ನವದೆಹಲಿ: ದೇಶದಾದ್ಯಂತ ಇರುವ ಸುಮಾರು 17 ತಾಣಗಳನ್ನು ಮಾದರಿ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸುವುದಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಯ ವೇಳೆ ಘೋಷಣೆ ಮಾಡಿದ್ದಾರೆ.
“ಅಪ್ರತಿಮ ಪ್ರವಾಸೋದ್ಯಮ ತಾಣಗಳು ಪ್ರವಾಸಿಗರ ಅನುಭವವನ್ನು ಹೆಚ್ಚಿಸುತ್ತದೆ, ಇದರಿಂದ ಈ ಸ್ಥಳಗಳಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರ ಭೇಟಿ ಹೆಚ್ಚಾಗುತ್ತದೆ” ಎಂದು ಸಚಿವೆ ತಮ್ಮ ಬಜೆಟ್ ಭಾಷಣದ ವೇಳೆ ಹೇಳಿದ್ದಾರೆ. 2019-20ನೇ ಸಾಲಿನಲ್ಲಿ ಪ್ರವಾಸೋದ್ಯಮ ಸಚಿವಾಲಯಕ್ಕೆ ಅವರು ಬಜೆಟಿನಲ್ಲಿ ರೂ.2,189.21 ಕೋಟಿ ಘೋಷಿಸಿದ್ದಾರೆ, 2018-19ರಲ್ಲಿ ಇದು ರೂ.2,113.48 ಕೋಟಿಗಳಷ್ಟಾಗಿತ್ತು.
ವಿಷಯಾಧಾರಿತ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಸ್ವದೇಶ್ ದರ್ಶನ್ ಯೋಜನೆಗೆ 2019-20ರಲ್ಲಿ ರೂ.1,106 ಕೋಟಿ ನಿಗದಿಪಡಿಸಲಾಗಿದೆ, ಇದು 2018-19ರಲ್ಲಿ ರೂ.1,100 ಕೋಟಿಯಾಗಿತ್ತು. ಧಾರ್ಮಿಕ ತಾಣಗಳನ್ನು ಅಭಿವೃದ್ಧಿಪಡಿಸಲು ರೂಪಿಸಲಾದ PRASAD ಯೋಜನೆಗೆ ರೂ. 160.50 ಕೋಟಿ ದೊರೆತಿದ್ದು, 2018-19ರಲ್ಲಿ ಇದು ರೂ.150 ಕೋಟಿಯಾಗಿತ್ತು.
ಉದ್ಯಮದ ಬೇಡಿಕೆಗಳ ಹೊರತಾಗಿಯೂ ಶೇ.18-28ರಷ್ಟು ಸರಕು ಮತ್ತು ಸೇವಾ ತೆರಿಗೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.