ನವದೆಹಲಿ : ಭಾರತ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಉಪಟಳ ನಡೆಸಲು ಪಾಕಿಸ್ಥಾನಕ್ಕೆ ತೀವ್ರ ಕಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಅದು ಯುದ್ಧವನ್ನು ಪ್ರಚೋದಿಸುವಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದೆ. ಮಾತ್ರವಲ್ಲ, ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಇನ್ನಿಲ್ಲದ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಪ್ರತ್ಯೇಕತೆಗಾಗಿ ಹೋರಾಡುತ್ತಿರುವ ನಾಗಾಲ್ಯಾಂಡ್ ಪ್ರತ್ಯೇಕತಾವಾದಿಗಳನ್ನು ಮತ್ತೆ ಕೆರಳಿಸಿ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ನಿಟ್ಟಿನಲ್ಲಿ ಅದು ಪ್ರಯತ್ನಗಳನ್ನು ನಡೆಸುತ್ತಿದೆ.
ಪ್ರಸ್ತುತ ಪಾಕಿಸ್ಥಾನ ಸೈನಿಕರು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಶೂಟಿಂಗ್ ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ. ಭಾರತೀಯ ಯೋಧರ ಸಮವಸ್ತ್ರಗಳನ್ನು ತೊಟ್ಟಿರುವ ಅವರು ನಕಲಿ ವೀಡಿಯೋಗಳನ್ನು ಮಾಡುತ್ತಿದ್ದಾರೆ. ಭಾರತೀಯ ಯೋಧರು ಜನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎಂಬ ಸುದ್ದಿಯನ್ನು ಹರಡಲು ಅವರುಗಳು ನಕಲಿ ದೃಶ್ಯಾವಳಿಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನಲಾಗಿದೆ. ಇಂತಹ ಕೆಲವು ವೀಡಿಯೋಗಳನ್ನು ಸೃಷ್ಟಿಸಿ ನಾಗಾಲ್ಯಾಂಡ್ ಪ್ರತ್ಯೇಕತಾವಾದಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೃಹ ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ, “ನಕಲಿ ವೀಡಿಯೋಗಳನ್ನು ಸೃಷ್ಟಿಸಿ ಪಾಕಿಸ್ಥಾನ ಇಂಟರ್ನೆಟ್ಗಳಲ್ಲಿ ಅಪ್ಲೋಡ್ ಮಾಡುತ್ತಿದೆ ಮತ್ತು ನಾಗಾಗಳಿಗೆ ಧ್ವನಿ ಎತ್ತುವಂತೆ ಪ್ರಚೋದನೆಯನ್ನು ನೀಡುತ್ತಿದೆ” ಎಂದಿದ್ದಾರೆ.
“ಈ ಸಂದೇಶಗಳು ಮತ್ತು ವೀಡಿಯೊಗಳನ್ನು ಬಂಡುಕೋರ ನಾಗಾ ಗುಂಪುಗಳಿಗೆ ಮಾತ್ರವಲ್ಲದೆ ನಾಗಾಲ್ಯಾಂಡ್ ಪ್ರತ್ಯೇಕ ರಾಜ್ಯವಾಗಬೇಕೆಂದು ಪ್ರತಿಪಾದಿಸುತ್ತಿರುವ ಕಾರ್ಯಕರ್ತರಿಗೂ ಕಳುಹಿಸಲಾಗುತ್ತಿದೆ” ಎಂದು ಎಂದಿದ್ದಾರೆ.
ಕಾಶ್ಮೀರದಲ್ಲಿ ಇಂಟರ್ನೆಟ್ ಸಂಪರ್ಕಗಳನ್ನು ಇನ್ನೂ ಯಾಕೆ ಪುನಃಸ್ಥಾಪಿಸಲಾಗದಿರುವುದಕ್ಕೆ ಪಾಕಿಸ್ಥಾನದ ಈ ನೀಚ ಕೃತ್ಯವೇ ಕಾರಣ ಎಂದಿದ್ದಾರೆ.
ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಮೇಣವಾಗಿ ಲ್ಯಾಂಡ್ಲೈನ್ ಫೋನ್ಗಳು, ಮೊಬೈಲ್ ಫೋನ್ ನೆಟ್ವರ್ಕ್ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
“ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ, ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದೆ. ಆದರೂ, ಪಾಕಿಸ್ಥಾನವು ಇಂಟರ್ನೆಟ್ ಮೂಲಕ ಭಾರತದ ವಿರುದ್ಧ ವಿಷವನ್ನು ಹರಡುತ್ತಿರುವುದರಿಂದ ತಕ್ಷಣಕ್ಕೆ ಸಂಪೂರ್ಣವಾಗಿ ಇಂಟರ್ನೆಟ್ ಸಂಪರ್ಕಗಳನ್ನು ಪುನಃಸ್ಥಾಪಿಸಲಾಗುವುದಿಲ್ಲ. ಪಾಕಿಸ್ಥಾನ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಮತ್ತು ಪಾಕಿಸ್ಥಾನದಲ್ಲಿ ಹುಟ್ಟಿಕೊಳ್ಳುತ್ತಿರುವ ನಕಲಿ ಅಂತಹ ವೀಡಿಯೊಗಳು, ನಾಗಾಲ್ಯಾಂಡ್ ಅನ್ನೂ ತಲುಪಿರುವುದು ಅಪಾಯಕಾರಿಯಾಗಿದೆ” ಎಂದಿದ್ದಾರೆ.
“ಇಂಟರ್ನೆಟ್ ಅನ್ನು ಪುನಃಸ್ಥಾಪಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದ ಜನರನ್ನು ಪ್ರಚೋದಿಸಲು ಪಾಕಿಸ್ಥಾನವು ಪ್ರಯತ್ನಿಸುತ್ತದೆ. ಪ್ರಸ್ತುತ ಈ ಕಾರ್ಯವನ್ನು ಅವರು ನಾಗಾಲ್ಯಾಂಡಿನಲ್ಲೂ ಮಾಡುತ್ತಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.