ಜಿ.ವಿ. ಅಯ್ಯರ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಜಿ.ವಿ. ಅಯ್ಯರ್ ರವರು ಕಥೆ, ಚಿತ್ರಕಥೆ, ನಿರ್ಮಾಣದ ಜೊತೆಗೆ ನಿರ್ದೇಶನ “ಪೋಸ್ಟ್ ಮಾಸ್ಟರ್” ಸಿನಿಮಾವು 1964ರಲ್ಲಿ ಬಿಡುಗಡೆಗೊಳ್ಳುತ್ತದೆ. ಇ.ಎನ್.ಬಾಲಕೃಷ್ಣ ರವರ ಛಾಯಾಗ್ರಹಣವಿದ್ದು, ವಿಜಯ ಭಾಸ್ಕರ್ ರವರು ಸಂಗೀತ ನೀಡಿದ್ದಾರೆ. ಬಿ.ಎಂ.ವೆಂಕಟೇಶ್, ಜಿ.ವಿ.ಶಿವರಾಜ್, ವಂದನ, ಪಾಪಮ್ಮ, ಪ್ರಭಾ, ಶಾರದ, ಲೀಲಾ ಹಾಗೂ ಬಾಲರಾಜ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಥೆ:
ಪೋಸ್ಟ್ ಮಾಸ್ಟರ್ ಒಬ್ಬ ಕಚೇರಿಯ ದಕ್ಷ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಆತನ ಸಮಯಪಾಲನೆಯಲ್ಲಿ ನಿಷ್ಟಾವಂತ. ಒಂದು ನಿಮಿಷವೂ ಲೇಟ್ ಆಗಿ ಬರಲು ಆತನ ಮನಸ್ಸು ಒಪ್ಪುವುದಿಲ್ಲ. ಅಷ್ಟೇ ಅಲ್ಲದೇ ತನ್ನ ಕಚೇರಿಯಲ್ಲಿ ಅಧೀನದಲ್ಲಿನ ಇತರೆ ಸಿಬ್ಬಂದಿಗಳೂ ಲೇಟ್ ಆಗಿ ಬರಬಾರದು ಎಂಬ ಬಯಸುವ ಹಾಗೂ ಅಷ್ಟೇ ನಿಷ್ಟುರವಾಗಿ ಹೇಳುವ ಅಂಚೆ ಕಚೇರಿಯ ಅಧಿಕಾರಿ ಆತ. ಈಗಿರುವಾಗ ಕಚೇರಿಯಲ್ಲಿಯೇ ಕೆಲಸ ನಿರ್ವಹಿಸುವ ಯುವಕ ಹಾಗೂ ತನ್ನ ಮಗಳ ನಡುವಿನ ಪ್ರೇಮಕ್ಕೆ ಸಮ್ಮತಿ ನೀಡುತ್ತಾನೆ. ಅದರಂತೆ ಇಬ್ಬರಿಗೂ ಮದುವೆ ಮಾಡಲು ಎರಡೂ ಕಡೆಯ ಹಿರಿಯರು ಪರಸ್ಪರ ಒಪ್ಪಿಕೊಳ್ಳುತ್ತಾರೆ. ಕರ್ತವ್ಯದಲ್ಲಿ ನಿಷ್ಠಾವಂತ ಹಾಗೂ ಪ್ರಾಮಾಣಿಕ, ಅಷ್ಟೇ ಅಲ್ಲದೇ ತೀರಾ ಸ್ವಾಭಿಮಾನಿ. ತನ್ನ ಮಕ್ಕಳನ್ನೂ ಕೂಡ ಉತ್ತಮ ಹಾದಿಯಲ್ಲೇ ಸಾಗುವಂತೆ ಪ್ರೇರೇಪಿಸುತ್ತಾನೆ.
ಹೀಗಿರುವಾಗ ಒಮ್ಮೆ ಹುಡುಗನ ತಂದೆಯು ಅಂಚೆ ಕಚೇರಿಗೆ ಬಂದು, ಹುಡುಗನ ಟೇಬಲಿನಲ್ಲಿದ್ದ 10,000/- ರೂಪಾಯಿಗಳ ಮೌಲ್ಯದ ಯಾರದ್ದೋ ಮನಿಆರ್ಡರ್ ಹಣವನ್ನು ಕದಿಯುತ್ತಾನೆ. ಕದ್ದವನು ಯಾರೋ, ಕಳೆದುಕೊಂಡವನು ಕೂಡ ಯಾರೋ, ಆದರೆ ಈತ ಕಚೇರಿಯ ಪ್ರಮುಖ ಅಧಿಕಾರಿಯಾದ ತಾನು ಇದಕ್ಕೆ ಜವಬ್ದಾರಿಯೆಂದು ಅರಿತು, ತಾನು ಕಚೇರಿ ಹಾಗೂ ಮನೆ ಬಿಟ್ಟು ಹೊರಡುತ್ತಾನೆ. ಆತ ತಾನು ನಿರ್ದೋಷಿ ಎಂದು ಪ್ರೂವ್ ಮಾಡಿಕೊಳ್ಳಲು ಸಹ ಮುಂದುವರೆಯುವುದಿಲ್ಲ. ಆ ಕಾಲವೇ ಹಾಗಿತ್ತು, ಪೋಲಿಸು ಹಾಗೂ ಕೋರ್ಟುಗಳಿಗೆ ಜನ ಹೋಗಲು ಸಾಮಾನ್ಯವಾಗಿ ಇಷ್ಟಪಡುತ್ತಿರಲಿಲ್ಲ. ಹಾಗಾಗಿಯೇ ಆತ ಕಳ್ಳನೆಂಬ ಆರೋಪ ಹೊತ್ತಂತಾಯಿತು. ಆತ ಮನೆ ಬಿಟ್ಟು ಹೋದಮೇಲೆ, ಆತನ ಕುಟುಂಬಕ್ಕೆ ಇನ್ನಿಲ್ಲದ ತೊಂದರೆಗಳಾದವು. ಅವರಿಬ್ಬರ ನಡುವಿನ ಪ್ರೇಮ ಹಸಿರಾದರೂ ಮದುವೆ ಮುರಿದು ಬಿತ್ತು. ಮನೆಯ ಎಲ್ಲಾ ಸದಸ್ಯರು ಕೂಡ ಸ್ವಾಭಿಮಾನಿಗಳಾಗಿದ್ದರಿಂದ ಯಾರದ್ದೇ ಹಂಗಿನಲ್ಲಿ ಬದುಕಲು ಇಷ್ಟಪಡುವುದಿಲ್ಲ. ಈ ಕಾಲದಲ್ಲಿ ಇಷ್ಟೊಂದು ಸ್ವಾಭಿಮಾನಿ ಕುಟುಂಬಗಳು ಅತಿವಿರಳ.
ಕಣ್ಣು ಕಾಣದ ತಾಯಿ, ಇನ್ನೂ ಎಳೆವಯಸ್ಸಿನ ತಮ್ಮಂದಿರ ಜವಬ್ದಾರಿ ಸೇರಿದಂತೆ ಕುಟುಂಬದ ಪೋಷಣೆಯ ಜವಬ್ದಾರಿ ಹೊತ್ತ ಪೋಸ್ಟ್ ಮಾಸ್ಟರ್ ಮಗಳು ಮದುವೆ ಕೂಡ ಆಗದೇ ಪ್ರಿಯತಮನಿಗಾಗಿ ಕಾಯುತ್ತಾಳೆ. ಪೋಸ್ಟರ್ ಮಾಸ್ಟರ್ ಮಕ್ಕಳು ಮುಂದೆ ದೊಡ್ಡವರಾಗಿ ಒಬ್ಬ ಶಿಕ್ಷಣಾಧಿಕಾರಿಯಾಗುತ್ತಾನೆ ಮತ್ತೊಬ್ಬ ಖ್ಯಾತ ಹಾಡುಗಾರನಾಗುತ್ತಾನೆ. ಮನೆ ಬಿಟ್ಟು ಬಂದಿದ್ದ ಪೋಸ್ಟ್ ಮಾಸ್ಟರ್ ಯಾರದೋ ಮನೆಯಲ್ಲಿ ಕೆಲಸ ಮಾಡುತ್ತಾ, ಶಾಲೆಯೊಂದರಲ್ಲಿ ಅಟೆಂಡರ್ ಆಗಿ ಕೂಡ ಕೆಲಸ ಮಾಡುತ್ತಾನೆ. ಆಗಲೂ ಸಹ ಶಾಲೆ ಫೀಸು ಕಟ್ಟಲಾಗದ ಮಕ್ಕಳಿಗೆ ತಾನು ದುಡಿದಿದ್ದ ಅದೇ ಹಣದಲ್ಲಿಯೇ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುತ್ತಾನೆ. ದೇವರೇ ಇಂತಹ ಕುಟುಂಬಗಳನ್ನು ಕಾಪಾಡುತ್ತಾನೆ ಎಂದನಿಸುತ್ತೆ. ಬರೀ ಕಷ್ಟಗಳೇ ತುಂಬಿದ್ದರೂ ಸುಖಮಯ ಕಾಲವೂ ಬರುತ್ತದೆ ಎಂಬುದಕ್ಕೆ ಸಾಕ್ಷಿ. ಆತ ಮನೆಗೆ ವಾಪಾಸ್ಸು ಬರುತ್ತಾನೆ. ಕಥೆ ಸಂತೋಷದಿಂದ ಅಂತ್ಯವಾಗುತ್ತದೆ. “ಕನ್ನಡದಾ ಕುಲದೇವಿ, ಕರುನಾಡು ತಾಯ್ನಾಡು” ಇಂದಿಗೂ ಜನಮಾನಸದಲ್ಲಿದೆ.
ಇದೆಲ್ಲದರ ನಡುವೆ ಇಂಥಾ ಸ್ವಾಭಿಮಾನ ಕುಟುಂಬಗಳ ಜೀವನವೇ ಸಮಾಜಕ್ಕೊಂದು ಪಾಠ. ಒಮ್ಮೆಯಾದರೂ ಈ ಸಿನಿಮಾ ನೋಡಿ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಕೆಲಸ ಖಾಸಗಿಯಾಗಲಿ, ಸರ್ಕಾರಿಯಾಗಲಿ ಅಥವಾ ಸಂಸ್ಥೆಯದ್ದೇ ಆಗಲಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಕುರಿತು ತಿಳಿಯಲು.
2. ಹಸಿವು, ನೋವು, ನಲಿವು, ಬದುಕು, ಆಪ್ಯಾಯಮಾನ, ಆತ್ಮೀಯತೆ, ಬಾಂಧವ್ಯ ಇವುಗಳ ಕುರಿತು ತಿಳಿಯಲು.
3. ಜೀವನದಲ್ಲಿ ಸ್ನೇಹ, ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.