ಶ್ರೀನಗರ: 20 ವರ್ಷಗಳ ಹಿಂದೆ ಈ ದಿನ ಭಾರತೀಯ ಸೇನೆಯು ‘ನಾವು ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದೇವೆ’ ಎಂದು ಘೋಷಿಸಿತ್ತು. ಪಾಕಿಸ್ಥಾನವನ್ನು ಸೋಲಿನ ಕೂಪಕ್ಕೆ ತಲುಪುವಂತೆ ಮಾಡಿದ್ದ ಸೇನೆ ಟೈಗರ್ ಹಿಲ್ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿತ್ತು. ಪಾಕಿಸ್ಥಾನದೊಂದಿಗಿನ ಯುದ್ಧದ ಬಳಿಕ ಟೈಗರ್ ಹಿಲ್ ಎಂಬುದು ಭಾರತೀಯ ಯುದ್ಧದ ಸಂಕೇತವಾಗಿ ಹೋಗಿದೆ. ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಟೈಗರ್ ಹಿಲ್ನಲ್ಲಿ ಭಾರತದ ಧ್ವಜ ಹಾರುತ್ತಿದ್ದಂತೆಯೇ ಪಾಕಿಸ್ಥಾನಕ್ಕೆ ಸೋಲಿನ ಸ್ಪಷ್ಟ ಚಿತ್ರಣ ಸಿಕ್ಕಿತ್ತು.
ದ್ರಾಸ್ನ ಉತ್ತರಕ್ಕೆ ಕೆಲವು ಕಿ.ಮೀ ದೂರದಲ್ಲಿರುವ ಪರ್ವತದ ತುದಿಗಳಲ್ಲಿ ಭವ್ಯವಾಗಿ ನಿಂತಿದೆ ಟೈಗರ್ ಹಿಲ್ಸ್. ಈ ಬೆಟ್ಟವನ್ನು ವಶಪಡಿಸಿಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ, ಯಾಕೆಂದರೆ ಇದು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 2200 ಮೀಟರ್ ಮತ್ತು ಉತ್ತರದಿಂದ ದಕ್ಷಿಣಕ್ಕೆ ಸುಮಾರು 1000 ಮೀಟರ್ ಸಂಕೀರ್ಣ ವಿಸ್ತಾರವನ್ನು ಹೊಂದಿದೆ.
ಟೈಗರ್ ಹಿಲ್ನಲ್ಲಿ ಭಾರತದ ಧ್ವಜ ಹಾರಿ ಯುದ್ಧ ನಿರ್ಣಾಯಕ ಘಟ್ಟ ತಲುಪುತ್ತಿದ್ದಂತೆಯೇ ಭಯಗೊಂಡಿದ್ದ ಪಾಕಿಸ್ಥಾನ ಮರ್ಯಾದೆ ಉಳಿಸಿ ಎಂದು ಅಮೆರಿಕಾದ ಮೊರೆ ಹೋಗಿತ್ತು. ಇತ್ತ ಭಾರತೀಯ ಯೋಧರು ಟೈಗರ್ ಹಿಲ್ನ್ನು ವಶಪಡಿಸಿಕೊಳ್ಳುತ್ತಿದ್ದಂತೆಯೇ ಅತ್ತ ಅಮೆರಿಕಾಗೆ ತೆರಳಿದ್ದ ಪಾಕ್ ಪ್ರಧಾನಿ, ಹೇಗಾದರೂ ಮಾಡಿ ಪಾಕಿಸ್ಥಾನದ ಮರ್ಯಾದೆ ಉಳಿಸಿ ಎಂದು ಮೊರೆ ಇಟ್ಟಿದ್ದರು.
ಟೈಗರ್ ಹಿಲ್ ಅನ್ನು ಗೆಲ್ಲುವಲ್ಲಿ ಭಾರತೀಯ ವಾಯುಪಡೆಯ ಪೈಲಟ್ಗಳೂ ಸಹ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಸಮುದ್ರ ಮಟ್ಟದಿಂದ 17,400 ಅಡಿಗಳಷ್ಟು ಎತ್ತರದ ಗುರಿ ಹೊಂದಿದ್ದ ಲೇಸರ್ ಗೈಡೆಡ್ ಬಾಂಬ್ಗಳನ್ನು ಹಾಕುವ ಮೂಲಕ ಟೈಗರ್ ಹಿಲ್ನಲ್ಲಿದ್ದ ಪಾಕ್ ಪೋಸ್ಟ್ಗಳನ್ನು ಧ್ವಂಸಗೊಳಿಸಿದ್ದರು.
ಟೈಗರ್ ಹಿಲ್ ಅನ್ನು ವಶಪಡಿಸಿಕೊಂಡಿದ್ದು ಭಾರತೀಯ ಯೋಧರ ಪರಾಕ್ರಮದ ಸಂಕೇತಗಳಲ್ಲಿ ಒಂದು. 1999ರ ಜುಲೈನಲ್ಲಿ ಯೋಧರು ಟೈಗರ್ ಹಿಲ್ ಅನ್ನು ವಶಪಡಿಸಿಕೊಂಡು ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ಇಂದಿಗೆ ಆ ಘಟನೆ ಘಟಿಸಿ 20 ವರ್ಷಗಳು ಸಂದಿವೆ.
ಭಾರತೀಯ ಸೇನೆಯು ಟ್ವಿಟರ್ನಲ್ಲಿ ಟೈಗರ್ ಹಿಲ್ ಗೆದ್ದ ಸಂಭ್ರಮವನ್ನು ಸ್ಮರಿಸಿಕೊಂಡಿದೆ.
‘और हमने टाईगर हिल फतह किया’
अमर्त्य वीर पुत्र हो,
दृढ प्रतिज्ञ सोच लो।
प्रशस्त पुण्य पंथ है,
बढ़े चलो बढ़े चलो॥तोपखाने के विध्वंसक फायर और 18 ग्रेनेडियर के जाँबाज़ धावा ने टाईगर हिल फतह किया। ईस जीत की गाथा वर्षों तक प्रेरणा देंगी।#20YearsToKargilVijay pic.twitter.com/co11MeRSoV
— ADG PI – INDIAN ARMY (@adgpi) July 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.