ನವದೆಹಲಿ: ಕಳೆದ 8 ವರ್ಷಗಳಿಂದ ಪ್ಯಾರಾ ಮಿಲಿಟರಿ ಪಡೆಯಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಏಳು ಶ್ವಾನಗಳು ಮಂಗಳವಾರ ಗೌರವಾದರಗಳೊಂದಿಗೆ ನಿವೃತ್ತರಾಗಿವೆ.
ಶ್ವಾನಗಳ ನಿವೃತ್ತಿಯ ಬಗ್ಗೆ ಟ್ವಿಟ್ ಮಾಡಿರುವ ಸಿಐಎಸ್ಎಫ್, “ಶ್ವಾನವಾಗಿ ಜನಿಸಿ, ಸೈನಿಕನಾಗಿ ನಿವೃತ್ತರಾದ” ಎಂದು ಒಕ್ಕಣೆಯನ್ನು ನೀಡಿದೆ. ಅಲ್ಲದೇ ಈ ಶ್ವಾನಗಳ ಕರ್ತವ್ಯ ನಿಷ್ಠೆ ಮತ್ತು ಸಮರ್ಪಣೆಯನ್ನು ಕೊಂಡಾಡಿದೆ. ಬೀಳ್ಕೊಡುಗೆ ಕಾರ್ಯಕ್ರಮದ ಬಗೆಗಿನ ಹಲವಾರು ಫೋಟೋಗಳನ್ನು ಹಂಚಿಕೊಂಡಿದೆ.
ನಿವೃತ್ತಿಯಾಗಿರುವ ಶ್ವಾನಗಳು ದೆಹಲಿ ಮೆಟ್ರೋದಲ್ಲಿ ನಿಯೋಜಿಸಲ್ಪಟ್ಟ ಸಿಐಎಸ್ಎಫ್ ತಂಡದ ಭಾಗವಾಗಿದ್ದವು. ದೆಹಲಿ ಮೆಟ್ರೋದ ಸಿಐಎಸ್ಎಫ್ ಘಟಕ (DMRC) ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ಶ್ವಾನಗಳಿಗೆ ಮೊಮೆಂಟೋ, ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
ವರದಿಗಳ ಪ್ರಕಾರ, ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಿಐಎಸ್ಎಫ್ ತನ್ನ ಶ್ವಾನಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಅತೀ ಹೆಚ್ಚು ತರಬೇತಿ ಪಡೆದ ಶ್ವಾನಗಳು ಇದಾಗಿದ್ದು, ತಮ್ಮ ನಿಸ್ವಾರ್ಥ ಕರ್ತವ್ಯಕ್ಕಾಗಿ ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಗೌರವವನ್ನು ಇವುಗಳು ಸ್ವೀಕರಿಸಿದವು. ಬಳಿಕ ಈ ಶ್ವಾನಗಳನ್ನು ದೆಹಲಿ ಮೂಲದ ಎನ್ಜಿಒವೊಂದಕ್ಕೆ ಹಸ್ತಾಂತರಿಸಲಾಯಿತು.
Born as a dog, retired as a soldier…
A Farewell ceremony for 07 #K9 members of #CISF organised @ CISF Unit DMRC Delhi. They were handed over to NGO @Friendicoes_DEL, New Delhi. Thank you for your services ! pic.twitter.com/3h1fREZz5s— CISF (@CISFHQrs) November 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.