ಜಿನೆವಾ: ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಂಗಳವಾರ ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ(ಯುಎನ್ಎಚ್ಆರ್ಸಿ) ಸಮಾವೇಶದಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದ ರಾಜ್ಯ ಎಂದು ಉಲ್ಲೇಖ ಮಾಡಿದ್ದಾರೆ.
ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಖುರೇಷಿ, ‘ಭಾರತವು ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬುದನ್ನು ಬಿಂಬಿಸುತ್ತಿದೆ. ‘ಇಂಡಿಯನ್ ಸ್ಟೇಟ್ ಆಫ್ ಕಾಶ್ಮೀರ್’ ಕ್ಕೆ ಯಾರಿಗೂ ತೆರಳಲು ಅವಕಾಶ ಕೊಡುತ್ತಿಲ್ಲ ಏಕೆ?’ ಎಂದಿದ್ದಾರೆ. ಈ ಮೂಲಕ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
#WATCH: Pakistan Foreign Minister Shah Mehmood Qureshi mentions Kashmir as “Indian State of Jammu and Kashmir” in Geneva pic.twitter.com/kCc3VDzVuN
— ANI (@ANI) September 10, 2019
ಜಮ್ಮು-ಕಾಶ್ಮೀರ ತನ್ನದು ತನ್ನದು ಎಂದು ಇದುವರೆಗೆ ವಾದಿಸುತ್ತ ಬಂದಿರುವ ಪಾಕಿಸ್ಥಾನ, ಇದೀಗ ವಿಶ್ವಸಂಸ್ಥೆಯ ಮಂಡಳಿಯಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದ ರಾಜ್ಯ ಎಂದು ಉಲ್ಲೇಖ ಮಾಡಿರುವುದು ನಿಜಕ್ಕೂ ಆಶ್ಚರ್ಯಕರವಾದ ಬೆಳವಣಿಗೆಯಾಗಿದೆ. ಇದುವರೆಗೆ ಪಾಕಿಸ್ಥಾನವು ಜಮ್ಮು-ಕಾಶ್ಮೀರವನ್ನು ಭಾರತ ಆಳುತ್ತಿರುವ ರಾಜ್ಯ ಎಂದು ಉಲ್ಲೇಖ ಮಾಡುತ್ತಿತ್ತು.
ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಖುರೇಷಿ ಅವರು, ಜಮ್ಮು-ಕಾಶ್ಮೀರದಲ್ಲಿ ಭಾರತ ದೌರ್ಜನ್ಯ ಎಸಗುತ್ತಿದೆ ಎಂಬ ಹಳೆಯ ಸುಳ್ಳು ಹೇಳಿಕೆಯನ್ನು ಪುನರಾವರ್ತಿಸಿದರು.
ವಿಶೇಷವೆಂದರೆ, ಜಮ್ಮು-ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಖುರೇಷಿ ಅವರು ಭಾಷಣ ಮಾಡುತ್ತಿದ್ದಂತೆ, ಅತ್ತ ಹೊರಗಡೆ ಪಾಕಿಸ್ಥಾನದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಪ್ರತಿಭಟನೆ ನಡೆಸುತ್ತಿದ್ದರು.
ಕಾಶ್ಮೀರ ವಿಷಯವನ್ನು ಅಂತರರಾಷ್ಟ್ರೀಕರಣಗೊಳಿಸಲು ಪಾಕಿಸ್ಥಾನ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇದೆ. ಪ್ರತಿಬಾರಿಯೂ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಅದು ಇದನ್ನೇ ಪ್ರತಿಪಾದಿಸುತ್ತದೆ. ಆದರೆ ಚೀನಾವನ್ನು ಹೊರತುಪಡಿಸಿ ಬೇರೆ ಯಾವ ದೇಶದ ಬೆಂಬಲವೂ ಅದಕ್ಕೆ ಸಿಗುತ್ತಿಲ್ಲ, ಇದರಿಂದ ಅದು ಹತಾಶೆಗೊಂಡು ವಿಪರೀತ ಎಂಬಂತೆ ವರ್ತಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.