ನವದೆಹಲಿ: ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ವಾಹನಗಳ ನೋಂದಣಿ ಪ್ರಮಾಣ ಹೆಚ್ಚಾಗಿದೆ. ಇದು ಆಟೋಮೊಬೈಲ್ ಸೆಕ್ಟರ್ ಚೇತರಿಕೆ ಕಾಣುತ್ತಿದೆ ಎಂಬುದರ ದ್ಯೋತಕವಾಗಿದೆ.
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್ಎಡಿಎ) ಅಕ್ಟೋಬರ್ 2019 ರ ಮಾಸಿಕ ವಾಹನ ನೋಂದಣಿ ಅಂಕಿಅಂಶವನ್ನು ಬಿಡುಗಡೆ ಮಾಡಿದೆ. ಕಳೆದ ತಿಂಗಳು ಸಂಚಿತ ಹೊಸ ವಾಹನ ನೋಂದಣಿ ಪ್ರಮಾಣ ಶೇ.4 ರಷ್ಟು ಏರಿಕೆಯಾಗಿ 17,09,610 ಯುನಿಟ್ಗಳಿಗೆ ತಲುಪಿದೆ, 2018ರ ಅಕ್ಟೋಬರ್ನಲ್ಲಿ ನೋಂದಾಯಿಸಲಾದ ವಾಹನಗಳ ಸಂಖ್ಯೆ 16,38,832 ಆಗಿತ್ತು. ಹಬ್ಬದ ಕಾರಣದಿಂದಾಗಿ ವಾಹನಗಳ ಮಾರಾಟದಲ್ಲಿ ಏರಿಕೆಗಳು ಕಂಡು ಬಂದಿದೆ.
ನವರಾತ್ರಿ, ದೀಪಾವಳಿ ಸಂದರ್ಭದಲ್ಲಿ ಮಾರಾಟ ಹೆಚ್ಚಳವನ್ನು ಕಂಡಿದೆ. ಅಲ್ಲದೇ, ಕಾರು ಉತ್ಪಾದಕರು, ಡೀಲರ್ಗಳು ನೀಡಿದ ಆಕರ್ಷಕ ಆಫರ್ಗಳು ಕೂಡ ಖರೀದಿದಾರರಲ್ಲಿ ಸಕಾರಾತ್ಮಕ ಮನಸ್ಥಿತಿಯನ್ನು ಹುಟ್ಟು ಹಾಕಿದೆ, ಇದರಿಂದ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಹೇಳಿದೆ.
“ಅಕ್ಟೋಬರ್ ತಿಂಗಳಲ್ಲಿ ನಡೆದ ಚಿಲ್ಲರೆ ಮಾರಾಟವು ವಾಹನ ಉದ್ಯಮಕ್ಕೆ ಮತ್ತು ಅದರಲ್ಲೂ ವಿಶೇಷವಾಗಿ ನಮ್ಮ ವ್ಯಾಪಾರಿ ಸಮುದಾಯಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಿದೆ. ಹಬ್ಬಗಳು ಉತ್ತಮ ಪ್ರಭಾವವನ್ನು ಬೀರಿದವು, ಗ್ರಾಹಕರ ಭಾವನೆಯನ್ನು ಸಕಾರಾತ್ಮಕಗೊಳಿಸಿದವು” ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ನ ಆಶಿಶ್ ಹರ್ಷರಾಜ್ ಕೇಲ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.