಿವಳಿಕೆಯ ಒಪ್ಪಂದವು ಭೇಟಿಗಳು, ಸಭೆಗಳು, ಕಾರ್ಯಾಗಾರಗಳು, ಮೌಲ್ಯಮಾಪನಗಳ, ಜಂಟಿ ಯೋಜನೆಗಳ, ಪ್ರಯೋಗಗಳ ಮೂಲಕ ಕಂಪನಿಗಳು ಮತ್ತು ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಗುರುತಿಸಲು ಮತ್ತು ವಿಸ್ತರಿಸಲು ಅನುಕೂಲ ಮಾಡಿಕೊಡಲಿದೆ” ಎಂದು ಪ್ರಕಟಣೆ ತಿಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, “ಭಾರತ ಮತ್ತು ಫಿನ್ಲ್ಯಾಂಡ್ ದೇಶ್ಳು ತಜ್ಞರ ಭೇಟಿ, ಕಾರ್ಯಾಗಾರಗಳು ಮತ್ತು ಅಧ್ಯಯನ ಭೇಟಿಗಳ ಮೂಲಕ ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲಿದೆ” ಎಂದು ಘೋಷಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, “ಭಾರತ ಮತ್ತು ಫಿನ್ಲ್ಯಾಂಡ್ ಬಲವಾದ ರಾಜತಾಂತ್ರಿಕ ಮತ್ತು ಸುದೀರ್ಘ ಆರ್ಥಿಕ ಸಂಬಂಧವನ್ನು ಅನುಭವಿಸಿವೆ” ಎಂದು ಹೇಳಿದೆ.
“ಸ್ಥಾಪಿತ ಸಂಬಂಧವನ್ನು ಬಲಪಡಿಸಲು ಮತ್ತು ಮತ್ತಷ್ಟು ಅಭಿವೃದ್ಧಿಪಡಿಸಲು ಉಭಯ ದೇಶಗಳು ಬಯಸುತ್ತಿವೆ. ಪ್ರವಾಸೋದ್ಯಮ ಸಚಿವಾಲಯ ಮತ್ತು ಆರ್ಥಿಕ ವ್ಯವಹಾರ ಮತ್ತು ಉದ್ಯೋಗ ಸಚಿವಾಲಯ, ಫಿನ್ಲ್ಯಾಂಡ್ ಸರ್ಕಾರದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಒಪ್ಪಂದಕ್ಕೆ ಸಹಿ ಹಾಕಿವೆ” ಎಂದು ಸರ್ಕಾರ ಹೇಳಿದೆ.
ಫಿನ್ಲ್ಯಾಂಡ್ ಭಾರತಕ್ಕೆ ಇನ್ ಬೌಂಡ್ ಮೂಲ ಮಾರುಕಟ್ಟೆಗಳಲ್ಲಿ ಒಂದಾಗಿದೆ. “2018 ರಲ್ಲಿ, 21,239 ಫಿನ್ಲ್ಯಾಂಡ್ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದರು. ಫಿನ್ಲ್ಯಾಂಡ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದು ಈ ಮೂಲ ಮಾರುಕಟ್ಟೆಯ ಇನ್ ಬೌಂಡ್ ಅನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.