ವಿಶ್ವಸಂಸ್ಥೆ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪರಮಾಣು ಯುದ್ಧದ ಬಗ್ಗೆ ಖಾನ್ ಅವರು ಒಡ್ಡಿರುವ ಬೆದರಿಕೆ ಉತ್ತಮ ರಾಜಕಾರಣಿಯ ನಡವಳಿಕೆಯಲ್ಲ ಎಂದು ಭಾರತ ಹೇಳಿದೆ. ತಮ್ಮ ಭಾಷಣದಲ್ಲಿ ಖಾನ್ ಅವರು, ಪದೇ ಪದೇ ಜಮ್ಮು ಕಾಶ್ಮೀರದ ಬಗ್ಗೆ ಉಲ್ಲೇಖವನ್ನು ಮಾಡಿದ್ದು, ಎರಡು ಪರಮಾಣು ರಾಷ್ಟ್ರಗಳು ಯುದ್ಧಕ್ಕಿಳಿದರೆ ಇಡೀ ವಿಶ್ವದ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದರು.
ಅವರ ಭಾಷಣಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿರುವ ವಿಶ್ವಸಂಸ್ಥೆಯಲ್ಲಿನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿದಿಶಾ ಮೈತ್ರಾ ಅವರು, “ಪರಮಾಣು ವಿನಾಶವನ್ನು ಬಿಚ್ಚಿಡುವ ಪ್ರಧಾನಿ ಖಾನ್ ಅವರ ಬೆದರಿಕೆ ಬ್ರಿಂಕ್ಮ್ಯಾನ್ಶಿಪ್ ಆಗಿ ಅರ್ಹತೆ ಪಡೆಯುತ್ತದೆಯೇ ಹೊರತು ಉತ್ತಮ ರಾಜಕಾರಣಿಯಾಗಿಲ್ಲ” ಎಂದಿದ್ದಾರೆ.
“ಖಾನ್ ಅವರು ಶ್ರೀಮಂತ V/s ಬಡವ, ದಕ್ಷಿಣ V/s ಉತ್ತರ, ಅಭಿವೃದ್ಧಿ ಹೊಂದಿದ V/s ಅಭಿವೃದ್ಧಿಶೀಲ, ಮುಸ್ಲಿಂ V/s ಇತರರು ಈ ರೀತಿಯಾಗಿ ವಿಶ್ವಸಂಸ್ಥೆಯಲ್ಲಿ ವಿಭಜನೆಯನ್ನು ಬೆಳೆಸುವ ಪ್ರವೃತ್ತಿಯಲ್ಲಿ ಖಾನ್ ಅವರು ಭಾಷಣವನ್ನು ಮಾಡಿದ್ದಾರೆ. ಭಿನ್ನಾಭಿಪ್ರಾಯಗಳನ್ನು ತೀಕ್ಷ್ಣಗೊಳಿಸುವ ಮತ್ತು ದ್ವೇಷವನ್ನು ಹುಟ್ಟುಹಾಕುವ ಅವರ ಪ್ರಯತ್ನಗಳನ್ನು ಸರಳವಾಗಿ ‘ದ್ವೇಷದ ಭಾಷಣ’ ಎಂದು ಕರೆಯಬಹುದು” ಎಂದಿದ್ದಾರೆ.
“ಒಂದು ವೇಳೆ ಸಾಂಪ್ರದಾಯಿಕ ಯುದ್ಧ ಪ್ರಾರಂಭವಾದರೆ, ಏನು ಬೇಕಾದರೂ ಆಗಬಹುದು. ಆದರೆ, ತನ್ನ ನೆರೆಹೊರೆಯವರಿಗಿಂತ ಏಳು ಪಟ್ಟು ಚಿಕ್ಕದಾದ ದೇಶವು ಆಯ್ಕೆಯನ್ನು ಎದುರಿಸುತ್ತಿದೆ. ನೀವು ಶರಣಾಗುತ್ತೀರೋ ಬಿಡುತ್ತೀರೋ ಸಾವಿನವರೆಗೂ ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಲೇ ಬೇಕು ಮತ್ತು ನಾವು ಹೋರಾಡುತ್ತೇವೆ. ಮತ್ತು ಪರಮಾಣು ಸಶಸ್ತ್ರ ದೇಶಗಳು ಯುದ್ಧ ಮಾಡಿದರೆ ಅದು ಗಡಿಯನ್ನು ಮೀರಿದ ಪರಿಣಾಮಗಳನ್ನು ಬೀರಬಹುದು” ಎಂದು ಖಾನ್ ಹೇಳಿದ್ದರು.
ಪಾಕಿಸ್ಥಾನದ ಪ್ರಧಾನ ಮಂತ್ರಿಯ ಭಾಷೆಗೆ ತಿರುಗೇಟು ನೀಡಿದ ಎಂ.ಎಸ್. ಮೈತ್ರಾ , “ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇಂತಹ ದುರುಪಯೋಗಗಳನ್ನು ಅಪರೂಪವಾಗಿ ಕಾಣುತ್ತದೆ. ಇದು ಅವಕಾಶದ ದೌರ್ಜನ್ಯವಲ್ಲದೆ ಮತ್ತೇನೂ ಅಲ್ಲ. ಅವರ ಮಾತುಗಳು ರಾಜತಾಂತ್ರಿಕತೆಯಲ್ಲಿ ಬಹುಮುಖ್ಯವಾಗಿದೆ. ‘ಪೋಗ್ರೊಮ್’, ‘ಬ್ಲಡ್ ಬಾತ್’ ‘ಜನಾಂಗೀಯ ಶ್ರೇಷ್ಠತೆ’, ‘ಗನ್ ಎತ್ತಿಕೊಳ್ಳಿ’ ಮತ್ತು ‘ಕೊನೆಯವರೆಗೂ ಹೋರಾಡಿ’ ಮುಂತಾದ ನುಡಿಗಟ್ಟುಗಳ ಬಳಕೆ ಅವರ ಕೆಟ್ಟುಹೋದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇದು 21 ನೇ ಶತಮಾನದ ದೃಷ್ಟಿಕೋನವಲ್ಲ “ಎಂದು ಅವರು ಹೇಳಿದ್ದಾರೆ.
“ಒಸಮಾ ಬಿನ್ ಲಾಡೆನ್ ಪಾಕಿಸ್ಥಾನದಲ್ಲಿ ಇದ್ದುದ್ದನ್ನು ಖಾನ್ ನ್ಯೂಯಾರ್ಕ್ ನಗರದಲ್ಲಿ ಅಲ್ಲಗೆಳೆಯುವರೇ’ ಎಂದು ಮೈತ್ರಾ ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.