ನವದೆಹಲಿ: ಅಕ್ಟೋಬರ್ 8 ರಂದು ಫ್ರಾನ್ಸಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಭಾರತಕ್ಕಾಗಿ ತಯಾರಿಸಲಾದ ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟವನ್ನು ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ರಫೆಲ್ ಯುದ್ಧ ವಿಮಾನ ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ ಇದು 2020ರ ವೇಳೆಗೆ ಭಾರತಕ್ಕೆ ಆಗಮಿಸಲಿದೆ.
ಅಕ್ಟೋಬರ್ 8 ವಾಯುಸೇನಾ ದಿನವಾಗಿದ್ದು, ಅದೇ ದಿನ ಸಚಿವರು ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವುದು ವಿಶೇಷವಾಗಿದೆ.
“ಯೋಜನೆಗಳ ಪ್ರಕಾರ, ಫ್ರೆಂಚ್ ಪೈಲಟ್ ರಫೆಲ್ ಯುದ್ಧ ವಿಮಾನ ಮುಂಭಾಗದ ಕಾಕ್ಪಿಟ್ನಲ್ಲಿ ಹಾರಾಟ ನಡೆಸಿದರೆ, ರಾಜನಾಥ್ ಸಿಂಗ್ ಹಿಂಭಾಗದ ಕಾಕ್ಪಿಟ್ನಲ್ಲಿ ಕುಳಿತುಕೊಳ್ಳುತ್ತಾರೆ. ಭಾರತದ ಮೊದಲ ರಫೆಲ್ ಟೇಲ್ನಲ್ಲಿ ಆರ್ ಬಿ -01 ನಂಬರ್ ಹೊಂದಿದೆ. ಇದು ಭಾರತದ ನೂತನ ವಾಯುಸೇನಾ ಮುಖ್ಯಸ್ಥ ಆರ್. ಕೆ. ಭದೌರಿಯಾ ಅವರ ಮೊದಲಾಕ್ಷರಗಳನ್ನು ಒಳಗೊಂಡಿದೆ ” ಎಂದು ಐಎಎಫ್ ಮೂಲಗಳು ತಿಳಿಸಿವೆ.
ರಫೆಲ್ ಫೈಟರ್ ಜೆಟ್ಗಳನ್ನು ಸ್ವೀಕರಿಸಿದ ನಂತರ, ಮಿಲಿಟರಿ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಕುರಿತು ರಕ್ಷಣಾ ಸಚಿವರು ಫ್ರೆಂಚ್ ಸರ್ಕಾರದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಕ್ಟೋಬರ್ 8 ರಂದು ಅಧಿಕೃತವಾಗಿ ವಿಮಾನವನ್ನು ಸ್ವೀಕರಿಸಲು ರಕ್ಷಣಾ ಸಚಿವರು ಬೋರ್ಡೆಕ್ಸ್ಗೆ ತೆರಳಲಿದ್ದಾರೆ ಮತ್ತು ನಂತರ ಅಕ್ಟೋಬರ್ 9 ರಂದು ತಮ್ಮ ಫ್ರೆಂಚ್ ಸಹವರ್ತಿಗಳೊಂದಿಗೆ ರಕ್ಷಣಾ ಸಂಬಂಧಗಳ ಕುರಿತು ಮಾತುಕತೆ ನಡೆಸಲು ಪ್ಯಾರಿಸಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾಯುಸೇನೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎಚ್ಎಸ್ ಅರೋರಾ ಅವರು ವಿಮಾನವನ್ನು ಸ್ವೀಕರಿಸುವ ದಿನದಂದು ರಕ್ಷಣಾ ಸಚಿವರಿಗೆ ಸಾಥ್ ನೀಡಲಿದ್ದಾರೆ.
36 ರಫೆಲ್ ಯುದ್ಧ ವಿಮಾನಗಳಿಗಾಗಿ ಭಾರತವು ಫ್ರಾನ್ಸಿನ ಡೆಸಾಲ್ಟ್ ಕಂಪನಿಯೊಂದಿಗೆ 2016 ರಲ್ಲಿ ಸಹಿ ಹಾಕಿತ್ತು. ಸುಮಾರು 60,000 ಕೋಟಿ ರೂ.ಗಳ ಒಪ್ಪಂದ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.