ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 42ನೇ ಅಧಿವೇಶನದಲ್ಲಿ ಕಾಶ್ಮೀರದ ಬಗ್ಗೆ ಸುಳ್ಳಿನ ಕಂತೆಯನ್ನು ಮುಂದಿಟ್ಟ ಪಾಕಿಸ್ಥಾನಕ್ಕೆ ಭಾರತ ತೀಕ್ಷ್ಣ ಪ್ರತ್ಯುತ್ತರವನ್ನು ನೀಡಿದೆ. ಭಾರತದ ಕಾರ್ಯದರ್ಶಿ ವಿಜಯ ಠಾಕೂರ್ ಸಿಂಗ್ ಅವರು, ಪಾಕಿಸ್ಥಾನದ ವಾದಗಳ ನಿಜಮುಖವನ್ನು ಒಂದೊಂದಾಗಿ ಬಯಲಿಗೆಳೆದಿದ್ದಾರೆ ಮತ್ತು ಪಾಕಿಸ್ಥಾನವು ಸುಳ್ಳು ಆರೋಪಗಳು ಆಕ್ರಮಣಕಾರಿ ವಾಕ್ಚಾತುರ್ಯವನ್ನು ಮುಂದುವರೆಸಿದೆ ಎಂದು ವಿಶ್ವಸಮುದಾಯಕ್ಕೆ ತಿಳಿಸಿದ್ದಾರೆ.
“ಒಂದು ನಿಯೋಗವು ಸುಳ್ಳು ಆರೋಪಗಳ ಆಕ್ರಮಣಕಾರಿ ವಾಕ್ಚಾತುರ್ಯವನ್ನು ಪ್ರದರ್ಶಿಸಿದೆ ಮತ್ತು ನನ್ನ ದೇಶದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದೆ. ಈ ಕಟ್ಟುಕಥೆಯ ನಿರೂಪಣೆಯು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾದ ದೇಶದಿಂದ ಬಂದಿದೆ ಎಂದು ಜಗತ್ತಿಗೆ ತಿಳಿದಿದೆ, ಆ ದೇಶದಲ್ಲಿ ಉಗ್ರ ನಾಯಕರಿಗೆ ವರ್ಷಗಳಿಂದ ಆಶ್ರಯವನ್ನು ನೀಡಲಾಗುತ್ತಿದೆ. ಆ ರಾಷ್ಟ್ರವು ಗಡಿ ಭಯೋತ್ಪಾದನೆಯನ್ನು ಪರ್ಯಾಯ ರಾಜತಾಂತ್ರಿಕತೆಯ ರೂಪವಾಗಿಸಿದೆ” ಎಂದು ವಿಜಯ ಠಾಕೂರ್ ಸಿಂಗ್ ಹೇಳಿದ್ದಾರೆ.
370 ನೇ ವಿಧಿಯನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿದ ಸಿಂಗ್, ಇತ್ತೀಚೆಗೆ ಭಾರತ ಕೈಗೊಂಡ ಶಾಸಕಾಂಗ ಕ್ರಮಗಳು ಅದರ ಸಂವಿಧಾನದ ಚೌಕಟ್ಟಿನಲ್ಲಿದೆ ಮತ್ತು ಇದು ಭಾರತದ ಆಂತರಿಕ ವಿಷಯವಾಗಿದೆ ಎಂದು ಹೇಳಿದರು. 370 ನೇ ವಿಧಿಯನ್ನು ರದ್ದುಪಡಿಸುವುದರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿನ ನಮ್ಮ ನಾಗರಿಕರಿಗೆ ಪ್ರಗತಿಪರ ಕ್ರಮಗಳು ಸಂಪೂರ್ಣವಾಗಿ ಅನ್ವಯವಾಗುತ್ತವೆ ಎಂದು ಖಚಿತಪಡಿಸುತ್ತೇನೆ ಎಂದು ಅವರು ಹೇಳಿದರು. ಈ ನಿರ್ಧಾರದ ಮೂಲಕ ಆಸ್ತಿ ಹಕ್ಕುಗಳು ಮತ್ತು ಸ್ಥಳೀಯ ಸಂಸ್ಥೆಗಳ ಪ್ರಾತಿನಿಧ್ಯ ಸೇರಿದಂತೆ ಲಿಂಗ ತಾರತಮ್ಯವನ್ನು ಕೊನೆಗೊಳಿಸಲಾಗುವುದು. ಬಾಲಾಪರಾಧಿಗಳ ಹಕ್ಕುಗಳು ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧದ ಕಾನೂನುಗಳಿಗೆ ಇದರಿಂದ ಉತ್ತಮ ರಕ್ಷಣೆ ಸಿಗುತ್ತದೆ ಎಂದಿದ್ದಾರೆ.
“ನಿರಾಶ್ರಿತರ ಮತ್ತು ಬಡವರ್ಗಗಳು ಎದುರಿಸುತ್ತಿದ್ದ ದೀರ್ಘಕಾಲದ ತಾರತಮ್ಯವು ಕೊನೆಗೊಳ್ಳುತ್ತದೆ. ದೀರ್ಘ ಚರ್ಚೆಯ ನಂತರ ಈ ನಿರ್ಧಾರಗಳನ್ನು ನಮ್ಮ ಸಂಸತ್ತು ತೆಗೆದುಕೊಂಡಿದೆ. ಸಂಸತ್ತು ಅಂಗೀಕರಿಸಿದ ಇತರ ಶಾಸನಗಳಂತೆ ಈ ಸಾರ್ವಭೌಮ ನಿರ್ಧಾರವು ಸಂಪೂರ್ಣವಾಗಿ ಆಂತರಿಕವಾಗಿದೆ ಎಂದು ನಾವು ಪುನರುಚ್ಚರಿಸುತ್ತೇವೆ. ಯಾವುದೇ ದೇಶವು ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಖಂಡಿತವಾಗಿಯೂ ಭಾರತ ಇದನ್ನು ಒಪ್ಪುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.