ನವದೆಹಲಿ: ಗುರುವಾರ ಬಿಡುಗಡೆಯಾದ ಗ್ಲೋಬಲ್ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (MPI-ಜಾಗತಿಕ ಬಹು ಆಯಾಮ ಬಡತನ ಸೂಚ್ಯಾಂಕ) 2019 ರ ವರದಿಯ ಪ್ರಕಾರ, ಭಾರತವು 2005-06 ಮತ್ತು 2015-16ರ ನಡುವೆ 27.1 ಮಿಲಿಯನ್ ಜನರನ್ನು ಬಡತನದಿಂದ ಹೊರಹಾಕಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಆಕ್ಸ್ಫರ್ಡ್ ಪಾವರ್ಟಿ ಅಂಡ್ ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (OPHI)) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಬಿಡುಗಡೆ ಮಾಡಿದ ಈ ವರದಿಯ ಪ್ರಕಾರ, ಭಾರತವು ಆಸ್ತಿ, ಅಡುಗೆ ಇಂಧನ, ನೈರ್ಮಲ್ಯ ಮತ್ತು ಪೋಷಣೆಯಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ತೋರಿಸುತ್ತಿದೆ.
ಒಟ್ಟು ಎರಡು ಬಿಲಿಯನ್ ಜನಸಂಖ್ಯೆ ಹೊಂದಿರುವ 10 ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತವು MPI (ಬಹು ಆಯಾಮದ ಬಡತನ) ಮೌಲ್ಯದಲ್ಲಿ ವೇಗದ ಕಡಿತವನ್ನು ದಾಖಲಿಸಿದೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಅತ್ಯಂತ ಹೆಚ್ಚಿನ MPI ಹೊಂದಿರುವ ನಾಲ್ಕು ಭಾರತೀಯ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳ ಪೈಕಿ ಜಾರ್ಖಂಡ್ ಹೆಚ್ಚು ಪ್ರಗತಿಯನ್ನು ಸಾಧಿಸಿದೆ.
ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ಹತ್ತು ಸೂಚಕಗಳಲ್ಲಿ ಅಭಾವವನ್ನು ಹೊಂದಿರುವ 101 ದೇಶಗಳನ್ನು ಜಾಗತಿಕ MPIಯು ಪತ್ತೆ ಮಾಡಿದೆ. ಈ ಎಂಪಿಐ ಅನ್ನು 2010 ರಲ್ಲಿ OPHI ಮತ್ತು UNDP ಅಭಿವೃದ್ಧಿಪಡಿಸಿದೆ.
ಒಟ್ಟಾರೆಯಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಕಡಿತವು ನಗರಗಳನ್ನು ಮೀರಿಸಿದ ಮೂರು ದೇಶಗಳಲ್ಲಿ ಭಾರತವೂ ಸೇರಿದೆ. ವರದಿಯ ಪ್ರಕಾರ, ಇದು ಬಡವರ ಪರವಾದ ಅಭಿವೃದ್ಧಿಯ ಸೂಚಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.