ಗುವಾಹಟಿ: ಗುವಾಹಟಿಯ ಉರುಕಾ ರೆಸ್ಟೋರೆಂಟ್ನಲ್ಲಿನ ವೈಟ್ರೆಸ್ (ಪರಿಚಾರಿಕೆ) ಪಾಲ್ಕಿ ಈಗ ಮನೆ ಮಾತಾಗಿದ್ದಾಳೆ. ಮಹಿಳೆಯರೇ ನಡೆಸುವ ಈ ರೆಸ್ಟೋರೆಂಟ್ನಲ್ಲಿ ಹ್ಯೂಮನಾಯ್ಡ್ ರೋಬೋಟ್ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದೆ. ಇದು ಜನರನ್ನು ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯನ್ನು ಬಹುವಾಗಿ ಆಕರ್ಷಿಸಿದೆ.
ರೋಬೋಟ್ ಪಾಲ್ಕಿಯನ್ನು ರೆಸ್ಟೋರೆಂಟ್ ಒಡತಿ ಕರಿಷ್ಮಾ ಬೇಗಂ ಅವರ ಪತಿ ಎಸ್ ಎನ್ ಫರೀದ್ ವಿನ್ಯಾಸಗೊಳಿಸಿದ್ದಾರೆ.
“ಈ ರೆಸ್ಟೋರೆಂಟ್ ಅನ್ನು ಮಹಿಳೆಯರ ತಂಡವೊಂದು ನಡೆಸುತ್ತಿದೆ ಮತ್ತು ನಾನು ಇಲ್ಲಿ ಹೊಸ ಹೊಸ ವಿಶಿಷ್ಠ ರೀತಿಯ ತಿನಿಸುಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ನಮ್ಮ ಗ್ರಾಹಕರಿಗೆ ಸ್ವಾಗತ ಪಾನೀಯ (Welcome Drink) ಮತ್ತು ಅನಿಯಮಿತ ಸ್ಟಾರ್ಟರ್ಸ್ಗಳನ್ನು ನೀಡುತ್ತೇವೆ. ನಂತರ, ನಾವು ಅಸ್ಸಾಂನ ಸಾಂಪ್ರದಾಯಿಕ ಆಹಾರವನ್ನು ಬಫೆಟ್ನಲ್ಲಿ ನೀಡುತ್ತೇವೆ. ಇತ್ತೀಚೆಗೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ನಾವು ಪಾಲ್ಕಿ ಎಂಬ ರೋಬೋಟ್ ಅನ್ನು ಪರಿಚಯಿಸಿದ್ದೇವೆ “ಎಂದು ಉರುಕಾ ರೆಸ್ಟೋರೆಂಟ್ ಮಾಲೀಕ ಕರಿಷ್ಮಾ ಬೇಗಂ ಹೇಳುತ್ತಾರೆ.
ಈ ರೆಸ್ಟೋರೆಂಟ್ ಎಥ್ನಿಕ್ ಕಸಿನ್ಗಳಲ್ಲಿ ಪರಿಣತಿ ಹೊಂದಿದೆ. ಮಾತ್ರವಲ್ಲದೇ ರೋಬೋಟ್ ಪಾಲ್ಕಿ ಸಾಂಪ್ರದಾಯಿಕ ಸತ್ರಿ ಉಡುಪನ್ನು ಧರಿಸಿ ಬಂದವರಿಗೆ ಆತಿಥ್ಯವನ್ನು ನೀಡುತ್ತಾಳೆ.
“ನಾನು ಈ ಸ್ಥಳವನ್ನು ನಿಜವಾಗಿಯೂ ಇಷ್ಟಪಡುತ್ತೇನೆ, ಇಲ್ಲಿ ಪಡೆದ ಆತಿಥ್ಯವು ಸ್ಮರಣೀಯ. ಇಲ್ಲಿ ಆಹಾರವು ತುಂಬಾ ರುಚಿಕರವಾಗಿದೆ. ರೋಬೋಟ್ ಆಕರ್ಷಕವಾಗಿದೆ. ಇದು ನನಗೆ ಹೊಸ ಅನುಭವ. ರೋಬೋಟ್ ನಮಗೆ ರುಚಿಕರವಾದ ಆಹಾರವನ್ನು ನೀಡುತ್ತಿದ್ದಾಳೆ. ನಾನು ಈ ರೀತಿಯ ರೋಬೋಟ್ ಅನ್ನು ಹಿಂದೆಂದೂ ನೋಡಿಲ್ಲ” ಎಂದು ಗ್ರಾಹಕರೊಬ್ಬರು ಹೇಳುತ್ತಾರೆ.
ವಿಶೇಷವೆಂದರೆ, ರೆಸ್ಟೋರೆಂಟ್ನ ಮಾಲೀಕ ಫರೀದ್ ಅವರು ಇನ್ನೂ ಮೂರು ರೀತಿಯ ರೋಬೋಟ್ ತಯಾರಿಕ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.