ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿಯವರು ಎರಡನೇಯ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್ ಅನ್ನು ಶ್ಲಾಘಿಸಿದ್ದು, ಮುಂದಿನ ಐದು ವರ್ಷಗಳ ಭಾರತದ ಪ್ರಗತಿಗಾಥೆಯನ್ನು ವಿಸ್ತರಿಸುವ ನೀತಿ ದಾಖಲೆ ಎಂದು ಬಣ್ಣಿಸಿದ್ದಾರೆ. “ಇದು 2024 ರ ಭಾರತವಾಗಲಿದೆ” ಎಂದು ಮಾಜಿ ಹಣಕಾಸು ಸಚಿವರೂ ಆಗಿರುವ ಜೇಟ್ಲಿ ಸುದೀರ್ಘ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ.
“ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್, ಮಧ್ಯಮ ಅವಧಿಯ ನೀತಿ ದಾಖಲೆಯಾಗಿದೆ. ಇದು 2014-19ರಿಂದ ಪ್ರಧಾನಿ ನಿರ್ಮಿಸಿರುವ ಭಾರತದ ಬೆಳವಣಿಗೆಯ ಕಥೆಯ ಮಾರ್ಗಸೂಚಿಯನ್ನು ಇದು ವಿಸ್ತರಿಸುತ್ತದೆ. ಈ ಅವಧಿಯ ಗಮನಾರ್ಹ ಭಾಗವೆಂದರೆ 5 ವರ್ಷಗಳ ಸರಾಸರಿಯಲ್ಲಿ ಭಾರತವು ಶೇ.7.3ರಷ್ಟು ಬೆಳವಣಿಗೆಯನ್ನು ಕಂಡಿರುವುದು” ಎಂದಿದ್ದಾರೆ.
2019-20ರ ಕೇಂದ್ರ ಬಜೆಟ್ ಮಹತ್ವಾಕಾಂಕ್ಷೆಯ ಭಾರತಕ್ಕೆ ರಾಜಕೀಯ ನಿರ್ದೇಶನ ನೀಡಲಿದೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರು ಜೀವನದ ಮೂಲಭೂತ ಸೌಕರ್ಯಗಳನ್ನು ಪಡೆಯುವ ಗುರಿಯನ್ನು ಇದು ಹೊಂದಿದೆ. ಪ್ರಧಾನಿಯವರ ಮೊದಲ ಅವಧಿಯು ಉತ್ತಮ ಆಡಳಿತ ಮತ್ತು ಉತ್ತಮ ರಾಜಕೀಯ ಮಿಶ್ರಣವಾಗಿತ್ತು. ಆ ಟ್ರೆಂಡ್ ಈ ಬಜೆಟ್ ಮೂಲಕ ಮತ್ತೆ ಆರಂಭಗೊಂಡಿದೆ ಎಂದಿದ್ದಾರೆ.
ಕೈಗೆಟುಕುವ ದರದ ಮನೆಗಳನ್ನು ಖರೀದಿಸುವವರಿಗೆ ನೀಡಲಾಗಿರುವ ತೆರಿಗೆ ಪ್ರೋತ್ಸಾಹವನ್ನು ಶ್ಲಾಘಿಸಿದ ಜೇಟ್ಲಿ, “ಕೈಗೆಟುಕುವ ದರದ ಮನೆಗಳನ್ನು ಖರೀದಿಸಲು ಸಾಲ ಮಾಡುವವರಿಗೆ ಪ್ರಮುಖ ತೆರಿಗೆ ಪ್ರೋತ್ಸಾಹವನ್ನು ನೀಡಲಾಗಿದೆ. ಈ ಕ್ರಮವು ಕೇವಲ ಮಾರಾಟವಾಗದ ಕೈಗೆಟುಕುವ ಮನೆಗಳನ್ನು ಬಳಸಿಕೊಳ್ಳುವ ವ್ಯವಸ್ಥೆಗೆ ಸಹಾಯ ಮಾಡುವುದಲ್ಲದೇ, ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿಯನ್ನು ಒಳಸೇರಿಸುವಲ್ಲಿ ಸಹಕಾರಿಯಾಗಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.