ನವದೆಹಲಿ: ನವದೆಹಲಿಯಲ್ಲಿ ನಡೆದ ಅಗ್ರಿಕಲ್ಚರ್ ಸ್ಟ್ಯಾಟಿಸ್ಟಿಕ್ಸ್(ಭಾರತೀಯ ಪೋಷಣ್ ಕೃಷಿ ಕೋಶ್) ಎಂಟನೇ ಅಂತಾರಾಷ್ಟ್ರೀಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮೈಕ್ರೋಸಾಫ್ಟ್ ಕಾರ್ಪ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಭಾಗವಹಿಸಿದ್ದಾರೆ. ಇವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿಯಾದರು.
ಭೇಟಿಯ ಬಳಿಕ ಟ್ವಿಟ್ ಮಾಡಿರುವ ಮೋದಿ, “ಬಿಲ್ ಗೇಟ್ಸ್ ಅವರೊಂದಿಗೆ ಅದ್ಭುತ ಸಭೆ ನಡೆಯಿತು. ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಸಂವಹನ ನಡೆಸಲು ಯಾವಾಗಲೂ ಸಂತೋಷವಾಗುತ್ತದೆ. ಅವರು ತಮ್ಮ ನವೀನ ಉತ್ಸಾಹ ಮತ್ತು ತಳಮಟ್ಟದ ಕೆಲಸದ ಮೂಲಕ, ಅವರು ನಮ್ಮ ಸಮಾಜವನ್ನು ಬದುಕಲು ಯೋಗ್ಯವನ್ನಾಗಿಸಲು ಕೊಡುಗೆ ನೀಡುತ್ತಿದ್ದಾರೆ” ಎಂದಿದ್ದಾರೆ.
ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ನ ಸಹ-ಅಧ್ಯಕ್ಷರಾಗಿರುವ ಗೇಟ್ಸ್ ಅವರು ಕೇಂದ್ರ ಜವಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿಯವರನ್ನು ಭೇಟಿಯಾದರು.
“ಭಾರತೀಯ ಪೋಷನ್ ಕೃಷಿ ಕೋಶ್ ಪ್ರಾರಂಭವಾಗುವುದಕ್ಕೂ ಮೊದಲು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಪೌಷ್ಟಿಕತೆ ವಿರುದ್ಧ ಭಾರತದ ಹೋರಾಟದ ಕುರಿತು ಬಿಲ್ ಗೇಟ್ಸ್ ಅವರೊಂದಿಗೆ ಫಲದಾಯಕ ಸಭೆ ನಡೆಯಿತು” ಎಂದು ಇರಾನಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Wonderful meeting with Mr. @BillGates. Always a delight to interact with him on various subjects. Through his innovative zeal and grassroots level work, he is passionately contributing towards making our planet a better place. pic.twitter.com/54jClhbDiL
— Narendra Modi (@narendramodi) November 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.