ಗುವಾಹಟಿ: ವಿಕ್ರಮ್ ಸಾರಾಭಾಯ್ ಅವರ 100 ನೇ ಜನ್ಮ ದಿನಾಚರಣೆಯನ್ನು ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 50 ವರ್ಷ ಪೂರೈಸಿದ್ದನ್ನು ಸಂಭ್ರಮಿಸಲು ಅಸ್ಸಾಂನ ಗುವಾಹಟಿಯಲ್ಲಿ ವಿಶೇಷ ಇಸ್ರೋ ಥೀಮ್ನ ದುರ್ಗಾ ಪೂಜಾ ಪೆಂಡಾಲ್ ಅನ್ನು ನಿರ್ಮಾಣ ಮಾಡಲಾಗಿದೆ.
ಈ ಪೆಂಡಾಲ್ ಅನ್ನು ಚತ್ರಿಬರಿ ಸರ್ಬಜಾನಿನ್ ದೇಬೊ ಪೂಜಸ್ಥಾನ್ ಸಮಿತಿ ವಿನ್ಯಾಸಗೊಳಿಸಿದೆ.
“ನಾವು ಈ ಬಾರಿ ಇಸ್ರೋ ಥೀಮ್ನೊಂದಿಗೆ ಬಂದಿದ್ದೇವೆ. ಜನರು ಇಲ್ಲಿಗೆ ಬಂದು ಇಸ್ರೋ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
“ನಾವು ಪ್ರತಿವರ್ಷ ಹೊಸತನ್ನು ಮಾಡಲು ಪ್ರಯತ್ನಿಸುತ್ತೇವೆ. ಈ ಬಾರಿ ನಾವು ಇಸ್ರೋಗೆ 50 ವರ್ಷಗಳು ಪೂರೈಸಿದ್ದನ್ನು ಮತ್ತು ವಿಕ್ರಮ್ ಸಾರಾಭಾಯ್ ಅವರ 100 ನೇ ಜನ್ಮದಿನದ ವಿಷಯವನ್ನು ಕೈಗೆತ್ತಿಕೊಂಡಿದ್ದೇವೆ. ಯುವ ಪೀಳಿಗೆಗೆ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ, ಅವರಿಗೆ ಇಸ್ರೋದ ಬಗ್ಗೆ ತಿಳಿಸಲು ನಾವು ಬಯಸುತ್ತೇವೆ. ಇಸ್ರೋದ ಚಂದ್ರಯಾನ -2 ಯೋಜನೆಯನ್ನು ಪ್ರಾರಂಭಿಸಿದ ದಿನದಿಂದಲೂ ನಮಗೆ ಎಷ್ಟು ಸಾಧ್ಯವೋ ಅಷ್ಟು ಇಸ್ರೋ ಬಗ್ಗೆ ತೋರಿಸಲು ಪ್ರಯತ್ನಿಸಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.